ಸರಕಾರದ ಸವಲತ್ತು ಪಕ್ಷದ ಮುಖಾಂತರ ವಿತರಣೆ

Advt_Headding_Middle

 

ಸ್ಪಷ್ಟ ನಾಗರಿಕ ಹಕ್ಕುಗಳ ಉಲ್ಲಂಘನೆ : ಎ.ಎ.ಪಿ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ ಆರೋಪ

ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಾರ್ಮಿಕರಿಗೆ ಕೊಡ ಮಾಡುತ್ತಿರುವ ಆಹಾರ ಧಾನ್ಯ ಕಿಟ್ ಗಳನ್ನು ಬಿ ಜೆ ಪಿ ಪಕ್ಷದ ಮುಖಾಂತರ ನೀಡುತ್ತಾ ಇರುವುದು ಸ್ಪಷ್ಟ ನಾಗರಿಕ ಹಕ್ಕುಗಳ ಉಲ್ಲಂಘನೆ ಎಂದು ಅಮ್ ಅದ್ಮಿ ಪಕ್ಷದ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ ಆರೋಪಿಸಿದ್ದಾರೆ.

ಸರಕಾರದಿಂದ ಕೊಡುವ ಸವಲತ್ತುಗಳನ್ನು ಆಯಾ ಇಲಾಖೆಯ ಅಡಿಯಲ್ಲಿ ವಿತರಣೆಯಾಗಬೇಕೆಂಬುದು ಸರಕಾದ ನಿಯಮ. ಅದಕ್ಕಾಗಿಯೇ ಸರಕಾರ ವಿತರಣೆ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಯ ಪಂಚಾಯತ್ ಮೂಲಕ ಸರಕಾರದ ಅಧಿಕೃತವಾಗಿ ವಿತರಣೆ ಮಾಡುವ ವ್ಯವಸ್ಥೆ ಇದೆ, ಅದಕ್ಕಾಗಿ ಜನರು ತೆರಿಗೆ ಆದಾರಿತ ಸಂಬಳ ಕೊಟ್ಟು ನೇಮಕ ಮಾಡಿದ ಪ್ರತಿ 100 ಜನರಿಗೆ ಒಬ್ಬ ಅಧಿಕಾರಿ ವ್ಯವಸ್ಥೆ ನಮ್ಮ ಸರಕಾರದಲ್ಲಿದೆ.,ನಿಯಮ ಉಲ್ಲಂಘನೆಯೊಂದಿಗೆ ಪಕ್ಷ ಒಟ್ ಬ್ಯಾಂಕ್ ಪ್ರಚಾರಕ್ಕಾಗಿ ಕಿಟ್ ವಿತರಣೆ ಮಾಡುವುದಾದರೆ ಕಾರ್ಮಿಕ ವರ್ಗದವರಿಗೆ ಅರ್ಹವಾಗಿ ಸಿಗಬೇಕಾದ, ಮದುವೆ ಸಹಾಯಧನ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಅನಾರೋಗ್ಯ ಪೀಡಿತರಿಗೆ ಸಹಾಯ ಧನ, ಅಪಘಾತ ಸಂಭವಿಸಿದರೆ ವಿಮೆ, ಇಂತಹ ಕೆಲವು ಅರ್ಜಿಗಳು ನಮ್ಮ ತಾಲೂಕಿನಲ್ಲಿ ಇನ್ನೂ ಪರಿಹಾರ ಸಿಗದೆ ಸ್ತಬ್ಧವಾಗಿದೆ. ಕೆಲವರಿಗೆ ಹಲವಾರು ತಿಂಗಳಿಂದ ಬಾರದ ವಿಧವ ವೇತನ,ಸಂದ್ಯಾ ಸುರಕ್ಷ,ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್,ಸರಕಾರಿ ವಿದ್ಯಾರ್ಥಿ ಸಾಲಗಳು, ಇಲಾಖವಾರು ಕೊಡ ಮಾಡುವ ನಿಗಮ ಸಾಲ ಸೌಲಭ್ಯಗಳು*, ಅಂಗವಿಕಲರಿಗೆ ಕೂಡಮಾಡುವ ಅನೇಕ ಸೌಲಭ್ಯಗಳು,ಸ್ತಬ್ಧ ವಾಗಿರುವ ಎಂಡೋ ಪೀಡಿತ ಜನರಿಗೆ ಪರಿಹಾರ,ಪ್ರಧಾನ ಮಂತ್ರಿಆವಾಜ್ ಯೋಜನೆ ಅಡಿಯಲ್ಲಿ ದಾಖಲೆ ಸಮೇತ ಮನೆಕಟ್ಟಿ ಅನುದಾನಕ್ಕೆ ಕಾಯಿವುತಿರುವ ಫಲಾನುಭವಿಗಳಿಗೆ ಹಣಕಾಸಿನ ವ್ಯವಸ್ಥೆ, ಈಗ ಪಟ್ಟಿ ಬೆಳೆಯುತ್ತ ಹೋಗಬಹುದು, ಇದನ್ನು ಸಹ ಪಕ್ಷ ಮುತ್ತುವರ್ಜಿ ವಹಿಸಿ,ಫಲಾನುಭವಿಗಳಿಗೆ ಕೊಟ್ಟು ನಿಮ್ಮ ಬದ್ದತೆ ಉಳಿಸಿ ಕೊಳ್ಳಲು ಸಾದ್ಯವೆ ? ಸರಕಾರದ ಕಿಟ್ಟನ್ನು ತಮ್ಮ ಪಕ್ಷ ಕೊಟ್ಟಂತೆ ಬಿಂಬಿಸಲು ಹೊರಟ ಬಿಜೆಪಿ ಪಕ್ಷದ ನಿಲುವು ಹಾಸ್ಯಾಸ್ಪದ.
ರಾಜ್ಯದ ಹಲವು ಕಡೆ ಕಿಟ್ ವಿತರಣೆಯಲ್ಲಿ ಅವ್ಯವಹಾರ ಮತ್ತು ಕಳಪೆ ಅಹಾರ ಧಾನ್ಯ ವಿತರಣೆ ಬಗ್ಗೆ ದೂರು ದಾಖಲಾಗಿದೆ.
ಒಂದೆರಡು ದೂರು ಲೋಕಾಯುಕ್ತಕ್ಕೂ ದಾಖಲಾಗಿದೆ.
ಸುಳ್ಯ ತಾಲೂಕಿಗೆ ಸುಮಾರು 5000 ಕಿಟ್ ಗಳು ಬಂದ ಮಾಹಿತಿ ಇದೆ. ಸುಳ್ಯ ತಾಲೂಕಿನಿಂದ 5000 ಜನ ಕಾರ್ಮಿಕ ಇಲಾಖೆ ಅಡಿಯಲ್ಲಿ ನೊಂದಣಿ ಆಗಿರಬಹುದೆ ?ಎಂಬ ಸಂಶಯವೂ ಇದೆ.
ಒಟ್ಟಿನಲ್ಲಿ ಬಿಜೆಪಿ ಪಕ್ಷ ಮಾಡಿದ ಈ ಪ್ರವೃತ್ತಿಯ ಬಗ್ಗೆ ಕಾರ್ಮಿಕ ಇಲಾಖೆ ಉತ್ತರಿಸಬೇಕಾಗಿದೆ ಎಂದವರು ಹೇಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.