Breaking News

ಸುಬ್ರಹ್ಮಣ್ಯ : ಶಾಲಾಭಿವೃದ್ದಿ ಸಮಿತಿಯ 7 ಜನರ ಮೇಲೆ ಕರ್ತವ್ಯ ನಿಂದನೆ, ಅಟ್ರಾಸಿಟಿ ಕೇಸು ದಾಖಲು

Advt_Headding_Middle

ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿಯ 7 ಮಂದಿ ಮಾಜಿ ಸದಸ್ಯರ ಮೇಲೆ ಶಾಲಾ ಮುಖ್ಯೋಪಾಧ್ಯಾಯಿನಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದು, ಅವರ ಮೇಲೆ ಕರ್ತವ್ಯ ನಿಂದನೆ, ಅಟ್ರಾಸಿಟಿ ಕೇಸು ದಾಖಲಾದ ಘಟನೆ ಜು.2 ರಂದು ವರದಿಯಾಗಿದೆ.

ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಮಾಜಿ ಸದಸ್ಯರುಗಳಾದ ಗಣೇಶ್ ,ದಾಮೋದರ, ಮಹಾಬಲ ರೈ, ಸುಕುಮಾರ, ಜಯಶ್ರೀ, ಉಮೇಶ್, ಅಣ್ಣಿ ಇವರುಗಳ ಮೇಲೆ ದೂರು ನೀಡಿದ್ದು ಈ ಏಳು ಮಂದಿ ಕಳೆದ ಮೂರು ವರ್ಷಗಳಿಂದ ಶಾಲೆಗೆ ಬಂದು ಶಾಲೆಗೆ ಸಂಬಂಧಿಸಿದ ಎಲ್ಲಾ ಲೆಕ್ಕಾಚಾರ ಗಳನ್ನು ತಿಳಿದಿದ್ದರೂ ತನ್ನ ಮೇಲೆ ಶಾಲಾ ಅನುದಾನ ದುರುಪಯೋಗದ ಆರೋಪ ಮಾಡಿದಲ್ಲದೆ, ಗ್ರಾ.ಪಂ. ಸಭೆ, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್, ಡಿಡಿಪಿಐ ಮುಂತಾದೆಡೆ ದೂರು ನೀಡಿದ್ದಾರೆ. ಅಲ್ಲದೆ ಶಾಲೆಗೆ ಬಂದು ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿದಲ್ಲದೇ ತನ್ನ ಬಗ್ಗೆ ಅಪಪ್ರಚಾರ ಮಾಡಿ ಪತ್ರಿಕಾ ಹೇಳಿಕೆ ನೀಡಿ ಮಾನಹಾನಿ ಮಾಡಿರುವುದಾಗಿ ಮುಖ್ಯೋಪಾಧ್ಯಾಯಿನಿ ಸುಶೀಲಾ ಸುಬ್ರಹ್ಮಣ್ಯ ಠಾಣೆಗೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಏಳೂ ಜನರ ಮೇಲೆ ಕರ್ತವ್ಯ ನಿಂದನೆ, ಅಟ್ರಾಸಿಟಿ ಕೇಸು ದಾಖಲಾಗಿದ್ದು ಕಲಂ IPC 1860 (U/S 353,499, 500,34) ನಂ. ರಂತೆ ಕೇಸು ದಾಖಲಾಗಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.