Breaking News

ಊರುಸಾಗು ಸೀತಾರಾಮ ರೈ ನಿಧನ

Advt_Headding_Middle

 

ಮುರುಳ್ಯ ಗ್ರಾಮದ ಊರುಸಾಗು ದಿ. ರಾಮಣ್ಣ ರೈ ಯವರ ಪುತ್ರ, ಮುರುಳ್ಯ ಎಣ್ಮೂರು ಮತ್ತು ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವಕೀಲ ಸೀತಾರಾಮ ರೈ ಅವರು ಅಲ್ಪಕಾಲದ ಅಸೌಖ್ಯದಿಂದ ಜು. 3 ರಂದು ಸ್ವಗೃಹದಲ್ಲಿ ನಿಧನರಾದರು ಅವರಿಗೆ 65 ವರ್ಷ ವಯಸ್ಸಾಗಿತ್ತು. ವಕೀಲ ಸೀತರಾಮ ರೈ ಎಂದೇ ಜನಾನುರಾಗಿಯಾಗಿದ್ದ ಅವರು ಕಾಲೇಜು ಜೀವನದಲ್ಲಿ ಒಳ್ಳೆಯ ಕ್ರೀಡಾಪಟುವಾಗಿ, ಹೈಜಂಪ್, ಬ್ಯಾಡ್ಮಿಂಟನ್ ನಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ್ದರು.

ರಂಗಭೂಮಿ ಕಲಾವಿದರಾಗಿ, ಹಲವು ವರ್ಷಗಳ ಕಾಲ ಹಾಸ್ಯ ಕಲಾವಿದರಾಗಿ, ಸ್ತ್ರೀಪಾತ್ರ, ಹೀರೋ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಯಕ್ಷಗಾನ ಕಲಾವಿದರಾಗಿ ಪೌರಾಣಿಕ ,ಸಾಮಾಜಿಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದರು. ಎಡಮಂಗಲ ಸಹಕಾರಿ ಸಂಘದಲ್ಲಿ ೧೦ ವರ್ಷ ಸೇವೆ ಸಲ್ಲಿಸಿ, ಬಳಿಕ ಮುರುಳ್ಯ ಎಣ್ಮೂರು ಸೊಸೈಟಿಯಲ್ಲಿ ಉಪ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಸಂಘವನ್ನು ಯಶಸ್ವಿಯತ್ತ ಕೊಂಡೊಯ್ಯುವಲ್ಲಿ ಪ್ರಮುಖ -ಪಾತ್ರ ವಹಿಸಿದ್ದರು. ಅವರು ಕೊಡುಗೈ ದಾನಿಯಾಗಿ, ಕ್ರೀಡಾ ಪ್ರೋತ್ಸಾಹಕರಾಗಿದ್ದರು. ಅದಲ್ಲದೆ ಶ್ರೀದುರ್ಗಾ ಕಲಾಕೇಂದ್ರ ಅಲೆಕ್ಕಾಡಿ ಇದರ ಅಧ್ಯಕ್ಷರಾಗಿಯೂ, ಶ್ರೀದುರ್ಗ ಸ್ಪೋರ್ಟ್ಸ್ ಕ್ಲಬ್ ಇದರ ಗೌರವಾಧ್ಯಕ್ಷರಾಗಿ ದುಡಿದಿದ್ದರು.
ಮೃತರು ಪತ್ನಿ ನಳಿನಿ ಎಸ್. ರೈ ಮೂಡಾಯೂರು ಗುತ್ತು, ಪುತ್ರರಾದ ಯಶಸ್ ರೈ ಯು., ಶ್ರೇಯಸ್ ರೈ ಯು., ಸೊಸೆ ಸ್ವಪ್ನಾ ವೈ. ರೈ ಹಾಗೂ ಕುಟುಂಬಸ್ಥರು ಅಪಾರ ಬಂಧುಗಳನ್ನು ಅಗಲಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.