ಇಂಧನ ಬೆಲೆ ಏರಿಕೆ ಪ್ರತಿಭಟಿಸಿ ಸುಳ್ಯದಲ್ಲಿ ಕಾಂಗ್ರೆಸ್ ಸೈಕಲ್ ಜಾಥಾ

Advt_Headding_Middle

 

ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ಏರಿಕೆಯಾಗಿರುವುದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಜನಜೀವನ ದುರ್ಬರವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇಂಧನ ಬೆಲೆ ಇಳಿಸಿ ಜನರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಳೆಗೇಟಿನಿಂದ ಸುಳ್ಯ ಬಸ್ ನಿಲ್ದಾಣದವರೆಗೆ ಸೈಕಲ್ ಹಾಗೂ ಕಾಲ್ನಡಿಗೆ ಜಾಥ ನಡೆಸಲಾಯಿತು .
ಹಳೆಗೇಟು ಪೆಟ್ರೋಲ್ ಬಂಕ್ ಬಳಿ ಸೇರಿ ಅಲ್ಲಿಂದ ಹೊರಟ ಸೈಕಲ್ ಹಾಗೂ ಕಾಲ್ನಡಿಗೆ ಜಾಥಾವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಉದ್ಘಾಟಿಸಿದರು .

ಪೆಟ್ರೋಲ್ ಬೆಲೆ 103 ರೂ. ದಾಟಿದೆ. ಡೀಸೆಲ್ ಬೆಲೆ 95 ರೂ. ತಲುಪಿದೆ. ಇದರಿಂದಾಗಿ ಎಲ್ಲಾ ಸಾಮಗ್ರಿಗಳ ಬೆಲೆ ಹೆಚ್ಚಾಗಿದ್ದು, ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಆಡಳಿತ ನಡೆಸಲು ಬಾರದ ಹೊಣೆಗೇಡಿ ಸರಕಾರಗಳೆಂದು ಸಾರಾಸಗಟಾಗಿ ಹೇಳುತ್ತೇವೆ. ಭ್ರಷ್ಟಾಚಾರದಲ್ಲಿ ಮಾತ್ರ ಅವರು ಮುಂದಿದ್ದಾರೆ . ಲಸಿಕೆಯಲ್ಲೂ ಭ್ರಷ್ಟಾಚಾರ, ಹೆಣ ಸುಡುವುದರಲ್ಲೂ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಪಿ ಸಿ ಜಯರಾಮರು ಟೀಕಿಸಿದರು.

ಬಳಿಕ ಸುಳ್ಯ ಬಸ್ ನಿಲ್ದಾಣದ ವರೆಗೆ ಕಾಲ್ನಡಿಗೆಯಲ್ಲಿ ಬಂದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಕೆಪಿಸಿಸಿ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ ಪೆರಿಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಿ.ಕೆ. ಹಮೀದ್ ಮಾತನಾಡಿದರು.

 

ಕೆ.ಎಂ.ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ಡಾ|ರಘು, ಗೋಕುಲ್‌ದಾಸ್, ಪ್ರಸಾದ್ ರೈ ಮೇನಾಲ, ಸುಧೀರ್ ರೈ ಮೇನಾಲ, ಅಶೋಕ್ ಚೂಂತಾರು, ಫವಾಸ್ ಕನಕಮಜಲು, ಡೇವಿಡ್ ಧೀರ ಕ್ರಾಸ್ತಾ, ಮೀನಾಕ್ಷಿ ಆಲೆಟ್ಟಿ, ಅಗರಿ ಕೃಷ್ಣ ಗೌಡ, ದಿನೇಶ್ ಅಂಬೆಕಲ್ಲು, ಎಸ್.ಸಂಶುದ್ದೀನ್, ಆನಂದ ಬೆಳ್ಳಾರೆ, ಅನಿಲ್ ರೈ ಚಾವಡಿಬಾಗಿಲು, ಸಿದ್ದೀಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ಸಚಿನ್ ರಾಜ್ ಶೆಟ್ಟಿ, ಅನಿಲ್ ಬಳ್ಳಡ್ಕ, ತಾಜ್ ಮಹಮ್ಮದ್, ಅಬುಸಾಲಿ., ಎಂ.ಎಸ್.ಸುರೇಶ್, ಭವಾನಿಶಂಕರ ಕಲ್ಮಡ್ಕ, ಎಸ್.ಕೆ.ಹನೀಫ್, ನಂದರಾಜ್ ಸಂಕೇಶ, ಬೆಟ್ಟ ಜಯರಾಮ್ ಭಟ್ ಮೊದಲಾದವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.