ಪಂಜ ಕರಿಕ್ಕಳದಲ್ಲಿ ಮನೆಗೆ ಅಧಿಕಾರಿಗಳ ದಾಳಿ

Advt_Headding_Middle

7 ಮಂದಿ ಬಾಲಕಾರ್ಮಿಕರು ವಶ

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಕರಿಕ್ಕಳದಲ್ಲಿರುವ ವಿಶ್ವನಾಥ ಭಟ್ ಎಂಬವರ ಮನೆಗೆ ನಿನ್ನೆ ಬೆಳಿಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ, ಬಾಲಕಾರ್ಮಿಕರನ್ನು ದುಡಿಸುತ್ತಿದ್ದರೆನ್ನಲಾದ ಪ್ರಕರಣವನ್ನು ಪತ್ತೆಹಚ್ಚಿದ್ದು, ಕೇಸು ದಾಖಲಿಸಿಕೊಂಡ ಪ್ರಕರಣ ವರದಿಯಾಗಿದೆ. ಬಚ್‌ಪನ್ ಬಚಾವೋ ಆಂದೋಲನ್ ಎಂಬ ಸಂಸ್ಥೆಯು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ನೀಡಿದ ದೂರಿನನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀಯವರ ನೇತೃತ್ವದಲ್ಲಿ, ಸುಳ್ಯ ಸಿಡಿಪಿಓರವರ ಉಪಸ್ಥಿತಿಯಲ್ಲಿ ದಾಳಿ ನಡೆಸಿ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ.


ತಾವು ಸಾಮಾಜಿಕ ಸೇವೆ ಮಾಡುತ್ತಿದ್ದು, ದುರ್ಬಲ ಕುಟುಂಬದವರನ್ನು ಸಾಕುತ್ತಿರುವುದಾಗಿ ಆ ಮನೆಯವರು ಹೇಳಿದ್ದಾರೆಂದು ತಿಳಿದುಬಂದಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎರಡು ದಿನಗಳೊಳಗೆ ಸಲ್ಲಿಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
“ಒಟ್ಟು 7 ಮಂದಿ ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಇಂದು ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದ ಮುಂದೆ ಹಾಜರುಪಡಿಸಲಾಗುತ್ತಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ವಿಶೇಷಚೇತನರು ಕೂಡ ಈ ಮನೆಯಲ್ಲಿದ್ದು, ಸರಿಯಾದ ದಾಖಲೆ ಪತ್ರಗಳು ಕಂಡುಬಾರದಿರುವುದರಿಂದ ಸೂಕ್ತ ತನಿಖೆ ನಡೆಯಬೇಕಾಗಿದೆ” ಎಂದು ತಹಶೀಲ್ದಾರ್ ಅನಿತಾಲಕ್ಷ್ಮಿ ತಿಳಿಸಿದ್ದಾರೆ.

ಸುಳ್ಯ ಸಿಡಿಪಿಒ ಶ್ರೀಮತಿ ರಶ್ಮಿ ನೆಕ್ರಾಜೆಯವರು ಈ 7 ಮಂದಿ ಮಕ್ಕಳನ್ನು ಮತ್ತು ನಾಲ್ಕು ಮಂದಿ ಮಹಿಳೆಯರನ್ನು ಮಂಗಳೂರಿನಲ್ಲಿರುವ ಮಕ್ಕಳ ರಕ್ಷಣಾ ಸಮಿತಿಯವರ ಮುಂದೆ ಹಾಜರುಪಡಿಸಲು ಕರೆದೊಯ್ದಿದ್ದಾರೆ. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.