ಗಾಂಧಿನಗರದಲ್ಲಿ ಸ್ಕೈ ಫ್ಯಾನ್ಸಿ ಶುಭಾರಂಭ

Advt_Headding_Middle

ಸುಳ್ಯದ ಗಾಂಧಿನಗರದ ಗ್ಲೋಬಲ್ ಸೆಂಟರ್‌ನಲ್ಲಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು ಮತ್ತು ಹಾಜಿ ಅಬ್ದುಲ್ ರಝಾಕ್ ರಾಜಧಾನಿ ಜ್ಯುವೆಲ್ಲರ್‍ಸ್‌ರವರ ಮಾಲಕತ್ವದ ಸ್ಕೈ ಫ್ಯಾನ್ಸಿ ಇಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಮಾಡನ್ನೂರು ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್, ಎಂ. ವೆಂಕಪ್ಪ ಗೌಡ, ನ.ಪಂ. ಮಾಜಿ ಅಧ್ಯಕ್ಷರುಗಳಾದ ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್ ಅರಂಬೂರು, ಮಾಜಿ ಕೆಫೆಕ್ ನಿರ್ದೇಶಕ ಹಾಜಿ ಪಿ.ಎ.ಮಹಮ್ಮದ್, ನ.ಪಂ. ಸದಸ್ಯರುಗಳಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಪಟೇಲ್ ಮೆಡಿಕಲ್ ಶಾಪ್ ಇದರ ಮಾಲಕರಾದ ಬದ್ರುದ್ದೀನ್ ಪಟೇಲ್, ಹಾಜಿ ಐ. ಇಸ್ಮಾಯಿಲ್, ಮೆಟ್ರೋ ಹೋಟೆಲ್ ಮಾಲಕ ಹಾಜಿ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂಸ್ಥೆಯಲ್ಲಿ ೧ ಗ್ರಾಂ ಗೋಲ್ಡ್, ಮಹಿಳೆಯರ ಆಭರಣಗಳು, ಕಾಸ್ಮೆಟಿಕ್ ಐಟಂಗಳು, ಮಕ್ಕಳ ಆಟಿಕೆಗಳು, ಗಿಫ್ಟ್ ಐಟಂಗಳು ಲಭ್ಯವಿದೆ. ಮುಂದಿನ ಎರಡು ವಾರಗಳ ಕಾಲ ಪ್ರತಿ ಖರೀದಿಯಲ್ಲಿ ಶೇ. ೩೦ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.