Breaking News

ಕೊಡಿಯಾಲಬೈಲು ರುದ್ರಭೂಮಿ ಇಂದಿನಿಂದ ಉಬರಡ್ಕ ಗ್ರಾ.ಪಂ. ಉಸ್ತುವಾರಿಕೆ

Advt_Headding_Middle

 

ಗ್ರಾಮದ ಶವಗಳನ್ನು ಮಾತ್ರ ಸುಡುವಂತೆ ತುರ್ತು ಸಭೆಯಲ್ಲಿ ಒತ್ತಾಯ

ಸ್ಮಶಾನದಲ್ಲಿ ಸುಡಲಾದ ಶವದ ಲೆಕ್ಕ ಎಂಟ್ರಿ ಪುಸ್ತಕದಲ್ಲಿಲ್ಲದಕ್ಕೆ ಅಸಮಾಧಾನಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ವಿಮುಕ್ತಿಧಾಮ ರುದ್ರಭೂಮಿಯನ್ನು ಇಂದಿನಿಂದ ಗ್ರಾ.ಪಂ. ಉಸ್ತುವಾರಿಕೆಯಲ್ಲಿ ನಡೆಸಿಕೊಂಡು ಹೋಗಲು ಇಂದು ಗ್ರಾ.ಪಂ. ನಲ್ಲಿ ನಡೆದ ತುರ್ತು ಸಭೆಯಲ್ಲಿ ಸಭೆಗೆ ಬಂದವರು ಒತ್ತಾಯಿಸಿದ ಘಟನೆ ಹಾಗೂ ಸಭೆಯಲ್ಲಿ ಬಂದ ಸಲಹೆಗಳನ್ನು ಜು.೮ರಂದು ನಡೆಯುವ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಇಟ್ಟು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಪಂಚಾಯತ್ ನಿರ್ಧಾರಕೈಗೊಂಡಿದೆ.
ಕೊಡಿಯಾಲಬೈಲು ರುದ್ರಭೂಮಿಯಲ್ಲಿ ಶವ ಸುಡುವ ವ್ಯವಸ್ಥೆ ಸಮರ್ಪಕವಾಗಿಲ್ಲದೆ ವಾಸನೆಗಳು ಬರುತ್ತಿರುವ ಕುರಿತು ಎರಡು ವಾರಗಳ ಹಿಂದೆ ಸ್ಥಳೀಯ ನಿವಾಸಿಗಳು ಸ್ಮಶಾನದಲ್ಲಿ ಪ್ರತಿಭಟಿಸಿದ್ದರು. ಇದರ ಮುಂದುವರಿದ ಭಾಗವಾಗಿ ಸ್ಥಳೀಯರೇ ಸೇರಿಕೊಂಡು ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದರು. ಈ ಸಮಿತಿಯ ಉಸ್ತುವಾರಿಕೆಯಲ್ಲಿ ಜು.೫ರಂದು ಉಬರಡ್ಕ ಗ್ರಾ.ಪಂ. ಎದುರು ಪ್ರತಿಭಟನೆ ನಡೆದಿತ್ತು. ಅಲ್ಲಿ ಪಂಚಾಯತ್ ಅಧ್ಯಕ್ಷರು ತುರ್ತು ಸಭೆ ನಡೆದು ಆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪ್ರಕಟಿಸಿದ್ದರು. ಅದರಂತೆ ಇಂದು ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರಾದ ಅನಿಲ್ ಬಳ್ಳಡ್ಕ, ಮಮತಾ ಕುದ್ಪಾಜೆ , ಭವಾನಿ ಮೂರ್ಜೆ, ಪೂರ್ಣಿಮಾ ಸೂಂತೋಡು ರವರು ಇದ್ದರು. ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ವಸಂತಿ, ಸಂದೀಪ್ ಸಭೆಗೆ ಬಂದಿರಲಿಲ್ಲ.
ಸಭೆಯ ಆರಂಭದಲ್ಲಿ ಪಿ.ಡಿ.ಒ. ವಿದ್ಯಾಧರ್ ರವರು, ರುದ್ರಭೂಮಿಯ ವಿಷಯ ರುದ್ರಭೂಮಿ ನಿರ್ಮಾಣಕ್ಕೆ ಖರ್ಚಾಗಿರುವ ಹಣದ ವಿವರ, ಶವ ಸುಡಲಾಗಿರುವ ವಿವರ ಹಾಗೂ ಸ್ಮಶಾನ ನಿರ್ಮಾಣಕ್ಕೆ ಲಯನ್ಸ್ ಕ್ಲಬ್ ನವರು ೫ ಲಕ್ಷ ರೂ ಸಹಾಯ ಸೇರಿದಂತೆ ಇನ್ನಿತರ ವಿವರವನ್ನು ಮುಂದಿಟ್ಟರು. ಸಭೆಯಲ್ಲಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಎಂ.ಹೆಚ್.ರವರು, “ಇಂದಿನ ಸಭೆಗೆ ಪಿಡಿಒ ರವರು ನೀಡಿದ ಮಾಹಿತಿ ನೋಡುವಾಗ ನಮಗೆ ಗೊಂದಲಗಳು ಆಗುತ್ತಿದೆ. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಸ್ಮಶಾನದಲ್ಲಿ ಶವ ಸುಡುವಾಗ ಕರಟಿದ ವಾಸನೆ ಬರುತ್ತಿದೆ. ಅಲ್ಲಿಯ ವ್ಯವಸ್ಥೆಗಳು ಸರಿ ಇಲ್ಲ ಎಂಬುದರ ಕುರಿತು ಪ್ರಸ್ತಾಪವಾಗಿ ಆ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಇಂದು ಸಭೆ ಕರೆದ್ದೀರಿ. ಆದರೆ ಈಗ ಸ್ಮಶಾನ ನಿರ್ಮಾಣಕ್ಕೆ ಖರ್ಚಾದ ವಿವರ ನೀಡುತ್ತಿದ್ದೀರಿ ಎಂದು ಹೇಳಿದರು.
“ನಾನು ಇಲ್ಲಿಗೆ ಬಂದು ಒಂದೂವರೆ ವರ್ಷ ಆಯಿತಷ್ಟೆ. ಸ್ಮಶಾನದ ಕುರಿತು ಪಂಚಾಯತ್‌ನಲ್ಲಿ ಯಾವುದೇ ಲೆಕ್ಕಚಾರಗಳು ಇಲ್ಲದಿದ್ದುದರಿಂದ ನಿನ್ನೆ ನಾವು ಪಡೆದುಕೊಂಡದ್ದನ್ನು ಹೇಳಿzನೆ” ಎಂದು ಪಿ.ಡಿ.ಒ. ಹೇಳಿದರು.
`’ಖರ್ಚು ವೆಚ್ಚದ ವಿವರ ನೀವು ನೀಡುವುದೆಂದು ಗೊತ್ತಿರಲಿಲ್ಲ. ಅದನ್ನು ಕೊಡುವುದಿದ್ದರೆ ನಮ್ಮಲ್ಲಿ ಒಂದಷ್ಟು ವಿಚಾರಗಳು ಬೇರೆಯೂ ಇದೆ. ನೀವು ಹೇಳಿದಂತೆ ಲಯನ್ಸ್ ಕ್ಲಬ್‌ನವರು ೫ ಲಕ್ಷ ರೂ ಕೊಟ್ಟದ್ದಲ್ಲ. ೭ ಲಕ್ಷ ರೂ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ನಮ್ಮ ಕಟ್ಟಡದ ಮಾಲಕರು ಕೂಡಾ ದೇಣಿಗೆ ಕೊಟ್ಟಿದ್ದಾರೆ. ಆದರೆ ಇಂದಿನ ಸಭೆಯ ವಿಚಾರ ನಿನ್ನೆಯ ಪ್ರತಿಭಟನೆಗೆ ಸಂಬಂಧಿಸಿದ್ದಾಗಬೇಕಿತ್ತು. ನಾವು ಗ್ರಾಮದ ಅಭಿವೃದ್ಧಿಯ ಕುರಿತು ವಿರುದ್ಧ ಎಲ್ಲಿಯೂ ಮಾತನಾಡುವುದಿಲ್ಲ. ಅಭಿವೃದ್ಧಿಯಾದರೆ ಒಳ್ಳೆಯದೇ ಆದರೆ ರುದ್ರಭೂಮಿಯ ವ್ಯವಸ್ಥೆ ಸರಿ ಇಲ್ಲ. ಈ ಬಗ್ಗೆ ನಾವು ಮನವಿ ಕೊಟ್ಟರೂ ಇನ್ನೂ ಕ್ರಮ ಕೈಗೊಂಡಿಲ್ಲ. ಯಾಕೆ ಹೀಗೆ ? ” ಎಂದು ಮಾಜಿ ಅಧ್ಯಕ್ಷ ಪಿ.ಎಸ್.ಗಂಗಾಧರ್ ಹೇಳಿದರು.
“ನೀವು ಕೊಟ್ಟ ಲೆಕ್ಕಚಾರ ಸರಿಯಿಲ್ಲ. ಅಲ್ಲಿ ಶವಗಳು ತುಂಬಾ ಬಂದಿವೆ ಶವ ಸುಡಲಾಗಿರುವ ಬಗ್ಗೆ ನಿಮ್ಮಲ್ಲಿರುವ ಪಟ್ಟಿಯೂ ಸರಿ ಇಲ್ಲ” ಎಂದು ಸುರೇಶ್ ಎಂ.ಹೆಚ್. ಪಿ.ಡಿ.ಒ.ರನ್ನು ತೀವ್ರ ತರಾಟೆಗೆತ್ತಿಕೊಂಡರು.
ಸಭೆಯಲ್ಲಿದ್ದ ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ್ಲರೂ “ನನ್ನ ಮೇಲೆ ಮಾಜಿ ಅಧ್ಯಕ್ಷರು ವಿನಾ ಆರೋಪಗಳನ್ನು ಮಾಡಿದ್ದಾರೆ. ನಾನು ಮುತುವರ್ಜಿವಹಿಸಿಲ್ಲ ಎಂದು ಹೇಳುತ್ತಿದ್ದಾರೆ. ಆ ಸ್ಮಶಾನದ ಅಭಿವೃದ್ಧಿಗೆ ನಾವು ಕೆಲಸ ಮಾಡಿzವೆ. ಅದರ ಲೆಕ್ಕಚಾರ ನಾವು ಹಲವು ಬಾರಿ ಕೇಳಿದರೂ ಉಸ್ತುವಾರಿ ವಹಿಸಿಕೊಂಡವರು ಕೊಟ್ಟಿಲ್ಲ. ಟ್ರಸ್ಟ್ ಮಾಡುವ ಪ್ರಸ್ತಾಪ ಬಂದಾಗ ಅದನ್ನು ಹೇಳಿ ಲೆಕ್ಕಚಾರ ಪಕ್ಕ ಇಡಲು ಹೇಳಿದೆವು. ಲೆಕ್ಕಚಾರ ಸಿಗದ ಕಾರಣ ಸ್ಮಶಾನ ಅಭಿವೃದ್ಧಿಗೆ ಇಟ್ಟಿದ್ದ ೨ ಲಕ್ಷ ರೂವನ್ನು ನಾವು ಪಂಚಾಯತ್‌ನಿಂದ ಕೊಡಲಿಲ್ಲ. ಈಗ ನಮ್ಮ ಮೇಲೆ ಆರೋಪ ಮಾಡುವುದು ಸರಿಯಾ?. ನಾವು ಪತ್ರಿಕೆಯಲ್ಲಿ ಏನು ಹೇಳಿಕೆ ನೀಡಿzನೋ ಅದೇ ಸತ್ಯ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಬಗ್ಗೆ ಚರ್ಚೆ ದೀರ್ಘವಾಗಿ ನಡೆಯುತ್ತಿದ್ದಾಗ, ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೈಲಜಾ ಶಂಕರ್‌ರವರು “ನಾವು ಎಷ್ಟು ಚರ್ಚಿಸಿದರೂ ಇಲ್ಲಿ ಉತ್ತರ ಕೊಡಬೇಕಾದವರೇ ಇಲ್ಲ. ಮತ್ಯಾಕೆ ನಾವು ಇರೋದು. ನಾನು ಹೋಗುತ್ತೇನೆ” ಎಂದು ಹೇಳಿ ಅವರು ಸಭೆಯಿಂದ ಹೊರ ನಡೆದರು.
“ಹರೀಶ್ ರೈ ಉಬರಡ್ಕರು ಇವತ್ತು ಸಭೆಗೆ ಬರಲಾಗುವುದಿಲ್ಲ ಎಂದು ಫೋನ್ ಮಾಡಿ ಹೇಳಿದ್ದಾರೆ ಎಂದು ಪಿ.ಡಿ.ಒ ಹೇಳಿದರು.
“ಇಷ್ಟು ಚರ್ಚೆಗಳಿಗೆ ಉತ್ತರ ಅವರೇ ನೀಡಬೇಕಲ್ಲವೇ. ಅವರು ಇದ್ದು ಸಭೆ ಮಾಡಿ” ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.
“ನಮಗೆ ವೈಯಕ್ತಿಕವಾಗಿ ಯಾರ ಮೇಲೋ ದ್ವೇಷ ಇಲ್ಲ. ಆದರೆ ಅಲ್ಲಿಯ ಜನರ ಕಷ್ಟವನ್ನು ನೀವು ನೋಡಿ. ಅದರ ಉಸ್ತುವಾರಿ ನೋಡಿಕೊಂಡಿರುವ ಹರೀಶರು ಅಲ್ಲಿ ಇರುವುದಿಲ್ಲ. ಪಿ.ಡಿ.ಒರವರೇ ನೀವಾದರೂ ಒಮ್ಮೆ ಬಂದು ಅಲ್ಲಿ ಹೆಣ ಸುಡುವಾಗ ಇರಿ” ಎಂದು ಸುರೇಶ್ ಎಂ.ಹೆಚ್ ಹೇಳಿದರು.
“ನಾನು ಆ ಸ್ಮಶಾನದಲ್ಲಿ ಹೆಣ ಸುಡುವ ಜವಾಬ್ದಾರಿ ವಹಿಸಿಕೊಂಡ ಮೇಲೆ ೧೦೬ ಶವ ಸುಟ್ಟಿzನೆ” ಎಂದು ಸಭೆಗೆ ಬಂದಿದ್ದ ಗುರುವ ಹೇಳಿದರು.

ಶವದ ಎಂಟ್ರಿ ಪುಸ್ತಕದಲ್ಲಿಲ್ಲ
“ಮೊನ್ನೆ ನಮ್ಮ ಸಂಬಂಧಿಕರಾದ ಸೊರಂಜದ ಒಬ್ಬರ ಶವ ಸುಡಲಾಯಿತು. ಅವರಿಂದ ಮೂರುವರೆ ಸಾವಿರ ಪಡೆದಿದ್ದಾರಂತೆ” ಎಂದು ವಿದ್ಯಾಧರ ಹರ್ಲಡ್ಕರು ಹೇಳಿದಾಗ, `’ಸಾಧ್ಯ ಇಲ್ಲ. ಮೂರೇ ಸಾವಿರ” ಪಡೆದಿರಬಹುದೆಂದು ಪಿ.ಡಿ.ಒ ಹೇಳಿದರು. ಈ ಕುರಿತು ಎಂಟ್ರಿ ಪುಸ್ತಕ ಪರಿಶೀಲಿಸಿದಾಗ, ಅವರು ಹೇಳಿದ ಶವದ ಹೆಸರು ಎಂಟ್ರಿ ಪುಸ್ತಕದಲ್ಲಿ ಇರಲಿಲ್ಲ. ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಯಿತು.
“ನಾವು ತಾ.ಪಂ. ಇ.ಒ.ರಿಗೆ ಮನವಿ ಕೊಟ್ಟಾಗ ಅವರು ಬಂದು ಸರಿ ಪಡಿಸುತ್ತಿದ್ದರೆ, ಈ ಸಮಸ್ಯೆಯೇ ಆಗುತ್ತಿರಲಿಲ್ಲ. ಅಲ್ಲಿಯ ಅವ್ಯವಸ್ಥೆಗೆ ಇ.ಒ. ರವರೇ ನೇರ ಹೊಣೆ. ಮುಂದಿನ ಸಭೆಗೆ ಅವರೂ ಬರಬೇಕು” ಎಂದು ಪಿ.ಎಸ್.ಗಂಗಾಧರ್ ಹೇಳಿದರು.
ನಮ್ಮ ಆಡಳಿತ ಮಂಡಳಿ ಬಂದಂದಿನಿಂದಲೇ ನಾವು ಸ್ಮಶಾನದ ಕುರಿತು ಲೆಕ್ಕ ಕೇಳುತ್ತಿzವೆ. ಇದೂ ವರೆಗೆ ನಮಗೆ ನೀಡಿಲ್ಲ. ಟ್ರಸ್ಟ್ ಮಾಡುವ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸದಸ್ಯ ಅನಿಲ್ ಬಳ್ಳಡ್ಕರು ಹೇಳಿದರು.
“ನಿಮ್ಮ ಸಲಹೆಯನ್ನು ನಾವು ಪಡೆದುಕೊಳ್ಳುತ್ತೇವೆ. ಯಾರೂ ರಾಜಕೀಯವಾಗಿ ಇದನ್ನು ತೆಗೆದುಕೊಳ್ಳಬಾರದು” ಎಂದು ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಹೇಳಿದಾಗ, `’ನಾವು ಊರಿನ ಹಿತದೃಷ್ಠಿಯಿಂದ ಮಾತನಾಡುತ್ತೇವೆ. ರಾಜಕೀಯ ಶಬ್ದ ಹಿಂಪಡೆಯಬೇಕು” ಎಂದು ಪಿ.ಎಸ್.ಗಂಗಾಧರ್ ಒತ್ತಾಯಿಸಿದರು.
ಬಳಿಕ ಎಲ್ಲರ ಅಭಿಪ್ರಾಯ ಪಡೆಯಲಾಯಿತು. ಇಂದಿನಿಂದಲೇ ರುದ್ರಭೂಮಿಯ ಉಸ್ತುವಾರಿಯನ್ನು ಗ್ರಾ.ಪಂ. ನೋಡಿಕೊಳ್ಳುವುದು. ಉಬರಡ್ಕ ಗ್ರಾಮದವರಿಗೆ ಮಾತ್ರ ಶವ ಸುಡಲು ಅವಕಾಶ. ಶವ ತಂದವರು ಪಂಚಾಯತ್‌ಗೆ ಬಂದು ರಶೀದಿ ಮಾಡಿಸಿ ಅದನ್ನು ಸ್ಮಶಾನದಲ್ಲಿ ತೋರಿಸಿ ಶವ ಸುಡಬೇಕು. ಗ್ರಾ.ಪಂ. ಅಧ್ಯಕ್ಷರು ಸ್ಮಶಾನ ಉಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಚುನಾಯಿತ ಸದಸ್ಯರು ಸಮಿತಿಯಲ್ಲಿರಬೇಕು. ಯುವಕ ಮಂಡಲದ ಅಧ್ಯಕ್ಷರನ್ನು ಹಾಗೂ ಸಹಕಾರಿ ಸಂಘದ ಅಧ್ಯಕ್ಷರು ಒಟ್ಟು ೧೫ ಮಂದಿಯ ಸಮಿತಿ. ಖಾಯಂ ಉಸ್ತುವಾರಿ ಎಂದು ಯಾರನ್ನು ನೇಮಿಸಬಾರದು. ಪಂಚಾಯತ್‌ನಿಂದ ನೌಕರನೊಬ್ಬರನ್ನು ನೇಮಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಕೊನೆಯಲ್ಲಿ ಈಗ ಬಂದಿರುವ ಸಲಹೆಯನ್ನು ಜು.೮ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.