ಸುಳ್ಯ:ಇಮ್ಯಾಜಿನ್ ಫ್ಯಾಬ್ರಿಕ್ ಮತ್ತು ಡಿಸೈನರ್ ಸ್ಟುಡಿಯೋ ಶುಭಾರಂಭ

Advt_Headding_Middle

ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಡಿ ಎಂ ಕಾಂಪ್ಲೆಕ್ಸ್ ನಲ್ಲಿ ಜುಲೈ ೮ ರಂದು ಫ್ಯಾಬ್ರಿಕ್ ಮತ್ತು ಡಿಸೈನರ್ ಸ್ಟುಡಿಯೋ ವಸ್ತ್ರ ಮಳಿಗೆ ಶುಭಾರಂಭ ಗೊಂಡಿದೆ. ಈ ಸಂಸ್ಥೆಯಲ್ಲಿ ಫ್ಯಾಬ್ರಿಕ್ ಐಟಮ್ಸ್ ಗಳು, ನೂತನ ವಿನ್ಯಾಸದ ರೆಡಿಮೇಡ್ ಉಡುಪುಗಳು, ನುರಿತ ಟೈಲರ್ಸ್ ಗಳಿಂದ ನೂತನ ವಿನ್ಯಾಸದ ಬಟ್ಟೆಯ ಹೊಲಿಗೆಗಳು ಒಂದೇ ಸೂರಿನಡಿ ಲಭ್ಯವಾಗಲಿದೆ ಎಂದು ಮಾಲಕರು ತಿಳಿಸಿದ್ದಾರೆ.

 

ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ. ಲತಾ ಮಧುಸೂದನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ದ ಕ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹರಿಣಿ ಸದಾಶಿವ, ತಾಲೂಕು ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಫಮಿದ ಶಂಸುದ್ದೀನ್, ದ.ಕ. ಜಿಲ್ಲಾ NWF ಸಮಿತಿ ಅಧ್ಯಕ್ಷೆ ನಸ್ರಿಯ ಫೈಝಲ್, ಕ್ಲಾಸ್-೧ ಪಿಡಬ್ಲೂಡಿ ಕಂಟ್ರಾಕ್ಟರ್ ಗೋಪಾಲಕೃಷ್ಣ ಕೆ.ಎಸ್. ಈ ಸಂದರ್ಭದಲ್ಲಿ ಸಂಸ್ಥೆಗೆ ಶುಭಹಾರೈಸಿದರು.

ಲಿಟಲ್ ಲೇಡಿ ಬ್ಯೂಟಿಕ್ ಸಂಸ್ಥೆಯ ಮಾಲಕ ಅತಾವುಲ್ಲಾ ಕಲ್ಲುಮುಟ್ಲು, ಕೆ.ವಿ.ಜಿ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಡಾ.ರವಿಶಂಕರ್, ಕಸ್ತೂರು ನರ್ಸರಿ ಮಾಲಕ ಮಧುಸೂಧನ್, ನ.ಪಂ. ಮಾಜಿ ಅಧ್ಯಕ್ಷ ಸಂಶುದ್ದೀನ್ ಅರಂಬೂರು, ಚಾರ್ಟಡ್ ಅಕೌಂಟರ್ ಶ್ರೀನಿಧಿ, ಮಾಜಿ ಜಿ.ಪಂ. ಅಧ್ಯಕ್ಷ ಶಂಕರ್ ಪೆರಾಜೆ, ರೋಟರಿ ಮಾಜಿ ಅಧ್ಯಕ್ಷ ಹಮೀದ್ ಹಾಜಿ ಜನತಾ, ರೋಟ್ಯಾರಾಕ್ಟ್ ಅಬ್ದುಲ್ ಕಲಾಂ, ರಾಜಧಾನಿ ಜ್ಯುವೆಲ್ಲರ್‍ಸ್ ಮಾಲಕ ಅಬ್ದುಲ್ ರಜಾಕ್ ಹಾಜಿ, ಶೀತಲ್ ಕಲೆಕ್ಷನ್ ಮಾಲಕ ಹಾಜಿ ಅಬ್ದುಲ್ ರಝಾಕ್, ರಫೀಕ್ ಚಾಯ್ಸ್, ಎನ್.ಎ ಜುನೈದ್, ಸಿದ್ದಿಕ್ ಕಟ್ಟೆಕಾರ್‍ಸ್ ಮೊದಲಾದವರು ಉಪಸ್ಥಿತರಿದ್ದರು. ನಗರ ಪಂಚಾಯತ್ ಮಾಜಿ ಸದಸ್ಯ ಹಾಜಿ ಮುಸ್ತಫಾ ಜನತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.