ಯೇನೆಕಲ್ಲು: ಕೆ.ಎಸ್. ದೇವರಾಜ್ ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Advt_Headding_Middle

 

ಜು. 3ರಂದು ಅನಾರೋಗ್ಯದಿಂದ ನಿಧನರಾದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ಯೇನೆಕಲ್ಲು ಪ್ರಾ.ಕೃ.ಪ‌.ಸ.ಸಂಘ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ದೇವರಾಜ್ ರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಜು. 6ರಂದು ಯೇನೆಕಲ್ಲು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಯೇನೆಕಲ್ಲು ಗ್ರಾಮದ ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ ದೇವರಾಜರ ಭಾವಚಿತ್ರಕ್ಕೆ ದೀಪ ಬೆಳಗಿಸಿದರು. ನಿವೃತ್ತ ಶಿಕ್ಷಕ ಶಿವರಾಮ ಯೇನೆಕಲ್ಲು, ಯೇನೆಕಲ್ಲು ಸಹಕಾರಿ ಸಂಘದ ನಿರ್ದೇಶಕ ಎನ್.ಕೆ. ಮನೋಹರ ನಾಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ, ನಿವೃತ್ತ ದೈಹಿಕ ನಿರ್ದೇಶಕ ತುಕಾರಾಂ ಯೇನೆಕಲ್ಲು, ಮಾಜಿ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಶಿಕ್ಷಕ ರಾಮಕೃಷ್ಣ ಮಲ್ಲಾರ, ಜೇಸೀ ತರಬೇತುದಾರರಾದ ಶಶಿಧರ್ ಪಳಂಗಾಯ ಯೇನೆಕಲ್ಲು ಸಹಕಾರಿ ಸಂಘದ ನಿರ್ದೇಶಕ ವೆಂಕಟರಮಣ ಕೆಂಬ್ರೋಳಿ, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಶಿವಪ್ರಸಾದ್ ಮಾದನಮನೆ, ವಿದ್ಯುತ್ ಗುತ್ತಿಗೆದಾರ ಮಾಯಿಲಪ್ಪ ಸಂಕೇಶ, ಸುಬೇದಾರ್ ವಾಸುದೇವ ಬಾನಡ್ಕ ಮೃತರ ಬಗ್ಗೆ ನುಡಿನಮನಗಳನ್ನು ಸಲ್ಲಿಸಿದರು. ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭರತ್ ನೆಕ್ರಾಜೆ ನುಡಿನಮನಗಳನ್ನು ಸಲ್ಲಿಸಿ ವಂದಿಸಿದರು. ಶಿಕ್ಷಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ, ಊರಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಊರವರು ಈ ಸಂದರ್ಭದಲ್ಲಿ ಹಾಜರಿದ್ದು ಅಗಲಿದ ನಾಯಕ ಕೆ.ಎಸ್. ದೇವರಾಜರ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.