Breaking News

ಸುಳ್ಯ ನಗರದಲ್ಲಿ ಹೊಸ ಬದಲಾವಣೆ

Advt_Headding_Middle

 

ನಗರದಲ್ಲಿ ರಾತ್ರಿಯೂ ಕಸ ಸಂಗ್ರಹಕ್ಕೆ ಚಾಲನೆ

 

ಸುಳ್ಯ ನಗರದಲ್ಲಿ ಬೆಳಿಗ್ಗೆ ಮಾತ್ರ ನಡೆಸಲಾಗುತ್ತಿದ್ದ ಕಸ ಸಂಗ್ರಹ ಕಾರ್ಯ ರಾತ್ರಿಯೂ ಜು.6 ರಿಂದ ಆರಂಭಗೊಂಡಿದೆ.

ಕಸ ಸಂಗ್ರಹಕ್ಕಾಗಿ ರಾತ್ರಿಯ ವೇಳೆ ಕಸ ಸಾಗಾಟ ವಾಹನ ಸುಳ್ಯ ನಗರದಲ್ಲಿ ಸಂಚರಿಸಿತು. ಜ್ಯೋತಿ ವೃತ್ತದಿಂದ ಆರಂಭಗೊಂಡ ಕಸ ಸಾಗಾಟ ವಾಹನ ಸಾರ್ವಜನಿಕರಿಂದ ಮತ್ತು ಅಂಗಡಿ ಮುಂಗಟ್ಟುಗಳಿಂದ, ಹೋಟೆಲ್ ಗಳಿಂದ, ಸಾರ್ವಜನಿಕರಿಂದ ಕಸ ಸಂಗ್ರಹಿಸಿ ನಗರದ ಮುಖ್ಯ ರಸ್ತೆಯಲ್ಲಿ ಗಾಂಧಿನಗರದವರೆಗೆ ಸಂಚರಿಸಿತು. ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಬೇರ್ಪಡಿಸಿ ನೀಡಲು ಸೂಚಿಸಲಾಯಿತು. ಕೆಲವರು ಒಟ್ಟಿಗೆ ಕಸವನ್ನು ತಂದಾಗ ಅದನ್ನು ಬೇರ್ಪಡಿಸಿ ನಾಳೆ ಬೆಳಿಗ್ಗೆ ನೀಡಲು ಸೂಚಿಸಲಾಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನಗರ ಪಂಚಾಯತ್ ಆರೋಗ್ಯಾಧಿಕಾರಿ ಲಿಂಗರಾಜು ನೇತೃತ್ವದಲ್ಲಿ ಕಸ ಸಾಗಾಟ ವಾಹನ ಸಂಚರಿಸಿತು. ರಾತ್ರಿಯ ವೇಳೆ ಕಸ ಸಂಗ್ರಹ ಕಾರ್ಯ ಮಾಡುವುದಕ್ಕೆ
ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಇದು ಉತ್ತಮ ಬೆಳವಣಿಗೆ, ಅಂಗಡಿಗಳಿಂದ, ಹೋಟೆಲ್ ಗಳಿಂದ, ಬೀದಿಗಳಿಂದ ರಾತ್ರಿಯೇ ಕಸ ಸಂಗ್ರಹ ಮಾಡುವುದರಿಂದ ಬದಲಾವಣೆ ಸಾಧ್ಯವಿದೆ. ನಗರದ ಸ್ವಚ್ಛತೆ ಕಾಪಾಡಲು ಸಹಾಯಕ ಎಂದು ಅಲ್ಪ‌ ಸಂಖ್ಯಾತ ವಿವಿದ್ಧೋದ್ದೇಶ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಮಹಮ್ಮದ್ ಹೇಳಿದ್ದಾರೆ.ಸುಳ್ಯ ನಗರದಲ್ಲಿ ರಸ್ತೆಗಳ ಬದಿಯಲ್ಲಿ ಕಸದ ರಾಶಿ ಹಾಕುವುದನ್ನು ತಡೆಯಲು ಮತ್ತು ಬೆಳಿಗ್ಗೆ ಕಸವನ್ನು ನಗರ ಪಂಚಾಯತ್ ವಾಹನಕ್ಕೆ ಹಾಕಲು ಅನಾನುಕೂಲ ಇರುವವರಿಗೆ ಸಹಾಯಕವಾಗಲೆಂದು ರಾತ್ರಿಯ ವೇಳೆಯೂ ಕಸ ಸಾಗಾಟ ವಾಹನ ಸಂಚರಿಸಲು ನಗರ ಪಂಚಾಯತ್ ನಿರ್ಧರಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.