Breaking News

ಸುಬ್ರಹ್ಮಣ್ಯದಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ

Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯದ ಪವಿತ್ರ ಕ್ಷೇತ್ರದಲ್ಲಿ ಮೋದಿ ಆಶಯದ ಜನೌಷಧಿ ಕೇಂದ್ರಕ್ಕೆ ಶುಭವಾಗಲಿ – ಮೋಹನ್ ರಾಮ್ ಸುಳ್ಳಿ

ಮೋದಿಯವರ ಆಶಯ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಕಡಿಮೆ ವೆಚ್ಚದಲ್ಲಿ ಜೌಷಧಿಗಳ ಪೂರೈಕೆ ಆಗಬೇಕು. ಅದರಂತೆ
ಸುಬ್ರಹ್ಮಣ್ಯದಂತ ಪವಿತ್ರ ಕೇತ್ರದಲ್ಲಿ ಈ ಜನೌಷಧಿ ಕೇಂದ್ರ ಆರಂಭವಾಗಿರುವುದು ಒಳ್ಳೆಯ ವಿಚಾರ ಶುಭವಾಗಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ತಿಳಿಸಿದರು. ಅವರು ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಗ್ರಾ.ಪಂ ನ ಕಟ್ಟಡದಲ್ಲಿ ಇಂದು ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಕಡಬ ತಾಲೂಕು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ರಾಜೇಶ್ವರಿ, ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಸುಬ್ರಹ್ಮಣ್ಯ ಗ್ರಾ.ಪಂ ಮಾಜಿ ಉಪಾಧ್ಯಕ್ಷ ರಾಜೇಶ್‌ ಎನ್ ಎಸ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ವನಜಾ ಭಟ್, ಶೋಭಾ ಗಿರಿಧರ ಸ್ಕಂದ, ಮನೋಹರ ರೈ, ಲೊಕೇಶ್, ಶ್ರೀವತ್ಸ, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಗಿರೀಶ್ ಆಚಾರ್ಯ, ಎಚ್ ಎಲ್ ವೆಂಕಟೇಶ್ , ಶಿವರಾಮ ನೆಕ್ರಾಜೆ, ದಿಲೀಪ್, ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ವಿಜಯಕುಮಾರ್ ಅಮೈ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮ, ಶ್ರೀಕುಮಾರ್, ದಿನೇಶ್ ಸಂಪ್ಯಾಡಿ, ಜನೌಷದಿ ಕೇಂದ್ರದ ಮಾಲಕ ಶಿವರಂಜನ್ ಅವರ ಹೆತ್ತವರಾದ ಬಾಲಸುಬ್ರಹ್ಮಣ್ಯ ಮತ್ತು ಸೀತಾಲಕ್ಷ್ಮೀ, ಪತ್ನಿ ಲಾವಣ್ಯ ಇವರುಗಳಿದ್ದರು. ಶಿವರಂಜನ್ ಅವರು ಎಲ್ಲರನ್ನೂ ಸ್ವಾಗತಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.