Breaking News

ವಿಕಲಚೇತನರಿಗೂ ಕಿಟ್ ನೀಡಲು ಜಿಲ್ಲಾ ವಿಕಲಚೇತನರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಆಗ್ರಹ

Advt_Headding_Middle

ವಿಕಲಚೇತನ ಹಾಗೂ ಎಂಡೋ ಸಂತ್ರಸ್ತರಿಗೂ ಆಹಾರ ಕಿಟ್ ನೀಡಬೇಕೆಂದು ಜಿಲ್ಲಾ ವಿಕಲಚೇತನರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಒತ್ತಾಯಿಸಿದ್ದಾರೆ.


ಕೊರೋನಾ ಸಂಕಷ್ಟದ ಸಮಯದಲ್ಲಿ ಎಲ್ಲಾ ವರ್ಗದ ಜನರಿಗೆ ಹಲವಾರು ರೀತಿಯ ಕಿಟ್‌ಗಳನ್ನು ಹಲವಾರು ಸಂಘ ಸಂಸ್ಥೆಗಳು. ಸೇವಾ ಭಾರತಿಯವರು ನೀಡುತ್ತಿದ್ದು, ಸಮಾಜದಲ್ಲಿ ಅತ್ಯಂತ ಕಷ್ಟ ಪಡುತ್ತಿರುವ ವಿಕಲಚೇತನರು ಹಾಗೂ ಎಂಡೋಪೀಡಿತರು ತಾಲ್ಲೂಕಿನಲ್ಲಿ ಹಲವಾರು ಮಂದಿ ಇದ್ದಾರೆ. ಒಂದು ಹೊತ್ತು ಊಟಕ್ಕೂ ಪರದಾಟ ಮಾಡುವ ವಿಶೇಚೇತನರು ಔಷಧಿಗಾಗಿ ಪರದಾಡುವವರು ತುಂಬಾ ಜನ ಇದ್ದಾರೆ, ಇಂತವರನ್ನು ಹುಡುಕಿ ಹುಡುಕಿ ಆಹಾರ ಕಿಟ್‌ಗಳನ್ನು ನೀಡಿದರೆ ಒಳಿತು. ಎಲ್ಲಾ ಸಂಘ ಸಂಸ್ಥೆಯವರು, ನಮ್ಮ ಕ್ಷೇತ್ರದ ಶಾಸಕರು, ಸಚಿವರು, ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಪ್ರವೀಣ್ ನಾಯಕ್ ಆಗ್ರಹಿಸಿದ್ದಾರೆ. ಯಾರಾದರೂ ತಾಲೂಕಿನಲ್ಲಿ ಕಿಟ್ ನೀಡುವವರು ಇದ್ದಲ್ಲಿ ಹಾಗೂ ವಿಕಲಚೇತನರ ಮಾಹಿತಿ ಬೇಕಾದರೆ ತಮ್ಮ ಮೊಬೈಲ್ ನಂಬರ್ ೯೮೪೪೫೦೭೯೭೮ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.