ಸುಳ್ಯ ಲಯನ್ಸ್ ಕ್ಲಬ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle

ಅಧ್ಯಕ್ಷರಾಗಿ ಆನಂದ ಪೂಜಾರಿ

ಕಾರ್ಯದರ್ಶಿಯಾಗಿ ರಮಿತ ಜಯರಾಂ

ಖಜಾಂಜಿಯಾಗಿ ರಾಮಚಂದ್ರ ಎಂ.

ಸುಳ್ಯ ಲಯನ್ಸ್ ಕ್ಲಬ್‌ನ 49ನೇ ಅಧ್ಯಕ್ಷರಾಗಿ 2021-22ನೇ ಸಾಲಿನಲ್ಲಿ ಲಯನ್ ಆನಂದ ಪೂಜಾರಿರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇವರು ಸುಳ್ಯದ ಗಾಂಧಿನಗರದಲ್ಲಿರುವ ಆನಂದ್ ಎಲೆಕ್ಟ್ರಿಕಲ್ಸ್‌ನ ಮಾಲಕರಾಗಿದ್ದು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘವೂ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ದುಡಿದಿರುತ್ತಾರೆ ಮತ್ತು ಕೊಡುಗೈದಾನಿಯಾಗಿರುತ್ತಾರೆ.

 

                                                                    ಆನಂದ ಪೂಜಾರಿ

ಇವರ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಸುಳ್ಯ ಲಕ್ಷ್ಮಿ ಗಾರ್ಮೆಂಟ್ಸ್‌ನ ಮಾಲಕಿಯಾಗಿರುವ ಲಯನ್ ಶ್ರೀಮತಿ ರಮಿತಾಜಯರಾಂ ದೇರಪ್ಪಜ್ಜನಮನೆರವರು ಆಯ್ಖೆಯಾಗಿದ್ದು ಇವರು ಮೂಲತಃ ಗುತ್ತಿಗಾರಿನ ದೇರಪ್ಪಜ್ಜನಮನೆಯವರಾಗಿದ್ದು ಲಕ್ಷ್ಮಿ ಹೋಂ ನರ್ಸರಿ, ಲಕ್ಷ್ಮಿ ಹೋಂ ಪ್ರಾಡಕ್ಟ್ಸ್ ಮತ್ತು ಟ್ರಾನ್ಸ್‌ಪೋರ್ಟ್ ಉದ್ಯಮವನ್ನು ನಡೆಸುತ್ತಿದ್ದು ಗುತ್ತಿಗಾರು ಜೇಸಿರೆಟ್ ಸಂಸ್ಥೆಯ ಪದಾಧಿಕಾರಿಯಾಗಿ, ಸುಳ್ಯ ಲಯನೆಸ್ ಸಂಸ್ಥೆಯ ಮಾಜೀ ಖಜಾಂಜಿಯಾಗಿ, ಎಲ್ ಐ ಸಿ ಮತ್ತು ಯು ಐ ಸಿ ಪ್ರತಿನಿಧಿಯಾಗಿ ಕೂಡಾ ಕಾರ್ಯನಿರ್ವಹಿಸುತ್ತಾ ಬಹುಮುಖ ಪ್ರತಿಭೆಯ ಮಹಿಳೆಯಾಗಿದ್ದಾರೆ.

                                                                   ರಮಿತ ಜಯರಾಂ

ಖಜಾಂಜಿಯಾಗಿ ಸುಳ್ಯ ಹಳೆಗೇಟಿನಲ್ಲಿರುವ ಡಿ ಆರ್ ಗಾರ್ಮೆಂಟ್ಸ್‌ನ ಮಾಲಕರಾದ ಲಯನ್ ರಾಮಚಂದ್ರ ಎಂ ರವರು ಆಯ್ಖೆಯಾಗಿದ್ದು ಗಾರ್ಮೆಂಟ್ಸ್ ಉದ್ಯಮದಲ್ಲಿ ಸಗಟು ವ್ಯವಹಾರವನ್ನು ನಡೆಸುತ್ತಿದ್ದಾರೆ.

 

                                                                   ರಾಮಚಂದ್ರ ಎಂ.
ಜುಲೈ 17ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿರುವ ತಮ್ಮ ಲಯನ್ಸ್ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ಇವರು ಲಯನ್ ಜಿಲ್ಲೆಯ ದ್ವಿತೀಯ ಉಪರಾಜ್ಯಪಾಲರಾಗಿರುವ ಕಿನ್ನಿಗೋಳಿಯ ಲಯನ್ ಡಾ. ಮೆಲ್ವಿನ್ ಡಿಸೋಜಾ ಎಂಜೆಫ್‌ರವರಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.