Breaking News

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಜು.13ರಂದು ರಿಕ್ಷಾ ಚಾಲಕರ ಸಂಘ ಪ್ರತಿಭಟನೆ

Advt_Headding_Middle

ಕೊರೊನಾದಂತೆ ಬೆಲೆ ಏರಿಕೆಯೂ ಜೀವನ ಕಸಿಯುತ್ತಿದೆ : ಗೋಪಾಲಕೃಷ್ಣ ಭಟ್ ಕಳವಳ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಜು.13ರಂದು ಬಿ.ಎಂ.ಎಸ್ ಸಂಯೋಜಿತ ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈ ಕುರಿತು ಜು.9ರಂದು ಪತ್ರಿಕಾಗೋಷ್ಠಿ ನಡೆಸಿದ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹಾಗೂ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ವಿವರ ನೀಡಿದರು.

ಪೆಟ್ರೋಲ್ ಬೆಲೆಯು ಲೀಟರಿಗೆ ರೂ.104 ಮತ್ತು ಡೀಸೆಲ್ ರೂ.94 ಆಗಿದೆ. ಇದರಿಂದ ಚಾಲಕರ ಜೀವನ ಕಷ್ಟಕರವಾಗಿದೆ. ಇಂಧನ ಬೆಲೆ ಏರಿಕೆಯಾದರೂ ಪ್ರಯಾಣದರ ಪರಿಷ್ಕರಣೆ ಆಗದಿರುವುದರಿಂದ ಜೀವನದ ದೈನಂದಿನ ಬದುಕು ಅಲ್ಲೋಲಕಲ್ಲೋಲವಾಗಿದೆ. ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿ ಇಂಧನವನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕೆಂದು ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಸರಕಾರದ ಈ ನಡೆಯನ್ನು ಸಂಘವು ಖಂಡಿಸುತ್ತದೆ.

ಆದ್ದರಿಂದ ಜು.13ರಂದು ಸುಳ್ಯ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಆದ್ದರಿಂದ ಸುಳ್ಯ ಹಳೇ ಬಸ್ ನಿಲ್ದಾಣ, ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ದೊಡ್ಡತೋಟ, ಉಬರಡ್ಕ, ಕಲ್ಲುಗುಂಡಿ ನಿಲ್ದಾಣಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಪ್ರತಿಬಟನೆ ನಡೆಸಸುತ್ತೇವೆ. ಒಂದು ಗಂಟೆ ಅಟೋ ಸಂಚಾರ ಇರುವುದಿಲ್ಲ ಎಂದು ರಾಧಾಕೃಷ್ಣ ಬೈತಡ್ಕ ಹೇಳಿದರು.

ಗೋಪಾಲಕೃಷ್ಣ ಭಟ್ ರವರು ಮಾತನಾಡಿ, “ಕೊರೊನಾದಂತೆ ಬೆಳೆ ಏರಿಕೆಯೂ ನಮ್ಮ ಜೀವನ ಕಸಿಯುತ್ತಿದೆ. ಜನಪ್ರತಿನಿಧಿಗಳು ಅಧಿಕಾರಕ್ಕೆ ಬರುವವರೆಗೆ ಮಾತ್ರ. ಬಳಿಕ ನಮ್ಮ ಮಾತು ನಗಣ್ಯ. ಇದು ನಮ್ಮ ಜೀವ ಮತ್ತು ಜೀವನದ ಸಮಸ್ಯೆ. ಕಪ್ಪು ಭಾವವುಟ ಹಿಡಿದು ಪ್ರತಿಭಟನೆಗೆ ನಿರ್ಧರಿಸಿದೆವು.

ದೊಡ್ಡ ರೀತಿಯ ಪ್ರತಿಭಟನೆಗೆ ಅವಕಾಶ ಸಿಗಲಿಲ್ಲ. ನಾಳಿದ್ದು ನಡೆಯುವ ಪ್ರತಿಭಟನೆ ಸರಕಾರಗಳಿಗೆ ಎಚ್ಚರಿಕೆಯ ಕರೆ ಗಂಟೆ. ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಸಂಘದ ಕಾನೂನು ಸಲಹೆಗಾರ ಭಾಸ್ಕರ ರಾವ್, ಪ್ರ.ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.