Breaking News

ಗುತ್ತಿಗಾರು ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

Advt_Headding_Middle

ಆಂಬ್ಯುಲೆನ್ಸ್ ಖರೀದಿಗಾಗಿ ದೇಣಿಗೆ ಸಂಗ್ರಹ ಆರಂಭ

ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ರಿಂದ ಚಾಲನೆ


ಗುತ್ತಿಗಾರು ಅಮರ ತಾಲೂಕು ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಮತ್ತು ಆಂಬ್ಯುಲೆನ್ಸ್ ಖರೀದಿಗಾಗಿ ದೇಣಿಗೆ ಸಂಗ್ರಹ ಅಭಿಯಾನ ಗುತ್ತಿಗಾರು ವೆಂಕಟೇಶ್ವರ ಸಭಾ ಭವನ ಹಾಲೆಮಜಲು ಇಲ್ಲಿ ಜು. 7 ರಂದು ನಡೆಯಿತು.
ನಿವೃತ್ತ ಠಾಣಾಧಿಕಾರಿ ಸುಬ್ಬಣ್ಣ ಗೌಡ ಮಣಿಯಾನ ಮನೆ ದೀಪ ಬೆಳಗಿಸಿ ಟ್ರಸ್ಟ್‌ ಉದ್ಘಾಟಿಸಿದರು. ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಆಂಬ್ಯುಲೆನ್ಸ್ ಖರೀದಿಗಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಗುತ್ತಿಗಾರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೈತ್ರ ಭಾನು,  ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ,  ಮುತ್ತಪ್ಪಪೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಪಂಚಾಯತ್ ಪಿ. ಡಿ. ಓ.  ಶ್ಯಾಮ್ ಪ್ರಸಾದ್, ರಾಘವೇಂದ್ರ ಬೇಕರಿ ಮಾಲಕರಾದ ಅನಿಲ್ ಕುಮಾರ್, ನಿವೃತ್ತ ಉಪನ್ಯಾಸಕ ದುಗ್ಗಪ್ಪ ಗೌಡ ಕುಳ್ಳಂಪಾಡಿ, ಶ್ರೀಮತಿ ಪುಷ್ಪ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಕಂದ್ರಪ್ಪಾಡಿ, ಸೇವಾಭಾರತಿ ಸದಸ್ಯ ಮುಕೇಶ್ ಪಡ್ಪು, ವೀರ ಮಾರುತಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಮೂಕಮಲೆ, ಮೆಸ್ಕಾಂ ಉದ್ಯೋಗಿ ನಿರಂತ್ ದೇವಸ್ಯ, ಬಿ. ಎಂ. ಎಸ್. ಆಟೋ ಘಟಕದ ಸದಸ್ಯರು ಹಾಗೂ ಟ್ರಸ್ಟ್ ನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕು। ಹನೀಕ್ಷಾ, ಕು। ಪ್ರೀತಿಕಾ ಶಿರಾಜೆ ಪ್ರಾರ್ಥನೆಯನ್ನು ನೆರವೇರಿಸಿದರು. ಟ್ರಸ್ಟ್‌ ಅಧ್ಯಕ್ಷ ಚಂದ್ರಶೇಖರ ಕಡೋಡಿ ಕಾರ್ಯಕ್ರಮ ನಿರ್ವಹಿಸಿ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.