ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜಯರಾಂ ದೇರಪ್ಪಜ್ಜನಮನೆ ನೇಮಕ

Advt_Headding_Middle

ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ದಕ್ಷಿಣಕನ್ನಡ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ ಜಿಲ್ಲೆ 317-ಡಿ ಇದರ 2021-22 ನೇ ಸಾಲಿಗೆ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜಯರಾಂ ದೇರಪ್ಪಜ್ಜನಮನೆರವರು ನೇಮಕಗೊಂಡಿರುತ್ತ್ತಾರೆ. ಈ ಆಯ್ಕೆ ಪ್ರಕ್ರಿಯೆಯನ್ನು ಇತ್ತೀಚೆಗೆ ಬಂಟ್ವಾಳದ ಬಂಟರ ಭವನದಲ್ಲಿ ಜರಗಿದ ಜಿಲ್ಲಾಸಮ್ಮೇಳನದಲ್ಲಿ ಪ್ರಕೃತ ಸಾಲಿನ ಲಯನ್ ಜಿಲ್ಲಾ ರಾಜ್ಯಪಾಲರಾದ ವಸಂತಕುಮಾರ್ ಶೆಟ್ಟಿರವರು ನಡೆಸಿ ಅಧಿಕೃತವಾಗಿ ಘೋಷಿಸಿರುತ್ತಾರೆ. ಈ ನಾಲ್ಕು ಕಂದಾಯ ಜಿಲ್ಲೆಗಳ 104 ಲಯನ್ಸ್ ಕ್ಲಬ್ ಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು ಈ ಜಿಲ್ಲೆಗಳಲ್ಲಿ ಲಯನ್ಸ್ ಕ್ಲಬ್‌ಗಳ ಮೂಲಕ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ಹೆಚ್ಚು ನಡೆಸುವ ಮುಖಾಂತರ ಲಯನ್ಸ್ ಕ್ಲಬ್ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕ ಸಧಭಿಪ್ರಾಯ ಮೂಡಿಸುವಲ್ಲಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ನೀಡುವ ಮಹತ್ತರ ಜವಾಬ್ಧಾರಿಯನ್ನು ಹೊಂದಿರುತ್ತಾರೆ.

ಸುಳ್ಯ ಲಯನ್ಸ್ ಕ್ಲಬ್‌ನಲ್ಲಿ ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಪ್ರಾಂತ್ಯ, ಜಿಲ್ಲಾ ಹಾಗೂ ಮಲ್ಟಿಪಲ್ ವಿಭಾಗ ಮಟ್ಟದಲ್ಲೂ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿ ನಿರಂತರವಾಗಿ ವಲಯಾಧ್ಯಕ್ಷ ಹಾಗೂ ಪ್ರಾಂತ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ತಮ್ಮ ಪ್ರಾಂತೀಯ ಸಮ್ಮೇಳನದ ನೆನಪಿಗಾಗಿ ಸಾರ್ವಜನಿಕ ಸೇವಾ ಕೊಡುಗೆಯಾಗಿ ಸುಳ್ಯದ ಉಬರಡ್ಕದಲ್ಲಿ ಸ್ಥಳೀಯ ಪಂಚಾಯತ್, ಸರಕಾರ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ವಿಮುಕ್ತಿ ಸಾರ್ವಜನಿಕ ರುದ್ರಭೂಮಿಯನ್ನು ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಬಹುದಾಗಿದೆ. ಆಗಸ್ಟ್ ೨೮ ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯಲಿರುವ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭದಲ್ಲಿ ಇವರು ಪ್ರತ್ಞಿ ವಿಧಿಯನ್ನು ಸ್ವೀಕರಿಸಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.