ಪಂಜ: ಅಳ್ಪೆ – ಚಿಂಗಾಣಿಗುಡ್ಡೆ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

Advt_Headding_Middle

 

ಪಂಜದ ಕೃಷ್ಣನಗರದಿಂದ ಅಳ್ಪೆ -ಚಿಂಗಾಣಿಗುಡ್ಡೆ ರಸ್ತೆಯು
ಶಾಸಕರ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಉದ್ಘಾಟನೆ ಸಮಾರಂಭವು ಇಂದು ನಡೆಯಿತು.
ಸಚಿವ ಎಸ್. ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಚಿಂಗಾಣಿಗುಡ್ಡೆ ಯುವಕ, ಯುವತಿ ಮಂಡಲ ಕಟ್ಟಡದಲ್ಲಿ ಜೈ ಕರ್ನಾಟಕ ಯುವಕ ಮಂಡಲ ,ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ ಮತ್ತು ರಸ್ತೆ ಫಲಾನುಭವಿಗಳ ವತಿಯಿಂದ ಸಚಿವ ಎಸ್ ಅಂಗಾರ ರಿಗೆ ಅಭಿನಂದನಾ ಸಮಾರಂಭ ಜರುಗಿತು. ಸಭಾ ಕಾರ್ಯಕ್ರಮದಲ್ಲಿಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿ ದೀಪ ಬೆಳಗಿದರು. ಚಿಂಗಾಣಿಗುಡ್ಡೆ
ದೈವಸ್ಥಾನದ ಗೌರವಾಧ್ಯಕ್ಷ ಜತ್ತಪ್ಪ ಗೌಡ ಕೋಡಿ , ಶಿವರಾಮಯ್ಯ ಕರ್ಮಜೆ , ಭಾ.ಜ.ಪ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಯುವಕ ಮಂಡಲದ ಲೋಕೇಶ್ ಕೋಡಿ , ಗುತ್ತಿಗೆದಾರ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿಂಚನ ಕೋಟಿಯಡ್ಕ ಪ್ರಾರ್ಥಿಸಿದರು. ನಿತ್ಯಾನಂದ ಮೇಲ್ಮನೆ ಸ್ವಾಗತಿಸಿದರು. ದಯಾನಂದ ಮೇಲ್ಮನೆ ಅಭಿನಂದನಾ ಭಾಷಣ ಮಾಡಿದರು. ಗುರುಪ್ರಸಾದ್ ತೋಟ ನಿರೂಪಿಸಿದರು. ಪ್ರಕಾಶ್ ಅಳ್ಪೆ ವಂದಿಸಿದರು. ೫೦೦ ಮೀಟರ್ ರಸ್ತೆ ಕಾಂಕ್ರಿಟೀಕರಣ ಗೊಂಡಿದ್ದು ೨೫ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ.
ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷ ಲಿಗೋಧರ ಆಚಾರ್ಯ, ನಿರ್ದೇಶಕ ಚಿನ್ನಪ್ಪ ಗೌಡ ಚೊಟ್ಟೆಮಜಲು,ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್, ಸದಸ್ಯರಾದ ಜಗದೀಶ್ ಪುರಿಯ,ನಾರಾಯಣ ಕೃಷ್ಣನಗರ, ಲಿಖಿತ್ ಪಲ್ಲೋಡಿ, ಶರತ್ ಕುದ್ವ,ಬಿ ಲಕ್ಷ್ಮಣ ಗೌಡ ಬೊಳ್ಳಾಜೆ, ಚಂದ್ರಶೇಖರ ದೇರಾಜೆ, ಶ್ರೀಮತಿ ವೀಣಾ ಪಂಜ , ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ ಪದ್ಮಯ್ಯ, ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭವಾನಿಶಂಕರ ಪಾಲೋಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ದಾಸಪ್ಪ ಗೌಡ ಮೇಲ್ಮನೆ, ಚಂದ್ರಶೇಖರ ಮೇಲ್ಪಾಡಿ, ಮೋನಪ್ಪ ಕೆಬ್ಲಾಡಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ, ಯುವಕ, ಯುವತಿ ಮಂಡಲ ಸದಸ್ಯರು, ಊರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.