ಅಪಘಾತ ಪಡಿಸಿದ ಆರೋಪಿ ದೋಷಮುಕ್ತಿ

Advt_Headding_Middle

 

 

ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ದೋಷಮುಕ್ತಿಗೊಳಿಸಿ ನ್ಯಾಯಾಲಯ ಆದೇಶ ಮಾಡಿದೆ.

2018ರ ಸೆ.28ರಂದು ಪದ್ಮಯ್ಯ.ಕೆ ಎಂಬುವರು ತಮ್ಮ ಮೋಟಾರ್ ಬೈಕ್ ನಂಬರ್ ಕೆ.ಎ. 21ವಿ 4964 ರಲ್ಲಿ ಸೋಮನಾಥ ಎಂಬುವವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೆಳ್ಳಾರೆ ಕಡೆಯಿಂದ ನಿಂತಿಕಲ್ಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ ಸುಮಾರು 6.45 ರ ವೇಳೆಗೆ ಬೆಳ್ಳಾರೆ ಗ್ರಾಮದ ಗೌರಿ ಹೊಳೆ ಸೇತುವೆಯಲ್ಲಿ ತನ್ನ ಎದುರು ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಆತೀ ವೇಗದಿಂದ ಹಾಗೂ ಅಜಾಗುರುಕತೆಯಿಂದ ಹಿಂದಿಕ್ಕುವ ಬರದಲ್ಲಿ ರಸ್ತೆಯ ತೀರಾ ಬಲಬಧಿಗೆ ಚಲಾಯಿಸಿಕೊಂಡು ಬಂದು ಕೆ
ಎಸ್.ಆರ್.ಟಿ.ಸಿ. ಬಸ್ ಒಂದಕ್ಕೆ ಡಿಕ್ಕಿ ಮಾಡಿದ್ದು, ಡಿಕ್ಕಿಯ ಪರಿಣಾಮ ಸಹ ಸವಾರ ಸೋಮನಾಥ ಎಂಬುವರು ರಸ್ತೆಗೆ ಎಸೆಯಲ್ಪಟ್ಟು ಅವರ ತಲೆಯ ಭಾಗಕ್ಕೆ ಹಾಗೂ ಇತರ ಭಾಗಕ್ಕೆ ತೀವ್ರ ಗಾಯ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮದ್ಯೆ ಮೃತಪಟ್ಟಿದ್ದು ಇದಕ್ಕೆ ಬೈಕ್ ಚಾಲಕ ಪದ್ಮಯ್ಯ.ಕೆ ಎಂಬುವರ ಆತಿವೇಗ , ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದ ಚಾಲನೆಯೇ ಕಾರಣವಾಗಿರುತ್ತದೆ ಎಂದು ಆರೋಪಿಸಿ ಆರೋಪಿಯ ವಿರುದ್ದ. ಆಗೀನ ಸುಳ್ಯ ಪೊಲೀಸ್ ವೃತ ನಿರೀಕ್ಷಕ ರಾದ ಸತೀಶ್ ಕುಮಾರ್. ಆರ್ ಎಂಬುವರು ಸುಳ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ತದನಂತರ ಪ್ರಕರಣವನ್ನು ಸುಳ್ಯ ನ್ಯಾಯಾಲಯ ತನಿಖೆ ನಡೆಸಿ ತನಿಖೆಯ ಬಳಿಕ ಅಭಿಯೋಜನೆಯು ಆರೋಪಿಯ ವಿರುದ್ಧ ಮಾಡಲಾದ ಆರೋಪವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಯನ್ನು ದೋಷಮುಕ್ತ ಗೊಳಿಸಿ ಸುಳ್ಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ್ ಕುಮಾರ್. ಕೆ ಎಂಬುವರು 2021ರ ಜೂ.21 ರಂದು ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ, ಹಾಗೂ ಚಂಪಾ ವಿ. ಗೌಡ ವಾದಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.