Breaking News

ಐವರ್ನಾಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

 

ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್

ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸುವಂತೆ ಸರಕಾರಕ್ಕೆ ಮನವಿಗೆ ನಿರ್ಣಯ

ಐವರ್ನಾಡು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಜು.1 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಐವರ್ನಾಡು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಗತ್ಯವಿದ್ದು ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಪಬ್ಲಿಕ್ ಸ್ಕೂಲ್ ಸ್ಥಾಪಿಸುವಂತೆ ಸರ್ವಾನುಮತದಿಂದ ನಿರ್ಣಯಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಈಗ ತಾಲೂಕಿನಲ್ಲಿ 3 ಕಡೆ ಮಾತ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದುದರಿಂದ ವಿದ್ಯಾರ್ಥಿಗಳಿಗೆ ಸೀಟು ಸಿಗದೆ ತೊಂದರೆಯಾಗಿದೆ.
ಕೆಲವು ಗ್ರಾಮದಲ್ಲಿ ಒಂದೊಂದು ಕೆ.ಪಿ.ಎಸ್.ಸ್ಕೂಲ್ ಪ್ರಾರಂಭ ಮಾಡಿದರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದು ಸದಸ್ಯರು ಹೇಳಿದರು.
ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸುವಂತೆಯೂ ನಿರ್ಣಯ ಕೈಗೊಂಡು ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಐವರ್ನಾಡು ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್ ಆದರೆ ಹತ್ತಿರದ ಗ್ರಾಮಗಳಿಗೂ ಅನುಕೂಲಕರವಾಗಲಿದೆ.
ಈಗ ವಿದ್ಯುತ್ ಸಮಸ್ಯೆ ಇದೆ.
ಸಬ್ ಸ್ಟೇಷನ್ ಗೆ ಗ್ರಾಮದಲ್ಲಿ ಸರಕಾರಿ ಸ್ಥಳವಿದ್ದು ಅದನ್ನು ಮಂಜೂರುಗೊಳಿಸಬೇಕು. ಗ್ರಾಮದ ಜನರಿಗೆ,ಕೃಷಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ.
ಇತ್ತೀಚೆಗೆ ನಡೆದ ಸುದ್ದಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ವಿದ್ಯುತ್ ಸಬ್ ಸ್ಟೇಷನ್ ಬಗ್ಗೆ ಶಾಂತಾರಮ ಕಣಿಲೆಗುಂಡಿಯವರು ಪ್ರಶ್ನೆಯನ್ನು ಕೇಳಿದ್ದರು.
ಇದರ ಬಗ್ಗೆ ಸಹಕಾರಿ ಸಂಘದ ಅಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರು ಈಗಾಗಲೇ ವಿದ್ಯುತ್ ಸಬ್ ಸ್ಟೇಷನ್ ಬಗ್ಗೆ ಗ್ರಾಮಸ್ಥರ ಬೇಡಿಕೆಯಿದ್ದು ಮುಂದಿನ ದಿನದಲ್ಲಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಜನರಿಗೆ ಪ್ರಯೋಜನವಾಗುವಂತೆ ವಿದ್ಯುತ್ ಸಬ್ ಸ್ಟೇಷನ್ ಐವರ್ನಾಡು ಗ್ರಾಮದಲ್ಲಿ ಆಗುವಂತೆ ಸರಕಾರಕ್ಕೆ ಮನವಿ ನೀಡಲಾಗುವುದು ಮತ್ತು ಮೆಸ್ಕಾಂ ಜೊತೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಸದಸ್ಯರಾದ ದೇವಿಪ್ರಸಾದ್ ಎಸ್.ಎನ್. ,ನಳಿನಿ ಕೋಡ್ತೀಲು,ಶಶಿಕಲಾ ಎಲ್ಯಣ್ಣ ಗೌಡ ಕುಳ್ಳಂಪಾಡಿ, ಲೀಲಾವತಿ ಕುತ್ಯಾಡಿ, ಚಂದ್ರಕಲಾ ಜಬಳೆ, ಸತೀಶ್ ಜಬಳೆ, ಸುಂದರಲಿಂಗಂ, ಶರ್ಮಿಳಾ‌ ಚೀಮುಳ್ಳು, ಯೋಗೀಶ ಕಲ್ಲಗದ್ದೆ, ಮಮತ ಉದ್ದಂಪಾಡಿ,ರಂಜನ್ ಮೂಲೆತೋಟ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ , ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.