Breaking News

ಪಂಚಾಯತ್ ಆಡಳಿತಕ್ಕೆ ತಿಳಿಸದೇ ಸ್ಮಶಾನದಲ್ಲಿ ಶವ ಸುಟ್ಟ ವಿಚಾರ

Advt_Headding_Middle

 

ಪಿ.ಡಿ.ಒ. ವಿರುದ್ಧ ಅಸಮಾಧಾನ : ಉಪಾಧ್ಯಕ್ಷ ಸಹಿತ ಸದಸ್ಯರ ಸಭಾತ್ಯಾಗ

ಉಬರಡ್ಕ ಗ್ರಾ.ಪಂ. ಸಾಮಾನ್ಯ ಸಭೆ ರದ್ದು – ಜು.13ಕ್ಕೆ ಮುಂದೂಡಿಕೆ

ಉಬರಡ್ಕದ ಕೊಡಿಯಾಲಬೈಲು ವಿಮುಕ್ತಿಧಾಮ ಸ್ಮಶಾನದಲ್ಲಿ ಶವ ಸುಟ್ಟ ವಿಚಾರ ಪಂಚಾಯತ್ ಆಡಳಿತ ಮಂಡಳಿಗೆ ಪಿ.ಡಿ.ಒ. ತಿಳಿಸಿಲ್ಲವೆಂಬ ವಿಚಾರದಲ್ಲಿ ಚರ್ಚೆ ನಡೆದು, ಉಪಾಧ್ಯಕ್ಷ ಸಹಿತ ಬಿಜೆಪಿ – ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ ಪರಿಣಾಮ ಅಧ್ಯಕ್ಷ ರು ಸಭೆಯನ್ನು ಜು.13 ಕ್ಕೆ ಮುಂದೂಡಿದ ಘಟನೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.

ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿಯವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.‌ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಸಹಿತ ಎಲ್ಲಾ ಸದಸ್ಯರು ಸಭೆಯಲ್ಲಿದ್ದರು.

ಸಭೆ ಆರಂಭವಾಗುತ್ತಿದ್ದಂತೆ ಜು.6 ರಂದು ಗ್ರಾ.ಪಂ. ನಲ್ಲಿ ನಡೆದ ಸಭೆಯ ನಿರ್ಣಯದಂತೆ ಪಿ.ಡಿ.ಒ. ಕೆಲಸ ಮಾಡಿಲ್ಲ. ಜು.8 ರ ಸಾಮಾನ್ಯ ಸಭೆಯಲ್ಲಿ ಚರ್ಚೆ ಯಾದ ಬಳಿಕ ಕೊಡಿಯಾಲಬೈಲು ಸ್ಮಶಾನದಲ್ಲಿ ಗ್ರಾಮದ ಹೊರತು ಪಡಿಸಿ ಹೊರಗಿನ ಶವ ಸುಡುವ ಕುರಿತು ನಿರ್ಣಯ ಕೈಗೊಳ್ಳುವ ಕುರಿತು ನಿರ್ಧಾರ ಮಾಡಲಾಗಿತ್ತು. ಆದರೆ ಜು.6 ರಂದು ಅಲ್ಲಿ ಹೊರಗಿನ ಶವ ಸುಡಲಾಗಿದೆ. ಇದು ಪಂಚಾಯತ್ ಆಡಳಿತದ ಗಮನಕ್ಕೆ ತಾರದಿರುವ ಬಗ್ಗೆ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಪಿ.ಡಿ.ಒ.ರನ್ನು ಪ್ರಶ್ನಿಸಿದರೆಂದೂ, ಪಿಡಿಒ ನೀಡಿದ ಉತ್ತರಕ್ಕೆ ಸದಸ್ಯರು ಅಸಮಾಧಾನ ಗೊಂಡರೆಂದೂ‌ ಬಳಿಕ ಉಪಾಧ್ಯಕ್ಷ ರು ಪಂಚಾಯತ್ ನಲ್ಲಿ ಆದ ನಿರ್ಣಯವನ್ನು ಸಿಬ್ಬಂದಿಗಳು ಅನುಷ್ಠಾನಕ್ಕೆ ತರುವುದಿಲ್ಲವಾದರೆ ನಾವು ಯಾಕೆ ಸಭೆಗೆ ಬರುವುದು ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರೆಂದು ತಿಳಿದು ಬಂದಿದೆ. ಉಳಿದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರೆಂದು ಗೊತ್ತಾಗಿದೆ.
ಜು.6 ರಂದು ಪಂಚಾಯತ್ ನಲ್ಲಿ ಕರೆದ ಸಭೆಯ ಬಗ್ಗೆ ತನಗೆ ಮಾಹಿತಿ ನೀಡದಿರುವ ಸದಸ್ಯ ಹರೀಶ್ ರೈ ಉಬರಡ್ಕರು ಪಿಡಿಒ ರನ್ನು ತರಾಟೆಗೆತ್ತಿಕೊಂಡರೆನ್ನಲಾಗಿದೆ.

ಎಲ್ಲರೂ ಹೋದ ಬಳಿಕ ಅಧ್ಯಕ್ಷರು ಜು.13 ರಂದು ಸಾಮಾನ್ಯ ಸಭೆ ಕರೆಯಲು ಪಿಡಿಒ ಗೆ ಸೂಚನೆ ನೀಡಿದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.