Breaking News

ಕೊಡಿಯಾಲಬೈಲು ಸ್ಮಶಾನದಲ್ಲಿ ಶವ ಸುಡುವಾಗ ದುರ್ವಾಸನೆ : ಗ್ರಾ.ಪಂ. ಎದುರು ಸ್ಥಳೀಯರ ಪ್ರತಿಭಟನೆ

Advt_Headding_Middle

 

ನಾಳೆ ಗ್ರಾ.ಪಂ. ನಲ್ಲಿ ತುರ್ತು ಸಭೆ ಕರೆದು ಚರ್ಚೆಗೆ ನಿರ್ಧಾರ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ವಿಮುಕ್ತಿ ಧಾಮ ರುದ್ರಭೂಮಿ ಯಲ್ಲಿ ಶವ ಸುಡುವಾಗ ದುರ್ವಾಸನೆ ಬೀರುತ್ತಿದ್ದು ಆಹಾರ ಸೇವನೆ ಸೇರಿದಂತೆ ಇನ್ನಿತರ ತೊಂದರೆಯಾಗುತ್ತಿದೆಂದು ಇದನ್ನು ತಪ್ಪಿಸಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಇಂದು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.

 

ಸುಮಾರು 50 ಕ್ಕೂ ಹೆಚ್ಚು ಮಂದಿ ಇಂದು‌ ಬೆಳಗ್ಗೆ ಗ್ರಾ.ಪಂ. ಎದುರು ಸೇರಿ ಶವ ಸುಡು ಮುಂಜಾಗರುತೆ ಕ್ರಮ ವಹಿಸದಿರುವುದರಿಂದ ಕರಟಿದ ವಾಸನೆಯೊಂದಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು.

 

ಈ ವೇಳೆ ಗ್ರಾ.ಪಂ. ಗೆ ಬಂದ ಅಧ್ಯಕ್ಷೆ, ಉಪಾಧ್ಯಕ್ಷ ರು ಸಮಸ್ಯೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬಳಿಕ‌ ನಾಳೆ (ಜು.6 ರಂದು) ತುರ್ತು ಸಭೆ ನಡೆಸಿ ಚರ್ಚೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದರು
ನಾಳಿನ ಸಭೆಗೆ ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷ ರು ಹಾಗೂ ಪ್ರಮುಖರನ್ನು ಆಹ್ವಾನಿಸಿರುವುದಾಗಿ ತಿಳಿದು ಬಂದಿದೆ.

 

ಬಳಿಕ ಪ್ರತಿಭಟನಾಗಾರರು ತಾಲೂಕು ಕಚೇರಿಗೆ ಬಂದು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.