Breaking News

ಜೇನು ಸೊಸೈಟಿ ನಿವೃತ್ತ ಉದ್ಯೋಗಿ ಕೂಸಪ್ಪ ನಾಯ್ಕ ಕಕ್ಕೆಬೆಟ್ಟು ನಿಧನ

Advt_Headding_Middle

ನೆಲ್ಲೂರು ಕೆಮ್ರಾಜೆ ಗ್ರಾಮದ ಕಕ್ಕೆಬೆಟ್ಟು ಬಟ್ಯ ನಾಯ್ಕರವರ ಪುತ್ರ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ, ಜೇನು ಸೊಸೈಟಿ ಯ ನಿವೃತ್ತ ಉದ್ಯೋಗಿ ಕೂಸಪ್ಪ ಎಂಬವರು ಜು.2ರಂದು ನಿಧನರಾದರು. ಅವರಿಗೆ 53 ವರ್ಷ ಪ್ರಾಯವಾಗಿತ್ತು. ಕಫದ ಸಮಸ್ಯೆ ಎದುರಿಸುತ್ತಿದ್ದ ಅವರಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿತ್ತು.


ಕೂಸಪ್ಪರವರು ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಸುಳ್ಯ ಶಾಖೆಯಲ್ಲಿ ವೃತ್ತಿ ಆರಂಭಿಸಿದ್ದರು. ಬಳಿಕ ಉಡುಪಿ ಜೇನು ಸೊಸೈಟಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ, ಬಳಿಕ ಪುತ್ತೂರು ಶಾಖೆಗೆ ವರ್ಗಾವಣೆಗೊಂಡಿದ್ದರು. ಜೇನು ಸೊಸೈಟಿಯಲ್ಲಿ ಒಟ್ಟು 32 ವರ್ಷ ಸೇವೆ ಸಲ್ಲಿಸಿದ್ದ ಇವರು ಆರೋಗ್ಯ ಸಮಸ್ಯೆ ಎದುರಾದ ಕಾರಣ ಪುತ್ತೂರು ಶಾಖೆಯಲ್ಲಿ ಕಳೆದ 3 ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.
ಮೃತರು ಪತ್ನಿ ಶ್ರೀಮತಿ ಭಾರತಿ, ಓರ್ವ ಪುತ್ರಿ ಚರಣ್ಯ ಕೆ.ನಾಯ್ಕ್, ಸಹೋದರರಾದ ರಾಮಕೃಷ್ಣ ಕಕ್ಕೆಬೆಟ್ಟು, ಯೂನಿಯನ್ ಬ್ಯಾಂಕ್ ಪುತ್ತೂರಿನ ಶಾಖಾ ವ್ಯವಸ್ಥಾಪಕ ಕುಶಾಲಪ್ಪ ಕೆ., ಸಹೋದರಿಯರಾದ ಸವಿತಾ ಹಾಗೂ ಇಂದ್ರರವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.