ಭಾಸ್ಕರ ಕೋಡಿಂಬಾಳರವರ ಚೊಚ್ಚಲ ಕೃತಿ `ಬುತ್ತಿಯೂಟ’ ಬಿಡುಗಡೆ

Advt_Headding_Middle

ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರ `ಬುತ್ತಿಯೂಟ’ ಎಂಬ ಚೊಚ್ಚಲ ಕೃತಿಯನ್ನು ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಚಾರ್ಯ ವಿದ್ವಾನ್ ಟಿ.ಜಿ. ಮುಡೂರುರವರು ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ವಿದ್ವಾನ್ ಟಿ.ಜಿ. ಮುಡೂರುರವರು ಜಗತ್ತಿನಲ್ಲಿ ಯಾರೊಬ್ಬರೂ ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ, ಎಲ್ಲರೂ ಪ್ರಾಮುಖ್ಯರೇ ಆಗಿರುತ್ತಾರೆ ಎಂದರು.

ತನ್ನ ಶಿಷ್ಯ ಭಾಸ್ಕರ್‌ರವರು ರಚಿಸಿರುವ ಬುತ್ತಿಯೂಟ ಕೃತಿಯು ಈ ನನ್ನ ಮಾತನ್ನು ಇಂಬುಕರಿಸುತ್ತದೆ. ಬುತ್ತಿಯೂಟದಲ್ಲಿ ಬಂದು ಹೋಗುವ ಶಿಕ್ಷಕರು, ಊರ ಭೂಮಾಲಿಕರು, ವ್ಯಾಪಾರಸ್ಥರು, ಶ್ರೀಮಂತ ವರ್ಗದವರು ಎಷ್ಟು ಮುಖ್ಯವಾಗುತ್ತಾರೋ, ಅಂತೆಯೇ ಅದರಲ್ಲಿ ಬರುವ ಪಂಪ್ ರಿಪೇರಿ ಮಾಡುವ ಪಿಟ್ಟರ್ ನಾಗಪ್ಪಣ್ಣ, ದನ ಮೇಯಿಸುವ ಬಪ್ಪು ಸಾಹೇಬ, ಅಡಿಕೆ ತೋಟಕ್ಕೆ ಮದ್ದು ಸಿಂಪಡಿಸುವ ಕೂಲಿಯಾಳು ಬೆಳ್ತ, ಟೈಲರ್ ತಿಮ್ಮಪ್ಪಣ್ಣ, ಹೊಟೇಲ್‌ನ ಸಪ್ಲ್ಯೇಯರ್, ಮಡಿಕೆ ತಯಾರಿಸುವ ಕುಂಬಾರಣ್ಣ ಎಲ್ಲರೂ ಪ್ರಾಮುಖ್ಯರೇ ಆಗುತ್ತಾರೆ. ಲೇಖಕರು ತನ್ನ ಬಾಲ್ಯದಲ್ಲಿ ಎದುರುಗೊಂಡ ಕೆಲವೊಂದು ಸನ್ನಿವೇಶಗಳನ್ನು ಬಹಳ ಸ್ವಾರಸ್ಯಕರವಾಗಿ ಚಿತ್ರಿಸಿದ್ದು, ಓದುಗರನ್ನು ಜೀವನದಲ್ಲಿ ಸಂತೋಷವನ್ನು ಹೊಂದಬಹುದಾದ ಸರಳವಾದ ಇನ್ನೊಂದು ಮಗ್ಗುಲಿಗೆ ಕೊಂಡೊಯ್ಯುತ್ತಾರೆ. ಈ ಕೃತಿಯ ಉದ್ದಕ್ಕೂ ನವಿರಾದ ಹಾಸ್ಯ ಓದುಗರಲ್ಲಿ ಮಿಂಚಿ ಮಾಯವಾಗುವಂತೆ ಸಾಹಿತ್ಯವನ್ನು ಜೋಡಿಸಿ ಕೊಂಡಿರುತ್ತಾರೆ ಎಂದ ಅವರು ತನ್ನ ಶಿಷ್ಯನು ಇನ್ನಷ್ಟು ಕೃತಿಗಳನ್ನು ರಚಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ಫೊಟೆಕ್‌ನ ಮಾಲಕ ಸವಿತಾರ ಮುಡೂರು ಪ್ರಾಸ್ತಾವಿಕವಾಗಿ ಮಾತನಾಡಿ ಈಗಿನ ಕಾಲದಲ್ಲಿ ಹಣ, ಉದ್ಯೋಗಕ್ಕಾಗಿ ಮಾತ್ರ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಾರೆಯ ವಿನಃ ಜ್ಞಾನ ಸಂಪಾದನೆಗಾಗಿ ಓದುವವರು ಬಹಳ ವಿರಳ. ಓದದೇ ಬರೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ತನ್ನ ಉದ್ಯೋಗದ ಎಡೆಯಲ್ಲಿ ಭಾಸ್ಕರ್ ಅವರು ಕೃತಿಯೊಂದನ್ನು ರಚಿಸಿ ಬಿಡುಗಡೆಗೊಳಿಸಿರುವುದು ಸಂತೋಷದ ಸಂಗತಿ. ಇವರ ಈ ಕೆಲಸ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಪಂಜ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿರ್ಮಲ, ಶುಭಲತಾ ಕೆ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾಸ್ಕರ್ ಕೋಡಿಂಬಾಳರವರ ಮನೆಯವರು ಹಾಗೂ ಹಿತೈಷಿಗಳು ಮುಡೂರು ದಂಪತಿಯನ್ನು ಸನ್ಮಾನಿಸಿ ಗುರುವಂದನೆಯನ್ನು ಸಲ್ಲಿಸಿದರು.
ಬುತ್ತಿಯೂಟ ಕೃತಿಗೆ ಕೃಷಿಕ ಲೇಖಕ, ಸಾಹಿತಿ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲರವರು ಸುಂದರವಾದ ಮುನ್ನುಡಿಯನ್ನು ಬರೆದಿದ್ದು, ಬೆನ್ನುಡಿಯನ್ನು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ.ಯವರು ಬರೆದಿರುತ್ತಾರೆ. ಮುಖಪುಟ ವಿನ್ಯಾಸ ಹಾಗೂ ಒಳಪುಟಗಳ ರೇಖಾಚಿತ್ರವನ್ನು ಕೌಶಿಕ್ ಕೆ.ಎಂ. ಕುಳ ರಚಿಸಿದ್ದಾರೆ. ಮುದ್ರಣವನ್ನು ಭರತ್ ಪ್ರಿಂಟರ್ಸ್ ಕಲ್ಲಾರೆರವರು ಮಾಡಿರುತ್ತಾರೆ. ಸವಿತಾ ಮುಡೂರು ಸ್ವಾಗತಿಸಿ ವಂದಿಸಿದರು. ಕೌಶಿಕ್ ಕೆ.ಎಂ. ಕುಳ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.