ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಬರಲು ಬಾಕಿ ಇರುವ ಸೌಲಭ್ಯ ಕೊಡಿಸಲು ಪ್ರಯತ್ನಿಸಿ : ಕೆ.ಪಿ.ಜಾನಿ ಕಿವಿಮಾತು

Advt_Headding_Middle

ತಮ್ಮ ಮತ್ತು ತಮ್ಮ ಪಕ್ಷದ ಪ್ರಯತ್ನದಿಂದಲೇ ಕಟ್ಟಡ ಕಾರ್ಮಿಕರಿಗೆ ಕಿಟ್ ತರಿಸಿಕೊಟ್ಟಿದ್ದೆಂಬ ರೀತಿಯಲ್ಲಿ ವರ್ತಿಸುವ ನಾಯಕರುಗಳು ಕಟ್ಟಡ ಕಾರ್ಮಿಕರ ಮಂಡಳಿಯಿಂದ ಸದಸ್ಯರಿಗೆ ಬರಬೇಕಾದ ಬಾಕಿ ಇರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಿ ಎಂದು ಸುಳ್ಯ ತಾಲೂಕು ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ ಕಿವಿಮಾತು ಹೇಳಿದ್ದಾರೆ.
ನಿನ್ನೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕರಿಗೆ ಬಂದ ಆಹಾರ ಕಿಟ್ ಗಳನ್ನು ಶಾಸಕರ ನೇತೃತ್ವದಲ್ಲಿ ವಿತರಿಸುವ ಕಾರ್ಯ ನಡೆದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಜಾನಿಯವರು ” ಕಾರ್ಮಿಕ ಸಂಘದ ಒಂದು ವಿನಂತಿ ಏನೆಂದರೆ ಕಳೆದ ಎರಡು ಮೂರು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಂಡಳಿಯಿಂದ ಬರಬೇಕಿದ್ದ ಪೆಂಡಿಂಗ್ ಇರೋ ಚಿಕಿತ್ಸಾ ಧನಸಹಾಯಗಳು, ಎಕ್ಸ್ ಗ್ರೇಷಿಯಾ ಹಣ , ವಿದ್ಯಾರ್ಥಿ ವೇತನಗಳು, ಮದುವೆ ಧನಸಹಾಯ , ಹೆರಿಗೆ ಭತ್ಯೆ , ಮನೆ ನಿರ್ಮಾಣದ ಧನಸಹಾಯ, ಪಿಂಚಣಿ, ಕೋವಿಡ್ ಒಂದನೇ ಅಲೆಯಲ್ಲಿ ಘೋಷಿಸಲ್ಪಟ್ಟ ಸುಮಾರು ಒಂದು ಸಾವಿರದ ಐನೂರು ಮಂದಿಗೆ ಬಾಕಿಯಿರುವ ೫೦೦೦ ರೂ. ಕೋವಿಡ್ ಪರಿಹಾರದಂತಹ ಉಳಿದ ಕೆಲಸಗಳನ್ನು ಕೂಡಾ ಈ ನಾಯಕರುಗಳು ಮಾಡಿ ಕೊಡಬೇಕು”

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.