ಕೆ.ಎಫ್.ಡಿ.ಸಿ.ನಿವೃತ್ತ ಉದ್ಯೋಗಿ ಜನಾರ್ಧನ ಬಿ.ಕೆ. ನಿಧನ

Advt_Headding_Middle

 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುಳ್ಯ ರಬ್ಬರ್  ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜನಾರ್ದನ ಬಿ.ಕೆ.ಯವರು ಅಲ್ಪ ಕಾಲದ ಅಸೌಖ್ಯದಿಂದ ಜು. 5 ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 60 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಮತ್ತು ಪುತ್ರಿ ಹಾಗೂ ಅಳಿಯನನ್ನು ಅಗಲಿದ್ದಾರೆ.
ಸೋಮವಾರಪೇಟೆಯವರಾದ ಇವರು ಸುಮಾರು 35 ವರ್ಷಗಳ ಕಾಲ ಸುಳ್ಯ ಕೆ.ಎಫ್.ಡಿ.ಸಿ.ಯಲ್ಲಿ ಸೇವೆ ಸಲ್ಲಿಸಿದ್ದರು.
ಸುಳ್ಯ ರಬ್ಬರು ವಿಭಾಗದ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಜವಾನರಾಗಿದ್ದ ಇವರು ಜಮೆದಾರರಾಗಿ ಮುಂಭಡ್ತಿ ಹೊಂದಿ ಐವರ್ನಾಡು ರಬ್ಬರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಜೂ.30 ರಂದು ಸೇವಾ ನಿವೃತ್ತಿ ಹೊಂದಿದ್ದರು.
ಸುಳ್ಯದ ಅಂಬಟೆಡ್ಕದಲ್ಲಿ ಕೆ.ಎಫ್.ಡಿ.ಸಿ.ಕ್ವಾಟ್ರಸ್ ನಲ್ಲಿ ಪತ್ನಿಯೊಂದಿಗೆ ವಾಸವಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.