ಕಾರ್ಮಿಕರ ಫುಡ್ ಕಿಟ್ ವಿತರಣೆಯಲ್ಲೂ ಬಿಜೆಪಿ ರಾಜಕೀಯ : ಪಿ.ಸಿ.

Advt_Headding_Middle

 

ಸರಕಾರದ ಕಿಟ್‌ನ್ನು ನಾವೇ ಕೊಡುತ್ತಿದ್ದೇವೆಂದು ಹೇಳುವ ಬಿಜೆಪಿಯ ನಡೆ ನಾಚಿಗೆ ಗೇಡು : ಮುಂಡೋಡಿ

ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೋವಿಡ್ ಸಂಕಷ್ಟ ಸಮಯಕ್ಕೆ ನೀಡಿದ ಕಿಟ್ ವಿತರಣೆಯಲ್ಲಿಯೂ ಬಿಜೆಪಿ ರಾಜಕೀಯ ಮಾಡಿದ್ದು, ಬಿಜೆಪಿಯ ಈ ಕಾರ್ಯವನ್ನು ನೋಡಿದಾಗ ಯಾರೋ ರೆಡಿ ಮಾಡಿದ ಊಟವನ್ನು ಬಡಿಸುವ ಕಾರ್ಯ ಮಾಡಿ `ಜಾಣ` ಎನಿಸುವಂತೆ ಆಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇಂದು ಸುಳ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆಯಲಾದ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಮಿಕರಿಗೆ ಇಲಾಖೆಯಿಂದ ಆಹಾರ ಧಾನ್ಯಗಳ ಕಿಟ್ ವ್ಯವಸ್ಥೆ ಮಾಡಿದ್ದು ಸುಳ್ಯದಲ್ಲಿ ೨ ಸಾವಿರ ಮಂದಿ ಕಾರ್ಮಿಕರು ನೋಂದಾವಣೆ ಪಡೆದಿದ್ದಾರೆ.

ಈ ಕಿಟ್ ವಿತರಣೆ ತಾಲೂಕಿನ ಶಾಸಕರು ಮಾಡುವುದು ಕಾನೂನು. ಆದರೆ ಸುಳ್ಯದಲ್ಲಿ ಬಿಜೆಪಿ ಮತ್ತು ಅದರ ಇನ್ನೊಂದು ಮುಖ `ಸೇವಾ ಭಾರತಿ` ಹೆಸರಲ್ಲಿ ಪ್ರತೀ ಗ್ರಾಮದಲ್ಲಿ ಕಿಟ್ ವಿತರಣೆ ಮಾಡಿ ಬಿಜೆಪಿ ಪ್ರಚಾರ ಗಿಟ್ಟಿಸಿಕೊಂಡು ಕಾರ್‍ಯ ಮಾಡುತ್ತಿದೆ. ಕೆಲವೊಂದು ಸ್ಥಳದಲ್ಲಿ ಕಿಟ್ ವಿತರಣೆಯಲ್ಲಿ ಅವ್ಯವಸ್ಥೆಯಿಂದ ಕೂಡಿದೆ. ಕಾರ್ಮಿಕ ಇಲಾಖೆ ತಾನೂ ಕಿಟ್ ನೀಡಿ ತನ್ನ ಕೆಲಸ ಮುಗಿದಿದೆ ಎನ್ನುವ ಭಾವನೆಯಲ್ಲಿದೆ. ಕಾರ್ಮಿಕ ಇಲಾಖೆ ಬಿಜೆಪಿಯಿಂದ ಕಿಟ್ ನೀಡಿರುವುದನ್ನು ಕಂಡಾಗ ಇಲಾಖೆ ಇದಕ್ಕೆ ಬೆಂಬಲ ಎನ್ನುವಂತಾಗಿದೆ. ಬಿಜೆಪಿ ಈ ರೀತಿ ನಡೆದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವುದು ಇದೇ ಮೊದಲಲ್ಲ ಎಂದು ಅವರು ಹೇಳಿದರು.

ಬಿಜೆಪಿಗೆ ಕಾರ್ಮಿಕರ ಪರ ಒಲವು ನಿಜವಾಗಿಯೂ ಇದ್ರೆ ಕೆ.ಎಫ್.ಡಿ.ಸಿ.ಯಲ್ಲಿರುವ ಕಾರ್ಮಿಕರಿಗೆ ಲಸಿಕೆಯಲ್ಲಿ ಆದ್ಯತಾ ಪಟ್ಟಿಯಲ್ಲಿ ಒದಗಿಸುವಂತೆ ಮಾಡಲಿ. ಗ್ರಾಮ ಪಂಚಾಯತ್‌ಗಳಿಗೆ ಬಂದಿರುವ ರೂ.೫೦ ಸಾವಿರ ಹಣದಲ್ಲಿ ಕೊರೊನಾ ಸೋಂಕಿತರಿಗೆ ಫುಡ್ ಕಿಟ್ ನೀಡುವ ವ್ಯವಸ್ಥೆ ಮಾಡಿರುವುದಿಲ್ಲ. ಅಟೋ ರಿಕ್ಷಾ ಚಾಲಕರಿಗೆ ಬ್ಯಾಡ್ಜ್ ವಿನಾಯಿತಿ ನೀಡುವಂತೆಯೂ ಮಾಡಿಲ್ಲ. ಕಾಂಗ್ರೆಸ್ ಮಾಡಿದ ಕಾರ್ಯವನ್ನು ಇಟ್ಟುಕೊಂಡೇ ಬಿಜೆಪಿಯವರು ಕೆಲಸ ಮಾಡುತ್ತಾರಲ್ಲದೇ ಅವರಿಗೇ ಯಾವ ಯೋಚನೆಯೂ ಇಲ್ಲ ಎಂದು ಪಿ.ಸಿ.ಜಯರಾಮರು ಹೇಳಿದರು.
ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ “ಈಗಿನ ಸರಕಾರ ಆಡಳಿತದಲ್ಲಿ ಸಂವಿಧಾನ ಬದ್ಧ ಆಡಳಿತ ವ್ಯವಸ್ಥೆ ಇಲ್ಲ.

ಸರಕಾರ ಸೌಲಭ್ಯಗಳನ್ನು ಘೋಷಣೆ ಮಾಡಿದರೆ ಅದನ್ನು ಅನುಷ್ಠಾನ ಕಾರ್ಯಾಂಗ ಮಾಡಬೇಕು. ಆದರೆ ಇಲ್ಲಿ ಕಾರ್ಯಾಂಗ ಮಾಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಾರೆ ಇದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಇಂತಹ ಸಂಕಷ್ಟ ಕಾಲದಲ್ಲಿ ನಮ್ಮಿಂದಾದ ಸಹಾಯವನ್ನು ವ್ಯಕ್ತಿಗತವಾಗಿ ಹಣ ಹಾಕಿಕೊಂಡು ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಸರಕಾರದಿಂದ ಬಂದ ವ್ಯವಸ್ಥೆಯನ್ನು ನಾವೇ ಕೊಡುತ್ತೇವೆ ಎಂದು ಹೇಳುತ್ತಿರುವುದು ನಾಚಿಗೆ ಗೇಡು. ಬಿಜೆಪಿಯವರಲ್ಲಿ ಸಾಮಾಜಿಕ ಕಳಕಳಿ ಒಬ್ಬರಲ್ಲಿಯೂ ಇಲ್ಲ ಎಂದು ಅವರು ಹೇಳಿದರು.
ಹಳದಿ ರೋಗ ಪರಿಹಾರವೆಂದು ಬಜೆಟ್‌ನಲ್ಲಿ ಹಣ ಇಟ್ಟಿದ್ದಾರೆ. ಅದು ಯಾರಿಗೆ ಬಂತು? ಎಂದು ಭರತ್ ಮುಂಡೋಡಿ ಪ್ರಶ್ನಿಸಿದರು.

ಕಾಂಗ್ರೆಸ್ ಪ್ರಮುಖರಾದ ಎಸ್.ಸಂಶುದ್ದೀನ್, ಅನಿಲ್ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ಪಿ.ಎಸ್.ಗಂಗಾಧರ್, ಸುರೇಶ್ ಎಂ.ಹೆಚ್., ಗೋಕುಲ್ ದಾಸ್ ಕೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಶಶಿಧರ ಎಂ.ಜೆ., ರಾಧಾಕೃಷ್ಣ ಪರಿವಾರಕಾನ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.