ನಾಳೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರುಶನಕ್ಕೆ ಅವಕಾಶ

Advt_Headding_Middle

 

ಹರಿಕೆ ಸೇವೆಗಳಿಲ್ಲ, ಮಂಗಳಾರತಿಗೆ ಮಾತ್ರ ಅವಕಾಶ

ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.21 ರಿಂದ ಭಕ್ತರ ದರ್ಶನಕ್ಕೆ ಮುಚ್ಚಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜು.5 ರಿಂದ ಭಕ್ತರಿಗೆ ತೆರೆದುಕೊಳ್ಳಲಿದೆ.

ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಲಭ್ಯವಾಗಿದೆ. ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳು ಸರಕಾರದ ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಮಂಗಳಾರತಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.

ಭಕ್ತರಿಗೆ ಬೆಳಗ್ಗೆ 7.೦೦ರಿಂದ ಮಧ್ಯಾಹ್ನ 11.3೦ ತನಕ, ಮಧ್ಯಾಹ್ನ 12.15 – 1.3೦ ತನಕ ದರುಶನಕ್ಕೆ ಅವಕಾಶವಿದೆ. ಅಪರಾಹ್ನ 2.3೦ಯಿಂದ ಸಂಜೆ ೬.೩೦ ತನಕ ಭಕ್ತರು ಶ್ರೀ ದೇವರ ದರ್ಶನ ಪಡೆಯಬಹುದಾಗಿದೆ.
ಪ್ರತಿ 15ನಿಮಿಷಕ್ಕೊಮ್ಮೆ ಶ್ರೀ ದೇವರಿಗೆ ಮಂಗಳಾರತಿ ನಡೆಯಲಿದೆ. ಮಂಗಳಾರತಿಗೆ ಯಾವುದೇ ಪ್ರಸಾದ ನೀಡಲಾಗುವುದಿಲ್ಲ. ಗಂಧ ಪ್ರಸಾದ, ತೀರ್ಥ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ನೀಡಲಾಗುವುದಿಲ್ಲ. ಅಲ್ಲದೆ ದೇವಳದ ವಸತಿ ಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಬೋಜನವಿಲ್ಲ : ಭಕ್ತಾಧಿಗಳಿಗೆ ಬೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಪಂಚಕಜ್ಜಾಯ, ಲಡ್ಡುಪ್ರಸಾದ ವಿತರಣೆಯಾಗುದಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿ ದೇವಳಕ್ಕೆ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದ್ದು
ಶ್ರೀ ದೇವಳಕ್ಕೆ ರಾಜಗೋಪುರದ ಪ್ರಧಾನ ಧ್ವಾರದ ಮೂಲಕ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಉಳಿದ ಧ್ವಾರದಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ.ಹೊರ ಬರಲು ಮತ್ತೊಂದು ಧ್ವಾರವನ್ನು ಬಳಸಿಕೊಳ್ಳಲಾಗುತ್ತದೆ. ಪ್ರಧಾನ ಧ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕವನ್ನು ಬರೆಯಲಾಗಿದೆ. ಶ್ರೀ ದೇವಳದ ಹೊರಾಂಗಣ,ಒಳಾಂಗಣ ಸೇರಿದಂತೆ ದೇವಳದ ಸುತ್ತಲೂ ಸಾಮಾಜಿಕ ಅಂತರದ ಚೌಕವನ್ನು ಬರೆಯಲಾಗಿದೆ. ಭಕ್ತರು ಈ ಚೌಕದ ಮೂಲಕ ಸರದಿ ಸಾಲಿನಲ್ಲಿ ಭಕ್ತರು ದೇವಸ್ಥಾನ ಪ್ರವೇಶಿಸ ಬೇಕಾಗಿದೆ.
ಜು.4 ರಂದು ದೇವಳದ ಸಿಬ್ಬಂಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಸಿಬ್ಬಂಧಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ .

ಫೋಟೋ : ಪ್ರತಿರೂಪ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.