ಸುಳ್ಯ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ‌ ಸಮಾರಂಭ

Advt_Headding_Middle

 

 

ಸುಳ್ಯ ರೋಟರಿ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ‌ ಸಮಾರಂಭ ರಥಬೀದಿಯಲ್ಲಿರುವ ರೋಟರಿ ಕಮ್ಯೂನಿಟಿ ಹಾಲ್ ನಲ್ಲಿ ಜು.8 ರಂದು ಸಂಜೆ ನಡೆಯಿತು.
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಮಧು‌‌ ನರಿಯೂರು ನೂತನ ಪದಾಧಿಕಾರಿಗಳ ಪದಗ್ರಹಣ‌ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಪಿ.ಡಿ.ಜಿ. ಪಿಹೆಚ್ಎಫ್ ಎಂ.ಎಂ. ಸುರೇಶ್ ಚೆಂಗಪ್ಪ, ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ, ಝೋನಲ್ ಲೆಫ್ಟಿನೆಂಟ್‌ ಭಾನುಪ್ರಕಾಶ್,ಝೋನಲ್ ಕಾರ್ಯದರ್ಶಿ ಅಬ್ಬಾಸ್ ಮುರ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಪೂರ್ವ ಭಾಗದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಡಾ.ಗುರುರಾಜ್ ವೈಲಾಯ ವಹಿಸಿದರೆ, ಉತ್ತರಾರ್ಧದ ಅಧ್ಯಕ್ಷತೆಯನ್ನು ರೋಟರಿ ನೂತನ ಅಧ್ಯಕ್ಷ ಪ್ರಭಾಕರನ್ ನಾಯರ್ ಸ್ವಾಗತ್ ವಹಿಸಿದರು.
ನಿರ್ಗಮನ ಅಧ್ಯಕ್ಷ ಡಾ. ಗುರುರಾಜ್ ವೈಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ಅವರ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ನೂತನ ಕಾರ್ಯದರ್ಶಿಯಾಗಿ ಅನಂದ ಖಂಡಿಗ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಕಲ್ಲಾಜೆ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಅಬ್ದುಲ್ ಮಜೀದ್ ಕೆ.ಎಂ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕಸ್ತೂರಿ ಶಂಕರ್, ವೃತ್ತಿ ಸೇವೆ ನಿರ್ದೇಶಕರಾಗಿ ಹರಿರಾಯ ಕಾಮತ್, ದತ್ತ ಯವಜನ ಸೇವೆ ನಿರ್ದೇಶಕರಾಗಿ ಸನತ್ ಪಿ, ಅಂತರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ಡಾ.ಸುಧಾಕರ ಭಟ್ ಟಿ, ಪೋಲಿಯೋ ಸೇವೆ ನಿರ್ದೇಶಕರಾಗಿ ಸೀತಾರಾಮ ರೈ ಸವಣೂರು, ರೋಟರಿ ದತ್ತಿ ನಿಧಿ ನಿರ್ದೇಶಕರಾಗಿ ಗಿರಿಜಾ ಶಂಕರ್, ಜಿಲ್ಲಾ ಪ್ರಾಜೆಕ್ಟ್‌ ನಿರ್ದೇಶಕರಾಗಿ ಡಾ.ಪುರುಷೋತ್ತಮ ಕೆ.ಜಿ., ಸದಸ್ಯತ್ವ ನಿರ್ದೇಶಕರಾಗಿ ಬಾಲಕೃಷ್ಣ ಎಂ, ಟಿ ಇ ಎ ಸಿ ಹೆಚ್ ನಿರ್ದೇಶಕರಾಗಿ ಬೆಳ್ಯಪ್ಪ ಗೌಡ, ವಿನ್ಸ್ ನಿರ್ದೇಶಕರಾಗಿ ಡಾ.ಶ್ರೀಕೃಷ್ಣ ಬಿ.ಎನ್, ವೆಬ್ಸೈಟ್ ಸೇವೆ ನಿರ್ದೇಶಕರಾಗಿ ಗಣೇಶ್ ಆಳ್ವ, ಸಿಎಲ್ ಸಿ ಸಿ ನಿರ್ದೇಶಕರಾಗಿ ರಮಾ ವೈ.ಕೆ, ನೀರು ಮತ್ತು ಸ್ಯಾನಿಟೈಸೇಶನ್ ನಿರ್ದೇಶಕರಾಗಿ ಸಿ ಎ ಗಣೇಶ್ ಭಟ್, ಸಾರ್ಜೆಂಟ್ ನಿರ್ದೇಶಕರಾಗಿ ಬಾಲಕೃಷ್ಣ ನಾಯರ್,ಅಧ್ಯಕ್ಷರ ಆಯ್ಕೆ ನಿರ್ದೇಶಕರಾಗಿ ಚಂದ್ರಶೇಖರ ಪೇರಾಲು, ಬುಲೆಟಿನ್ ಎಡಿಟರ್ ಆಗಿ ಲತಾ ಮಧುಸೂದನ್, ಆರ್ ಸಿ ಸಿ ಚೆಯರ್ಮೆನ್ ಬಾಪೂ ಸಾಹೇಬ್, ಇಂಟ್ರಾಕ್ಟ್ ಕ್ಲಬ್ ಚೆಯರ್ಮೆನ್ ಆಗಿ ಮಾಧವ ಬಿ.ಟಿ., ರೋಟರಾಕ್ಟ್ ಚೆಯರ್ಮೆನ್ ಆಗಿ ಅವಿನಾಶ್ ಕುರುಂಜಿ ಪದಗ್ರಹಣ ಸ್ವೀಕರಿಸಿದರು.
ನಿರ್ಗಮನ ಕಾರ್ಯದರ್ಶಿ ಲತಾ‌ ಮಧುಸೂದನ್ ಸ್ವಾಗತಿಸಿದರು.
ಆರು ಮಂದಿಗೆ ಸನ್ಮಾನ
ಈ ಸಂದರ್ಭದಲ್ಲಿ
ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ಹಿರಿಯ ಆರೋಗ್ಯ ಸಹಾಯಕ ಕೆ.ವಾಸುದೇವ ನಾಯಕ್, ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ವಿಮಲೇಶ್ವರಿ, ಕೊಡಿಯಾಲಬೈಲ್ ವಿಮುಕ್ತಿಧಾಮದ ಗುರುವ ಕುತ್ತಮೊಟ್ಟೆ, ಮೆಸ್ಕಾಂ ಲೈನ್ ಮ್ಯಾನ್ ಹರೀಶ್ ಕುಮಾರ್, ಮೆಸ್ಕಾಂ ಮೆಕ್ಯಾನಿಕ್ ತಿಮ್ಮಪ್ಪ ಮೆಸ್ಕಾಂ ರಿಗೆ ಸನ್ಮಾನಿಸಿ ಗೌರವಿಸಲಾಯಿತು‌.
ನೂತನ ಸದಸ್ಯರ ಸೇರ್ಪಡೆ
ಕ್ಲಬ್ ಗೆ ನೂತನ ಸದಸ್ಯರಾಗಿ ಜಗದೀಶ್ ಅರಂಬೂರು ಹಾಗೂ ಪ್ರಭಾಕರ ನಾಯರ್ ಸಿ.ಎಚ್. ರನ್ನು ಸೇರಿಸಿಕೊಳ್ಳಲಾಯಿತು. ಇವರನ್ನು ಎಸ್. ಬಾಲಕೃಷ್ಣ ನಾಯರ್ ಪರಿಚಯಿಸಿದರು. ಎಂ.ಎಂ.ಸುರೇಶ್ ಚಂಗಪ್ಪ ರವರು ಅವರಿಗೆ ಪಿನ್ ಧಾರಣೆ ಮಾಡಿ ಕ್ಲಬ್ ಗೆ ಸ್ವಾಗತಿಸಿದರು.
ಕ್ಲಬ್ ಬುಲೆಟಿನ್ ಬಿಡುಗಡೆ ಗೊಳಿಸಲಾಯಿತು.
ನೂತನ ಕಾರ್ಯದರ್ಶಿ ಆನಂದ ಖಂಡಿಗ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

 

ಸ್ಮಶಾನ ಅಭಿವೃದ್ಧಿಗೆ ಸಹಕಾರ : ನಾಯರ್ ಘೋಷಣೆ
” ಸುಳ್ಯ ನಗರ ವ್ಯಾಪ್ತಿಯಲ್ಲಿ ಸುವ್ಯವಸ್ಥಿತ ಸ್ಮಶಾನ ಇಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೋನಾ ಕಾರಣದಿಂದ ನೂರಾರು ಮಂದಿ ಕೊನೆಯುಸಿರೆಳೆದಾಗ ಅಂತ್ಯಸಂಸ್ಕಾರಕ್ಕೆ ಅಲ್ಲಿನ ಸ್ಮಶಾನದಲ್ಲಿ ಸಾಲುಗಟ್ಟಿ ನಿಂತಿದ್ದುದನ್ನು ನಾವೆಲ್ಲ ನೋಡಿದ್ದೇವೆ. ಅಂತಹ ಪರಿಸ್ಥಿತಿ ಸುಳ್ಯದಲ್ಲಿ ಆಗಬಾರದು. ಅದಕ್ಕಾಗಿ ಇಲ್ಲಿನ ಸ್ಮಶಾನದ ಅಭಿವೃದ್ಧಿಗೆ ನಗರ ಪಂಚಾಯತ್ ಜತೆ ಸೇರಿ ರೋಟರಿ ಕ್ಲಬ್ ಪೂರ್ಣ ಸಹಕಾರ ನೀಡುತ್ತದೆ ” ಎಂದು ನೂತನ ರೋಟರಿ ಅಧ್ಯಕ್ಷ ಪ್ರಭಾಕರನ್ ನಾಯರ್ ಘೋಷಿಸಿದರು.

ಬ್ಲಡ್ ಬ್ಯಾಂಕ್ ಮಾಡಿ: ಸುಧಾಕರ ರೈ
” ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಕೊರತೆ ಇದೆ. ಪುತ್ತೂರು ರೋಟರಿ ಕ್ಲಬ್ ನವರು ಅಲ್ಲಿ ಬ್ಲಡ್ ಬ್ಯಾಂಕ್ ಮಾಡಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸುಳ್ಯದಲ್ಲಿ ಬೇರೆಲ್ಲೂ ಇಲ್ಲದಷ್ಟು ರಕ್ತದಾನಿಗಳಿದ್ದಾರೆ. ಬ್ಲಡ್ ಬ್ಯಾಂಕ್ ಬೇಕಾಗಿದೆ. ಆದ್ದರಿಂದ ಸುಳ್ಯ ರೋಟರಿ ಕ್ಲಬ್ ನವರು ಬ್ಲಡ್ ಬ್ಯಾಂಕ್ ಸ್ಥಾಪಿಸುವುದಿದ್ದರೆ ನಾವು ಚೇಂಬರ್ ಆಫ್ ಕಾಮರ್ಸ್ ನವರೂ ಸಹಕಾರ ನೀಡುತ್ತೇವೆ ” ಎಂದು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಶುಭಾಶಂಸನೆ ವೇಳೆ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.