ಚೆಂಬು ಗ್ರಾಮದ ಮಹಿಳೆ ಮೃತ್ಯು: 9 ತಿಂಗಳ ಮಗುವಿನ ತಾಯಿ ಮೆದುಳಿನ ಕಾಯಿಲೆಗೆ ಬಲಿ

Advt_Headding_Middle

 

 

ಮೆದುಳಿಗೆ ಸಂಬಂಧಿಸಿದ ಖಾಯಿಲೆಯಿಂದ ಚೆಂಬು ಗ್ರಾಮದ ಮಹಿಳೆಯೊಬ್ಬರು ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.

ಬೆಂಗಳೂರಿನಲ್ಲಿ‌ ಉದ್ಯೋಗಿಯಾಗಿರುವ ಚೆಂಬು ಗ್ರಾಮದ ಶೇಷಪ್ಪ ನಾಯ್ಕರರವರ ಪುತ್ರಿ ಸೌಮ್ಯರವರನ್ನು ಮಡಿಕೇರಿಯ ವಸಂತ ಕುಮಾರ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರು ಮೆದುಳಿಗೆ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದು, 9 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೆಲವು ದಿನಗಳ ಹಿಂದೆ ಇವರ ಖಾಯಿಲೆ ಉಲ್ಬಣಗೊಂಡು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾದರು. ಅವರಿಗೆ 23 ವರ್ಷ ವಯಸ್ಸಾಗಿತ್ತು.
ಚೆಂಬು ಅಡ್ತಲ್ಕಜೆ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೃತರು ತಂದೆ ಶೇಷಪ್ಪ ನಾಯ್ಕ, ತಾಯಿ ರೇವತಿ, ಪತಿ ವಸಂತ ಕುಮಾರ್, ಪುತ್ರ ಶೌರ್ಯ ವಸಂತ ಹಾಗೂ ಅಪಾರ ಬಂಧು ಮಿತ್ರರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

*ಚಿಕಿತ್ಸೆಗೆ ನೆರವು ಕೋರಿದ್ದರು*

ಸೌಮ್ಯರವರ ಚಿಕಿತ್ಸೆಗೆ 3 ರಿಂದ 4 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದುದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಧನಸಹಾಯ ಕೋರಲಾಗಿತ್ತು, ಹಲವರು ಇದಕ್ಕೆ‌ ಸ್ಪಂದಿಸಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.