ಡೆಂಗ್ಯೂ ರೋಗ ನಿಯಂತ್ರಣ ಕರಪತ್ರ ಬಿಡುಗಡೆ 

Advt_Headding_Middle

ನಗರಪಂಚಾಯತ್ ಸುಳ್ಯ ಮತ್ತು ಮಿತ್ರ ಬಳಗ  ಕಾಯರ್ತೋಡಿ, ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಮಾಹಿತಿ ಕರಪತ್ರವನ್ನು ನಗರ ಪಂಚಾಯತ್ ವಠಾರದಲ್ಲಿ ಸುಳ್ಯ ನಗರ ಪಂಚಾಯತಿನ ಅಧ್ಯಕ್ಷರಾಗಿರುವ ವಿನಯ್ ಕುಮಾರ್ ಕಂದಡ್ಕರವರು  ಜು. 07 ರಂದು ಬಿಡುಗಡೆಗೊಳಿಸಿದರು.


ಬಳಿಕ ಮಾತನಾಡಿದ ಅವರು ಡೆಂಗೆ ರೋಗ ನಿಯಂತ್ರಣ ಅಗತ್ಯವಾಗಿದ್ದು, ಮನೆಯ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು, ತೆಂಗಿನ ಚಿಪ್ಪು, ಟಯರ್, ಬಾಟಲ್ ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಿತ್ರ ಬಳಗದ ಅಧ್ಯಕ್ಷ ಮಿಥುನ್ ಕೆ, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಸುಳ್ಯ ನಗರದ ಆರೋಗ್ಯ ನಿರೀಕ್ಷಕ ಲಿಂಗರಾಜು, ಕಾಯರ್ತೋಡಿ ವಾರ್ಡಿನ ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್, ನಗರ ಪಂಚಾಯತ್ ಸದಸ್ಯರಾಗಿರುವ ಶ್ರೀಮತಿ ಶಶಿಕಲಾ ನೀರಬಿದಿರೆ, ಶರೀಫ್ ಕಂಠಿ, ನಗರ ಪಂಚಾಯತ್ ಸಿಬ್ಬಂದಿಗಳು, ಮಿತ್ರಬಳಗದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.