Breaking News

ಸರಕಾರದಿಂದ ಕಾರ್ಮಿಕರಿಗೆ ಬಂದ ಫುಡ್ ಕಿಟ್ ಬಿಜೆಪಿ ಪಕ್ಷದ ಹೆಸರಿನಲ್ಲಿ ವಿತರಣೆ ಸರಿಯಲ್ಲ

Advt_Headding_Middle

 

ಕಾರ್ಮಿಕ ಸಂಘದ ಪತ್ರಿಕಾಗೋಷ್ಠಿಯಲ್ಲಿ ಖಂಡನೆ


ಕೋವಿಡ್‌ನ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಆಹಾರ ಕಿಟ್ ಬಂದಿದ್ದು ಇದನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ವಿತರಣೆ ಮಾಡುತ್ತಿರುವ ಕ್ರಮ ಸರಿಯಲ್ಲ. ಈ ಕಾರ್ಯಕ್ರಮ ಪಂಚಾಯತ್ ಮೂಲಕ ನಡೆಸಬೇಕಿತ್ತು. ಮತ್ತು ಈ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರವೂ ನಡೆದಿದೆ ಎಂದು ಕಾರ್ಮಿಕ ನಾಯಕ ಕೆ.ಪಿ. ಜಾನಿ ಆರೋಪಿಸಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಪಿ. ಜಾನಿಯವರು, `’ಸರಕಾರದ ಕಾರ್ಯಕ್ರಮ ಸಚಿವರ ಮೂಲಕ ನಡೆದಿರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಕಿಟ್ ವಿತರಣಾ ಚಾಲನಾ ಕಾರ್ಯಕ್ರಮದಲ್ಲಿ ಶಾಸಕರು ಗ್ರಾಮ ಮಟ್ಟದಲ್ಲಿ ಪಂಚಾಯತ್ ಮೂಲಕ ವಿತರಿಸುವುದಾಗಿ ಹೇಳಿದ್ದರು. ಆದರೆ ಅವರು ಹೇಳಿದಂತೆ ಕಿಟ್ ವಿತರಣೆ ನಡೆಯದೇ ಬಿಜೆಪಿ ಪಕ್ಷದ ಕಾರ್ಯಕರ್ತರ ಮೂಲಕ ವಿತರಣೆ ನಡೆದಿದೆ. ಅಲ್ಲದೆ ಬಿಜೆಪಿ ಪಕ್ಷವೇ ವಿತರಣೆ ಮಾಡುತ್ತಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಇದು ಖಂಡನೀಯ. ಸುಳ್ಯದಲ್ಲಿ ಕಾರ್ಮಿಕ ಸಂಘದ ಬೀಜ ಬಿತ್ತಿದವರು ನಾವು.

ಸೌಜನ್ಯಕ್ಕಾದರೂ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯಬಹುದಿತ್ತು. ಕಾರ್ಮಿಕ ಸಂಘವನ್ನು ಸೇರಿಸಿಕೊಂಡೇ ಕಿಟ್ ವಿತರಣೆ ಮಾಡಬೇಕೆಂದು ಸರಕಾರದ ನಿರ್ದೇಶನ ಇದೆ ಎಂದು ಕಾರ್ಮಿಕ ಅಧಿಕಾರಿಗಳು ನಮಗೆ ಹೇಳಿದ್ದರೂ ಇಲ್ಲಿ ಅದರ ಪಾಲನೆ ಆಗದಿರುವುದು ಬೇಸರ ತರಿಸಿದೆ ಎಂದು ಅವರು ಹೇಳಿದರು.

ಒಂದು ಕಿಟ್‌ನ ಬೆಲೆ ೯೩೮ ರೂಪಾಯಿ ಆದರೆ ಬೆಂಗಳೂರಿನ ಎ.ಪಿ.ಎಂ.ಸಿ. ಮಾರು ಕಟ್ಟೆಯಲ್ಲಿ ಸಗಟು ವ್ಯಾಪಾರದ ದರ ೬೪೫. ಪ್ಯಾಕಿಂಗ್ ಇತ್ಯಾದಿ ಸೇರಿ ೬೬೨ ರೂ ಆಗುತ್ತದೆ. ಮೇಲ್ನೋಟಕ್ಕೆ ಈ ಒಂದು ಕಿಟ್‌ನಲ್ಲಿ ೨೭೬ ರೂ ಭ್ರಷ್ಟಾಚಾರ ನಡೆದಿರುವಂತೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಒಟ್ಟು ೧೫ ಕೋಟಿ ಹಣ ಭ್ರಷ್ಟಾಚಾರ ಆಗಿರಬಹುದೆಂದು ಅಂದಾಜಿಸುತ್ತೇವೆ. ಈ ಕುರಿತು ಸದ್ಯದಲ್ಲೇ ಲೋಕಾಯುಕ್ತ ತನಿಕೆ ನಡೆದು ಸ್ಪಷ್ಟತೆ ಹೊರಬರಬಹುದು ಎಂದು ಹೇಳಿದರು.
ಈ ಕಿಟ್‌ಗಿಂತಲೂ ಅಂದಾಜು ೨೫ ಪಟ್ಟು ಹೆಚ್ಚು ಮೊತ್ತದ ಸವಲತ್ತುಗಳು ಕಳೆದ ನಾಲ್ಕು ವರ್ಷಗಳಿಂದ ಪೆಂಡಿಂಗ್ ಇದೆ. ಅದನ್ನು ಕೊಡಿಯೆಂದು ಸರಕಾರದ ಮುಂದೆ ಕೇಳಿದರೂ ಕೊಡುತ್ತಿಲ್ಲ ಕಾರ್ಮಿಕರ ಮಂಡಳಿಯಲ್ಲಿರುವ ೮೦೦೦ ಕೋಟಿ ಹಣವಿದ್ದರೂ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಬಿಡುಗಡೆ ಮಾಡದೇ ಕಿಟ್ ಮಾತ್ರ ಬಿಡುಗಡೆ ಮಾಡಲು ತೋರಿದ ಆಸಕ್ತಿ ನೋಡಿದರೆ ಅದರ ಹಿಂದಿನ ತಾತ್ಪರ್ಯ ಅರ್ಥವಾಗುತ್ತದೆ.

ಕಾರ್ಮಿಕ ಸಂಘ ಆರಂಭಗೊಂಡು ೧೫ ವರ್ಷವಾಗಿದೆ. ಸಮಸ್ಯೆಯ ಬಗ್ಗೆ ಮನವಿಕೊಟ್ಟರೂ ತುಟಿ ಪಿಟಕ್ ಎನ್ನದವರು ಈಗ ಏಕಾ ಏಕಿ ಕಾರ್ಮಿಕರು ಮಾಸಿಕ ವಂತಿಕೆ ಕಟ್ಟುವ ಹಣದಿಂದ ಖರೀದಿಸಿದ ಕಿಟ್, ಒಂದು ರಾಜಕೀಯ ಪಕ್ಷದ ನಾಯಕರು ಮಾತ್ರ ತಮ್ಮ ಪಕ್ಷದ ಕಾರ್ಯಕ್ರಮದ ಮಟ್ಟಕ್ಕೆ ಇಳಿಸಿ ರಾಜಕೀಯ ಮಾಡಿದ್ದು ಸರಿಯೇ ? ಎಂದು ಪ್ರಶ್ನಿಸಿದರಲ್ಲದೆ, ತಾಲೂಕಿನಲ್ಲಿ ಕಾರ್ಮಿಕರಿಗೆ ವಿವಿಧ ಬಗೆಯ ಸವಲತ್ತುಗಳು ಇನ್ನೂ ಬರಲು ಬಾಕಿಯಿದೆ. ಈಗ ಕಿಟ್ ತಂದು ನೀಡುವವರು ತರ ಸವಲತ್ತುಗಳನ್ನು ಕಾರ್ಮಿಕರಿಗೆ ಕೊಡಿಸಲಿ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ನಾಗರಾಜ ಮೇಸ್ತ್ರೀ, ಶ್ರೀಧರ ಕೆ.ಕೆ. ಸಂಪಾಜೆ, ಬಿ.ಆರ್. ಪ್ರಸಾದ್, ನಾಗರಾಜ ಕಲ್ಲುಮುಟ್ಲು, ಗಣೇಶ್ ಕೆ, ಶಿಲ್ಪಾಚಾರಿ ಕಾಂತಮಂಗಲ, ಶಿವರಾಮ ಗೌಡ ಕೇರ್ಪಳ, ವಿಶ್ವನಾಥ ನೆಲ್ಲಿಬಂಗಾರಡ್ಕ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.