Breaking News

ಬೆಳ್ಳಾರೆಯಲ್ಲಿ ಲೈಪ್ ‌ಕೇರ್ ಕ್ಲಿನಿಕ್ ಶುಭಾರಂಭ ಪ್ರಯುಕ್ತ ರಕ್ತದಾನ ಶಿಬಿರ

Advt_Headding_Middle

ವೀ ಹೆಲ್ಪ್ ಸರ್ವೀಸ್ ಯೂನಿಟ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ.) ಜಂಟಿ ಆಶ್ರಯದಲ್ಲಿ ಲೈಫ್ ಕೇರ್ ಕ್ಲಿನಿಕ್ ಶುಭಾರಂಭದ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಭಾಗಿತ್ವದಲ್ಲಿ ಜುಲೈ 8ರಂದು ಗುರುವಾರ ಬೆಳ್ಳಾರೆಯ ರಾಯಲ್ ಕಾಂಪ್ಲೆಕ್ಸ್ ನಲ್ಲಿರುವ ಲೈಫ್ ಕೇರ್ ಕ್ಲಿನಿಕ್ ಬಳಿಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ವಹಿಸಿದ್ದರು. ಕ್ಲಿನಿಕ್ ಶುಭಾರಂಭದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಮಾದರಿ ಕೆಲಸವನ್ನು ಮಾಡಿದ ಕ್ಲಿನಿಕ್ ವೈದ್ಯರಾದ ಡಾ| ರಿಝ್ವಾನ್ ಅವರಿಗೆ ಶುಭಹಾರೈಸಿ ಮಾತನಾಡಿದ ಅವರು, ರೋಗಿಯು ಯಾರೆಂದು ಗೊತ್ತಿಲ್ಲದೇ ಯಾವುದೇ ಭೇದಭಾವವಿಲ್ಲದೇ ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನ ಮುಂಜಾಗೃತ ಕ್ರಮವನ್ನು ಪಾಲಿಸಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 55 ಜನಸ್ನೇಹಿ ರಕ್ತದಾನಿಗಳು,ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ವಿವಿಧ ರೀತಿಯ ರೋಗಕ್ಕೆ ತುತ್ತಾಗಿರುವ ರೋಗಿಗಳ ಜೀವವನ್ನು ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ್ ಕಾಮತ್, ಬೆಳ್ಳಾರೆ ವರ್ತಕರ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಮಾಧವ ಗೌಡ, ಉಧ್ಯಮಿ ಪ್ರಮೋದ್ ಶೆಟ್ಟಿ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ ಹಾಗು ‘ವಿ ಹೆಲ್ಪ್’ ಸಂಸ್ಥೆಯ ಅಧ್ಯಕ್ಷರಾದ ಹನೀಫ್ ನಜಾತ್, ಕಾರ್ಯದರ್ಶಿ ಬಶೀರ್ ಯು.ಪಿ , ಅಡ್ಮಿನ್ ಅನ್ಸಾರ್ ಬೆಳ್ಳಾರೆ, ಹಾಗು ಜಲೀಲ್ ಎ.ಆರ್ , ಯಹ್ಯಾ ಫುಟ್ ಪ್ರಿಂಟ್ ,ಝಕೀರ್ ಆಲ್ಫಾ, ಬಶೀರ್ ಕೆ.ಎ, ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ(ರಿ) ಕಾರ್ಯನಿರ್ವಾಹಕರಾದ ಇಕ್ಬಾಲ್ ಕನಕಮಜಲು, ರಿಯಾಝ್ ಕಣ್ಣೂರ್, ಫೈಝಲ್ ಮಂಚಿ, ಅಲಿ ಪರ್ಲಡ್ಕ, ಆಶಿಕ್ ಫೋಕಸ್, ಸಾಬಿತ್ ಕುಂಬ್ರ, ದೀಪು ದೇರಳಕಟ್ಟೆ, ಜುನೈದ್ ಬಂಟ್ವಾಳ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ನ ಪ್ರವೀಣ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.ಶಿಬಿರ ಕಾರ್ಯಕ್ರಮದ ಯಶಸ್ವಿಗೆ ರವೂಫ್ ಪಾಲ್ತಾಡ್ ರವರು ಸಂಪೂರ್ಣ ಸಹಕಾರ ನೀಡಿದರು.

ಕಾರ್ಯಕ್ರಮವನ್ನು ಬಷೀರ್ ಯು ಪಿ ಸ್ವಾಗತಿಸಿ, ಬಷೀರ್ ಬೆಳ್ಳಾರೆ ಧನ್ಯವಾದ ಗೈದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.