Breaking News

ಜು.13 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಬೃಹತ್ ವನಸಂವರ್ಧನಾ ಕಾರ್ಯಕ್ರಮ

Advt_Headding_Middle

ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಅಂಗಾರ, ಸಂಸದ ಕಟೀಲ್, ದ.ಕ ಜಿಲ್ಲೆಯ ಶಾಸಕರುಗಳು ಭಾಗಿ

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ ಮಾಹಿತಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಜು.13 ರಂದು ಬೃಹತ್ ವನಸಂವರ್ಧನಾ ಕಾರ್ಯಕ್ರಮ ಜರಗಲಿದ್ದು ಈ ಸಂದರ್ಭ ಸುಮಾರು 2 ಸಾವಿರ ಗಿಡ ನೆಡುವ ಕಾರ್ಯಕ್ರಮ ಜರುಗಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ ಮಾಹಿತಿ ನೀಡಿದರು. ಅವರು ಜು.10 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ಶ್ರೀ ದೇವಳದ ಪ್ರವೇಶ ದ್ವಾರದಿಂದ ಕುಮಾರಧಾರದವರೆಗೆ ಮತ್ತು ಕಾಶಿಕಟ್ಟೆಯಿಂದ ಆದಿಸುಬ್ರಹ್ಮಣ್ಯದವರೆಗೆ ಮಾಸ್ಟರ್‌ಪ್ಲಾನ್ ಯೋಜನೆಯ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟೀಕರಣ ಕಾಮಗಾರಿ ನಡೆದ ಇಕ್ಕೆಲಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಸಂಬಂಧವಾಗಿ ಪ್ರಸ್ತಾಪಿತ ರಸ್ತೆಗಳ 14 ವಿವಿಧ ಕಡೆಗಳಲ್ಲಿ ಏಕಕಾಲದಲ್ಲಿ ವಿವಿಧ ಸಸ್ಯಗಳನ್ನು ನೆಡುವ “ ಬೃಹತ್ ವನ ಸಂವರ್ಧನ ಕಾರ್ಯಕ್ರಮ ವನ್ನು ಶ್ರೀ ದೇವಳದ ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವನ್ನು ಸೇವಾ ಭಾರತಿ ಸುಳ್ಯ, ಕರ್ನಾಟಕ ಅರಣ್ಯ ಇಲಾಖೆ ಇವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ . ಅಂಗಾರ, ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕರುಗಳು , ಮಾನ್ಯ ಧಾರ್ಮಿಕ ದತ್ತಿ ಆಯುಕ್ತರು , ಮಾನ್ಯ ದ.ಕ.ಜಿಲ್ಲಾಧಿಕಾರಿಗಳು , ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು ಮತ್ತಿತರ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿರುತ್ತಾರೆ.

ನೇರಳೆ , ಪನ್ನನೇರಳೆ , ಕೆಂಡಸಂಪಿಗೆ , ರೆಂಜ , ಬಿಲ್ವಪತ್ರೆ , ಸೀತಾ ಅಶೋಕ , ಪಾರಿಜಾತ , ಪೇರಳೆ , ಆರ್ತಿ , ಶ್ರೀಗಂಧ , ಬಾದಾಮು ಇತ್ಯಾದಿ ವಿವಿಧ ಜಾತಿಯ ಸುಮಾರು 2,000 ಕ್ಕೂ ಮಿಕ್ಕಿದ ಸಸ್ಯಗಳನ್ನು ಈ ಸಂದರ್ಭದಲ್ಲಿ ನೆಡಲು ಉದ್ದೇಶಿಸಲಾಗಿದೆ . ಎಂದವರು ಮಾಹಿತಿ ನೀಡಿದರು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಸನ್ನ ದರ್ಬೆ, ಲೊಕೇಶ್, ಮನೋಹರ ರೈ, ಶೋಬಾ ಗಿರಿಧರ್, ವನಜಾ ಭಟ್ ಮಾಸ್ಟರ್‌ ಪ್ಲಾನ್ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು, ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಅವರುಗಳಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.