ಬೆಳ್ಳಾರೆ : ಕಳೆದು ಹೋಗಿದ್ದ ದಾಖಲೆಗಳನ್ನು ಮತ್ತು ಪರ್ಸ್ ಪ್ರಾಮಾಣಿಕವಾಗಿ ಮರಳಿಸಿದ ದಿನಕೂಲಿ ಕೃಷಿ ಕಾರ್ಮಿಕ

Advt_Headding_Middle

 

ಬೆಳ್ಳಾರೆಯ ಪನ್ನೆ ಎಂಬಲ್ಲಿ ಟ್ರಾಕ್ಟರ್ ಕೃಷಿ ಉಳುಮೆ ಕಾರ್ಯದಲ್ಲಿ ತೊಡಗಿದ್ದ ಕೃಷಿ ಯಂತ್ರಧಾರೆಯ ಚಾಲಕ ಮುರಳಿ ಎಂಬವರ ಪರ್ಸ್ ಹಾಗು ದಾಖಲೆಗಳು ಕಳೆದು ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಂದಿತ್ತು. ಆದರೆ ನೇಲ್ಯಮಜಲು ನಿವಾಸಿಯಾಗಿದ್ದ ಕೃಷಿ ಕಾರ್ಮಿಕ ಹಾಗು ಬೆಳ್ಳಾರೆ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಅಂಗಾರ ಎಂಬವರು ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಕೆಸರಿನಲ್ಲಿ ಒಂದು ಪರ್ಸ್ ತೇಲುತ್ತಿರುವುದು ಕಂಡು ಬಂತು. ಕೂಡಲೇ ಅದನ್ನು ಪರ್ಸ್ ತೆಗೆದು ದಾಖಲೆಗಳನ್ನು ನೋಡಿದಾಗ ಮುರಳಿ ಎಂಬವರದ್ದು ಎಂದು ಗೊತ್ತಾಯಿತು. ಅದೇ ಕ್ಷಣದಲ್ಲಿ ಮುರಳಿಯವರನ್ನು ಪನ್ನೆ ಇಸುಬು ಎಂಬವರ ಮುಖಾಂತರ ಸಂಪರ್ಕಿಸಿ ಮುರಳಿಯವರಿಗೆ ಹಸ್ತಾಂತರ ಮಾಡಲಾಯಿತು. ಈ ಸಮಯದಲ್ಲಿ ಅಂಗಾರರಿಗೆ ಮುರಳಿಯವರು ಕೃತಜ್ಞತೆಯನ್ನು ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.