Breaking News

ಕಲಾ ವಿಭಾಗ ಜ್ಞಾನದ ಸಾಗರ ಮತ್ತು ಅವಕಾಶದ ಹೆಬ್ಬಾಗಿಲು

Advt_Headding_Middle

 

ಟಿವಿಯಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆಯ ಕುರಿತು ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ದಿನಾಂಕಗಳನ್ನು ಘೋಷಿಸುತ್ತಿದ್ದರು. ಇತ್ತ ನಾನು ಕೋವಿಡ್ ಲಸಿಕೆ ಪಡೆಯುವ ಸರದಿ ಸಾಲಿನಲ್ಲಿದ್ದೆ. ಅವಾಗ ಮಾಸ್ಕ್ ಹಾಕಿಕೊಂಡಿರುವ ತಾಯಿ ತಕ್ಷಣ ನಮಸ್ತೆ ಸರ್ . ನನ್ನ ಮಗ ಎಸ್ ಎಸ್ ಎಲ್ ಸಿ ಪರೀಕ್ಷೆಯ ತಯಾರಿಯಲ್ಲಿದ್ದಾನೆ. ಮುಂದೆ ಯಾವ ಕ್ಷೇತ್ರ ಆಯ್ಕೆ ಮಾಡಿ ಅಧ್ಯಯನ ಮಾಡಿದರೆ ಉತ್ತಮ ಭವಿಷ್ಯ ಇದೆ ಸರ್… ಅವನಿಗೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನಕ್ಕೆ ಆಸಕ್ತಿ ಇಲ್ಲವಂತೆ ಮತ್ತೆ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿಲು ಆಸಕ್ತಿ ಇದೆಯಂತೆ. ಕಲಾವಿಭಾಗದಲ್ಲಿ ಅಧ್ಯಯನ ಮಾಡಿದರೆ
ಭವಿಷ್ಯದಲ್ಲಿ ಅವಕಾಶ ಇದೆಯಾ? ಅಂತ ಪ್ರಶ್ನಿಸತೊಡಗಿದರು. ಕಲಾ ವಿಭಾಗದ ಬಗ್ಗೆ ಕೇಳಿದಾಗ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಯೋಚಿಸಿದೆ.
ಹೌದು ಕಲಾ ವಿಭಾಗದಲ್ಲಿ ಅಧ್ಯಯನವನ್ನು ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ನಡೆಸಿದಾಗ ಜ್ಞಾನದ ಬೆಳಕು ಮೂಡಿ ಅವಕಾಶಗಳು ಬದುಕಿನಲ್ಲಿ ಸಿಗುತ್ತದೆ.
ಉನ್ನತ ಶಿಕ್ಷಣ ಪಡೆಯುವ ಉದ್ದೇಶ, ಕನಸು ಇದ್ದರೆ ತಮ್ಮಗೆಲ್ಲರಿಗೂ ಗೊತ್ತಿರುವಂತೆ ಕಲಾ ವಿಭಾಗ ಜ್ಞಾನದ ಸಾಗರ ಮತ್ತು ಅವಕಾಶದ ಹೆಬ್ಬಾಗಿಲು.
ಇಲ್ಲಿ ಗಂಭೀರವಾಗಿ ಯೋಜನಾಬದ್ಧವಾಗಿ ಅಧ್ಯಯನ ತೊಡಗಿಕೊಂಡಾಗ ಜ್ಞಾನದ ಜೊತೆ ಆಸಕ್ತಿಯ ವೃತ್ತಿಗಳನ್ನು ಆಯ್ಕೆಮಾಡಿ ಅತ್ಯುತ್ತಮ ಬದುಕನ್ನು ಕಟ್ಟುವ ಜೊತೆಯಲಿ ಗೌರವ, ಸ್ಥಾನಮಾನವನ್ನು ಸಮಾಜದಲ್ಲಿ ಪಡೆಯಬಹುದು. ಸಮಾಜಕ್ಕೆ ಕೊಡುಗೆಯನ್ನು ನೀಡಬಹುದು. ಉದಾಹರಣೆಗಳ ಮೂಲಕ ಆ ಬಗ್ಗೆ ಗಮನಿಸಿದಾಗ..
1.ದೇಶದ ಉನ್ನತಮಟ್ಟದ ಸರ್ಕಾರಿ (ಐಎಎಸ್) ಅಧಿಕಾರಿಯಿಂದ ಗ್ರಾಮ ಮಟ್ಟದ ಅಧಿಕಾರಿಗಳ ತನಕದ ಉದ್ಯೋಗ ಅವಕಾಶಗಳು.
2.ಅರೆಸರಕಾರಿ ,ಖಾಸಗಿ ಮತ್ತು ವಿದೇಶಿ ಉದ್ಯೋಗಳು.
3.ದೇಶದ ಸಾಂಸ್ಕೃತಿಕ ರಂಗ
4.ನ್ಯಾಯಾಂಗ 5.ಟಿವಿ, ರೇಡಿಯೋ,ಪತ್ರಿಕೋದ್ಯಮ
6.ಭಾಷೆಗಳ ಕ್ಷೇತ್ರ
7.ದೇಶದ ರಾಜಕೀಯ ಕ್ಷೇತ್ರ
8.ದೇಶದ ಮಿಲಿಟರಿ,ಪೊಲೀಸ್
9.ಸಾರಿಗೆ,ಸಂಪರ್ಕ 10.ಶಿಕ್ಷಣ
11.ಕೃಷಿ12.ಬ್ಯಾಂಕಿಂಗ್
13.ಸ್ವ ಉದ್ಯೋಗ
14.ವೖೆದ್ಯಕೀಯ ಕ್ಷೇತ್ರ
15.ಸಹಕಾರಿ ರಂಗ
16.ವ್ಯಾಪಾರ 16.ಅರಣ್ಯ
17. ಸಮಾಜ ಸೇವಾಕ್ಷೇತ್ರ ಇತ್ಯಾದಿ..
ಇಲ್ಲಿ ಅವಕಾಶಗಳನ್ನು ತಿಳಿದು ಕಲಾವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯದ ಜೊತೆಯಲ್ಲಿ ಗಂಭೀರ ಮತ್ತು ವ್ಯವಸ್ಥಿತ ರೀತಿಯಲ್ಲಿ ವೃತ್ತಿ ಮಾರ್ಗದರ್ಶನ ದೊರೆತಾಗ ಖಂಡಿತವಾಗಿಯೂ ಒಂದು ಉತ್ತಮ ಆಯ್ಕೆಯಾಗಿರುತ್ತದೆ.
ಇವತ್ತು ಎಲ್ಲಾವೂ ವ್ಯಾಪಾರೀಕರಣಗೊಂಡು ಮನುಷ್ಯ ಸಂಬಂಧ
ಸಡಿಲವಾಗಿರು ಸಂದರ್ಭದಲ್ಲಿ ಕಲಾ ವಿಭಾಗ ಮತ್ತೆ ಗಟ್ಟಿಗೊಳ್ಳಬೇಕಾದ ಅಗತ್ಯಇದೆ.ದೇಶ ಈ ವಿಭಾಗದಿಂದ ತುಂಬಾ ನಿರೀಕ್ಷೆ ಇಟ್ಟುಕೊಂಡಿದೆ.
ಇಲ್ಲಿ ಪ್ರಪಂಚದ ಇತಿಹಾಸ,ಭಾಷೆ,ಸಂವಿಧಾನ,
ಕಾನೂನು,ಸಾಮಾಜಿಕ,ಆರ್ಥಿಕ, ಧಾರ್ಮಿಕ,ಸಾಹಿತ್ಯ, ಕೌಟುಂಬಿಕ,ಸಾಂಸ್ಕ್ರತಿಕ ಮುಂತಾದ ಮನುಷ್ಯ ಸಂಬಂಧಗಳ ,ಮಾನವೀಯ ವಿಚಾರಗಳನ್ನು ಅಧ್ಯಯನ ನಡೆಸುವ ವಿಭಾಗ ಆಗಿದೆ. ಆದ ಕಾರಣ ವಿಶೇಷವಾಗಿ ಕಲಾ ವಿಭಾಗದಲ್ಲಿ ಅಧ್ಯಯನಕ್ಕೆ ಸೇರುವ ಪ್ರತಿಯೊಬ್ಬರಲ್ಲಿ ಹೊಸ ಕನಸನ್ನು ಮೂಡಿಸಿ ನನಸು ಮಾಡಲು ಪ್ರಯತ್ನ ಮಾಡಬೇಕು.ಆ ಮೂಲಕ ಕಲಾ ವಿಭಾಗದಲ್ಲಿ ಓದಿ ಜ್ಞಾನ ಉದ್ಯೋಗ,ಗೌರವ ತಂದು ಕೊಡುವ ಸ್ಥಿತಿಯನ್ನು ನಿರ್ಮಾಣ ಮಾಡಬೇಕು.
ಕಲಾವಿಭಾಗದಲ್ಲಿ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿದವರು, ಶಾಲಾ-ಕಾಲೇಜುಗಳಲ್ಲಿ ಬೋಧಿಸುವ ಇತಿಹಾಸ,ಅರ್ಥಶಾಸ್ತ್ರ,
ರಾಜ್ಯಶಾಸ್ತ್ರ ,ಸಮಾಜಶಾಸ್ತ್ರ,
ಕನ್ನಡ,ಇಂಗ್ಲೀಷ್ ,ಹಿಂದಿ, ಹಾಗೂ ಇತರ ಉಪನ್ಯಾಸಕರು/ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ತಾವು ಬೋಧಿಸುವ ಪಠ್ಯದ ಜೊತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಸಂದರ್ಭದಲ್ಲಿ ಸಮರ್ಪಕ ರೀತಿಯಲ್ಲಿ ಪೋಷಕರಿಗೆ ಹೆತ್ತವರಿಗೆ ಮಾರ್ಗದರ್ಶನ ನೀಡಿ ಮಕ್ಕಳ ಜ್ಞಾನ, ವೃತ್ತಿ ಬದುಕಿಗೆ ಭದ್ರ ಅಡಿಪಾಯ ಹಾಕಬೇಕು.

✍️ ಮೋಹನ್ ಚಂದ್ರ ಇತಿಹಾಸ ಉಪನ್ಯಾಸಕರು ನೆಹರು ಸ್ಮಾರಕ ಪದವಿಪೂರ್ವ ಕಾಲೇಜ್ ಅರಂತೋಡು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.