ಬಳ್ಪ: ಗಿಡ ನಾಟಿ ಮತ್ತು ಸ್ವಚ್ಛತಾ ಕಾರ್ಯಕ್ರಮ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕು, ಗುತ್ತಿಗಾರು ವಲಯದ ಬಳ್ಪ ಒಕ್ಕೂಟ ಮತ್ತು ಗ್ರಾಮಪಂಚಾಯತ್ ಬಳ್ಪ ಇವುಗಳ ಜಂಟಿ ಆಶ್ರಯದಲ್ಲಿ ಬಳ್ಪ ಧರ್ಮ ಶಾಸ್ತಾವು ಭಜನಾ ಮಂಡಳಿಯ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕುಸುಮಾವತಿ ರೈ ಹಾಗೂ ಬಳ್ಪ ಶಾಲಾ ಮುಖ್ಯಅಧ್ಯಾಪಕರಾದ ಶ್ರೀಮತಿ ಗಿರಿಜಾರವರು ನೆರವೇರಿಸಿದರು. ಬಳಿಕ ಯುವಕಮಂಡಲ, ಭಜನಾಮಂದಿರ, ಶಾಲಾ ಆವರಣ, ಗ್ರಾಮ ಪಂಚಾಯತ್ ವಠಾರ ಹಾಗೂ ಬಳ್ಪ ಪೇಟೆಯಲ್ಲಿ ಸ್ವಚ್ಛತೆ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಸದಸ್ಯರಾದ ಚಂದ್ರಶೇಖರ ಅಕ್ಕೆನಿ, ಶ್ರೀಮತಿ ಶೈಲಜಾ ಎಣ್ಣೆಮಜಲ್, ಹರ್ಷಿತ್ ಕಾರ್ಜ, ಸುನಿತಾ ಸಂಪ್ಯಾಡಿ, ಶಶಿಕಲಾ ಸೂಂತಾರು, ಪಾರ್ವತಿ ನೇಲ್ಯಡ್ಕ, ಶಾಲಾ ಅಧ್ಯಾಪಕರಾದ ಆನಂದ.ವೈ, ಯಸ್. ಡಿ. ಯಂ. ಸಿ. ಅಧ್ಯಕ್ಷರಾದ ರವೀಂದ್ರ ಮುಡ್ಲ, ಭಜನಾ ಮಂಡಳಿಯ ಚಂದ್ರಕಾಂತ್. ಎಂ.ಎಂ, ಗಣೇಶ್ ಹೊಪ್ಪಾಳೆ, ಪ್ರಸಾದ್ ಹೊಪ್ಪಾಳೆ, ಜಯಕುಮಾರ್ ಹೊಪ್ಪಾಳೆ, ಒಕ್ಕೂಟದ ಸದಸ್ಯರಾದ ಮೋಹಿನಿ, ಸವಿತ, ದೀಪ್ತಿ, ಪರಮೇಶ್ವರಿ, ಜಲಜಾಕ್ಷಿ, ಮೊದಲಾದವರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಭವ್ಯ ಕಾಯರ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.