Breaking News

ಬಡ್ಡಡ್ಕ- ಕಲ್ಲಪಳ್ಳಿ ಗಡಿಪ್ರದೇಶದಲ್ಲಿ ಅಳವಡಿಸಿದ ಪಂಚಾಯತ್ ನಾಮಫಲಕ ನಾಪತ್ತೆ

Advt_Headding_Middle

ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಆಲೆಟ್ಟಿ -ಬಡ್ಡಡ್ಕ- ಕಲ್ಲಪಳ್ಳಿ ಗಡಿಪ್ರದೇಶದಲ್ಲಿ ಲಾಕ್ ಡೌನ್ ಸಂದರ್ಭ ಪೋಲೀಸ್ ಬಾರಿಕೇಡ್ ಇರಿಸಿ ಚೆಕ್ ಪೋಸ್ಟ್ ತೆರೆಯಲಾಗಿತ್ತು. ಕೇರಳದಿಂದ ಸುಳ್ಯ ಕಡೆಗೆ ಬರುವ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿತ್ತು. ಕಲ್ಲಪಳ್ಳಿ ಭಾಗದ ನಿವಾಸಿಗಳು ತಮ್ಮ ಎಲ್ಲಾ ರೀತಿಯ ಅಗತ್ಯ ವ್ಯವಹಾರಕ್ಕೆ ಸುಳ್ಯ ಪೇಟೆಯನ್ನು ಅವಲಂಬಿತರಾಗಿರುವ ಕಾರಣದಿಂದ ಇತ್ತೀಚೆಗೆ ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಗಡಿಪ್ರದೇಶದ ಚೆಕ್ ಪೋಸ್ಟ್ ಇರುವಲ್ಲಿಯೇ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಲಾಗಿತ್ತು.

ಇದೇ ಸ್ಥಳದಲ್ಲೇ ಪಂಚಾಯತ್ ವತಿಯಿಂದ ಸ್ವಾಗತ ಫಲಕ ಅಳವಡಿಸಲಾಗಿತ್ತು. ಕಳೆದ ವಾರ ಯಾರೋ ಕಿಡಿಗೇಡಿಗಳು ನಾಮಫಲಕನ್ನು ಹೊತ್ತೊಯ್ದಿರುವುದಲ್ಲದೆ ಬಾರಿಕೇಡ್ ಗೆ ಕಲ್ಲು ಹೊಡೆದು ಹಾನಿ ಮಾಡಿರುತ್ತಾರೆ. ಈ ಕುರಿತು ಸ್ಥಳೀಯರು ಪಂಚಾಯತ್ ನವರಿಗೆ ವಿಷಯ ತಿಳಿಸಿದ ಮೇರೆಗೆ ಸುಳ್ಯ ತಹಶೀಲ್ದಾರ್ ರವರ ಗಮನಕ್ಕೆ ತರಲಾಯಿತು.

ಜು.8 ರಂದು ತಹಶೀಲ್ದಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದ್ದಾರೆ. ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಕಾರ್ಯದರ್ಶಿ ಸೃಜನ್ ಎ.ಜಿ, ಗ್ರಾಮ ಲೆಕ್ಕಾಧಿಕಾರಿ ಶರತ್ ಕುಮಾರ್, ಸ್ಥಳೀಯ ನಿವಾಸಿ ಸುಧಾಕರ ಬಾಟೋಳಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.