ಕೊಲ್ಲಮೊಗ್ರು: ಕಟ್ಟ ರಸ್ತೆ ತಡೆಗೆ ತೆರವಿಗೆ ಹೈಕೋರ್ಟ್ ಆದೇಶ ಹಿನ್ನೆಲೆ

Advt_Headding_Middle

ರಸ್ತೆ ತೆರವು ಕಾರ್ಯಾಚರಣೆ ನಡೆಸಿದ ಇಲಾಖೆಗಳು

ಕೊಲ್ಲಮೊಗ್ರದ ಕಟ್ಟ ಎಂಬಲ್ಲಿ ಚಂದ್ರಶೇಖರ ಭಟ್ ಮತ್ತು ಕೃಷ್ಣಮೂರ್ತಿ ಭಟ್ ಎಂಬವರಿಗಿದ್ದ ರಸ್ತೆ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಿದ್ದು ರಸ್ತೆ ತೆರವುಗೊಳಿಸಿದ ಘಟನೆ ಜು.7 ರಂದು ನಡೆದಿದೆ.

ಕಟ್ಟ ಎಂಬಲ್ಲಿ ಕೃಷ್ಣಮೂರ್ತಿ ಎಂಬವರ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಚಂದ್ರಶೇಖರ ಕೆ.ಎಂ ಎಂಬವರು ಕಬ್ಬಿಣದ ಗೇಟು ಅಳವಡಿಸಿ ಕಲ್ಲಿನ ಕಾಂಪೌಂಡ್ ನಿರ್ಮಿಸಿ ಅಡಿಕೆ ಹಾಗೂ ಬಾಳೆ ಗಿಡಗಳನ್ನು ನೆಟ್ಟು ಆತಂಕ ಪಡಿಸಿದ್ದರೆನ್ನಲಾಗಿದೆ. ಈ ಬಗ್ಗೆ ಕೃಷ್ಣ ಮೂರ್ತಿ ಅವರು ಸರ್ವೆ ನಂ. 296/1 ಕ್ಕೆ ಸ.ನಂ 159/3ಎ, 159/3ಬಿ, ಮತ್ತು 164/4 ಮುಖಾಂತರ ಸಂಪರ್ಕಿಸುವ ರಸ್ತೆಯನ್ನು ಚಂದ್ರಶೇಖರ ಆತಂಕ ಪಡಿಸಿದ್ದು ಈ ಬಗ್ಗೆ ದೂರು ದಾಖಲಿಸಿದ್ದರು.

ಈ ಬಗ್ಗೆ ಹಲವು ಹೋರಾಟಗಳು ನಡೆದಿದ್ದವು. ಇತ್ತೀಚೆಗೆ ಹೈಕೋರ್ಟ್ ತೀರ್ಪು ಬಂದಿದ್ದು ಅದನ್ನು ಉಲ್ಲೇಖಿಸಿ ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮೀಯವರು ಚಂದ್ರಶೇಖರ ಅವರಿಗೆ ಆತಂಕ ಗೊಳಿಸಿದ ಸ್ಥಳದಲ್ಲಿದ್ದ ಗೇಟು, ಕಲ್ಲಿನ ಕಾಂಪೌಂಡ್, ಅಡಿಕೆ, ಬಾಳೆ ಗಿಡಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.

ಇದಕ್ಕೆ ತಪ್ಪಿದಲ್ಲಿ ಮೂರು ದಿನಗಳಲ್ಲಿ ಇಲಾಖಾಧಿಕಾರಿಗಳಿದ್ದು ಆಂತಕ ತೆರವುಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಪಂಜ ನಾಡ ಕಛೇರಿಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಗ್ರಾ.ಪಂ ಪಿಡಿಒ, ಸುಬ್ರಹ್ಮಣ್ಯ ಪೋಲಿಸರುಗಳಿದ್ದು ಅಲ್ಲಿ ನೆಟ್ಟಿರುವ ಅಡಿಕೆ, ಬಾಳೆ, ಗೇಟು, ಕಲ್ಲಿನ ಧರೆಗಳನ್ನು ತೆರವುಗೊಳಿಸಲಾಗಿದ್ದು ಇಲಾಖಾ ವತಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.