ಜು.17ರಂದು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ತಂಡದ ಪದಪ್ರದಾನ ಸಮಾರಂಭ

Advt_Headding_Middle

50 ಸಾವಿರ ಗಿಡ ನೆಡುವುದು ಸೇರಿದಂತೆ ಕ್ಲಬ್‌ನಿಂದ ಹಲವು ಯೋಜನೆ

2021-22ನೇ ಸಾಲಿನ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆನಂದ ಪೂಜಾರಿ, ಕಾರ್ಯದರ್ಶಿಯಾಗಿ ಶ್ರೀಮತಿ ರಮಿತಾ ಜಯರಾಮ ದೇರಪಜ್ಜನಮನೆ ಹಾಗೂ ಕೋಶಾಧಿಕಾರಿಯಾಗಿ ರಾಮಚಂದ್ರ ಎಂ ಆಯ್ಕೆಯಾಗಿದ್ದು ಇವರ ತಂಡದ ಪದ ಪ್ರದಾನ ಸಮಾರಂಭ ಜು.17ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.


ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆನಂದ ಪೂಜಾರಿಯವರು, ಸುಳ್ಯ ಲಯನ್ಸ್ ಕ್ಲಬ್ ಕಳೆದ ೪೮ ವರ್ಷಗಳಿಂದ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ವರ್ಷ ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ದೇಶಕ್ಕಾಗಿ ಮೊದಲು, ವಿಶೇಷ ಚೈತನ್ಯ ಮಕ್ಕಳ ಶ್ರೇಯೋಭಿವೃದ್ಧಿ, ಆರೋಗ್ಯ ವರ್ಧಕ ಯೋಗ ಕಾರ್ಯಕ್ರಮಗಳು, ಮಾನವ ಅಂಗಾಂಗ ದಾನ, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಮತ್ತು ಶಿಕ್ಷಣಕ್ಕೆ ಪ್ರಾಮುಖ್ಯತೆ ಹಾಗೂ ಲಯನ್ಸ್ ಇಮೇಜ್‌ನ್ನು ಹೆಚ್ಚಿಸಬಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶನ ಇದೆ.

ಜತೆಗೆ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ.ಜಾತಿ, ಪಂಗಡ ಹಾಗೂ ಬಡ ವರ್ಗದ ಮನೆಗಳನ್ನು ಕೇಂದ್ರವಾಗಿಟ್ಟುಕೊಂಡು ಫಲಾನುಭವಿಗಳಿಗೆ ಗ್ರಾ.ಪಂ., ಇಲಾಖೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಸಿರೇ ಉಸಿರು ವನಮಹೋತ್ಸವ ಕಾರ್‍ಯಕ್ರಮ , ಆಲೆಟ್ಟಿಯಿಂದ ಬಡ್ಡಡ್ಕದವರೆಗೆ ಪಂಚಾಯತ್‌ನವರು ತೊರಿಸಿದ ಜಾಗದಲ್ಲಿ ಸಾಲು ಮರ ಯೋಜನೆ ಹೀಗೆ ಒಟ್ಟಾಗಿ ಗಿಡಗಳು ಲಭ್ಯತೆಯ ಆಧಾರದಲ್ಲಿ ೫೦ ಸಾವಿರ ಅಥವಾ ಅದಕ್ಕಿಂತ ಹೆಚ್ಚು ಗಿಡಗಳನ್ನು ನೆಡುವ ವನಮಹೋತ್ಸವ ಯೋಜನೆ ಇದೆ. ಅಲ್ಲದೆ ಸುಳ್ಯ ತಾಲೂಕು ಮಟ್ಟದಲ್ಲಿ ಆದಾಯ ರಹಿತ ಅತೀ ಬಡ ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಕನಿಷ್ಠ ವಿದ್ಯುತ್ ಸಂಪರ್ಕ ಮೂಲ ಬಡ ಕಣ್ಣುಗಳಿಗೆ ಬೆಳಕು ಯೋಜನೆ, ಬಡ ಕುಟುಂಬದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಗೆ ಇನ್ನೂ ಕೂಡಾ ಶಾಲಾ ಶುಲ್ಕ ನೀಡಲಾಗದೆ ಶಾಲಾ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸಿ ವಿದ್ಯಾದಾನ ಯೋಜನೆ , ಸುಳ್ಯ ತಾಲೂಕಿನಲ್ಲಿ ಒಂದು ಬಡ ಕುಟುಂಬಕ್ಕೆ ಸದೃಡ ಮನೆ ನೀಡುವ ಮೂಲಕ ಆಸರೆ ಯೋಜನೆ, ಬರಡು ಗದ್ದೆಯನ್ನು ಆಯ್ಕೆ ಮಾಡಿಕೊಂಡು ಬೇಸಾಯ ಪ್ರಾರಂಭಿಸಿ ಗ್ರಾಮದ ಬಡ ಕುಟುಂಬಗಳಿಗೆ ಅನ್ನದಾನ ಯೋಜನೆ, ನಿರಂತರ ಒಂದು ತಿಂಗಳು ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ಕೇಂದ್ರವನ್ನು ಲಯನ್ಸ್ ಸೇವಾ ಸದನದಲ್ಲಿ ನಡೆಸುವ ಯೋಜನೆ ಹೀಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.

 

ಪತ್ರಿಕಾಗೋಷ್ಠಿಯಲ್ಲಿ ನೂತನ ಕಾರ್ಯದರ್ಶಿ ರಮಿತಾ ಜಯರಾಮ್, ಕೋಶಾಧಿಕಾರಿ ರಾಮಚಂದ್ರ, ಕ್ಲಬ್ ಅಡ್ಮಿನಿಸ್ಟ್ರೇಟರ್ ಜಯರಾಮ ದೇರಪ್ಪಜ್ಜನಮನೆ, ಕ್ಲಬ್ ಮಾರ್ಕೆಟಿಂಗ್ ಕಮ್ಯೂನಿಕೇಶನ್ ಚೇರ್‌ಪರ್ಸನ್ ಡಾ| ಲಕ್ಷ್ಮೀಶ್ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.