Breaking News

ಅಪಘಾತಗೊಂಡಿದ್ದವರನ್ನು ಉಪಚರಿಸುತ್ತಿದ್ದ ವೇಳೆ ಟ್ಯಾಂಕರ್ ನಡಿಗೆ ಸಿಲುಕಿ ದೊಡ್ಡತೋಟದ ಯುವಕ ಮೃತ್ಯು

Advt_Headding_Middle

ಮಂಗಳೂರಿನ ಬೈಕಂಪಾಡಿ ಬಳಿ ಅಪಘಾತಗೊಂಡಿದ್ದವರೊಬ್ಬರನ್ನು ಉಪಚರಿಸುತ್ತಿದ್ದ ವೇಳೆ ಬಂದ ಟ್ಯಾಂಕರೊಂದಕ್ಕೆ‌ ಸಿಲುಕಿ ಎಳೆಯಲ್ಪಟ್ಟು ದೊಡ್ಡತೋಟದ ಯುವಕ ತೇಜಸ್ ಮೇರ್ಕಜೆ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ದೊಡ್ಡತೋಟ ಬಳಿಯ ಮೇರ್ಕಜೆ ಪುರುಷೋತ್ತಮ ಎಂಬವರ ಪುತ್ರ ತೇಜಸ್(28 ) ಮಂಗಳೂರಿನಲ್ಲಿ ಇಲೆಕ್ಟ್ರೀಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದು, ನಿನ್ನೆ(ಜು.10) ಸಂಜೆಯ ವೇಳೆ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿರುವುದನ್ನು ಕಂಡರು.
ತೇಜಸ್ ರವರು ಅಪಘಾತಗೊಂಡಿದ್ದ ದ್ವಿಚಕ್ರ ವಾಹನ ಸವಾರರನ್ನು ಉಪಚರಿಸಿ, ಅಡ್ಡಬಿದ್ದಿದ್ದ ದ್ವಿಚಕ್ರವಾಹನವನ್ನು ಎತ್ತಿ ನಿಲ್ಲಿಸಿ, ಅದರಲ್ಲಿ ಕೂತು ದೂಡಿಕೊಂಡು ರಸ್ತೆಯ ಬದಿಗೆ ತರುತ್ತಿದ್ದರೆನ್ನಲಾಗಿದೆ. ಈ ವೇಳೆಗೆ ಅದೇ ರಸ್ತೆಯಲ್ಲಿ ಬಂದ ಟ್ಯಾಂಕರೊಂದು ತೇಜಸ್ ದೂಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು. ಲಾರಿಯ ಒಂದು ಬದಿಯ ಕಬ್ಬಣದ ಪೈಪ್ ತೇಜಸ್ ರವರ ಕಾಲಿನ ಮಧ್ಯೆ ಸಿಲುಕಿ ರಸ್ತೆಯಲ್ಲಿ ವಾಹನ ಸಮೇತ ಎಳೆಯಿತೆನ್ನಲಾಗಿದೆ. ಇದರಿಂದ ಸೊಂಟದ ಕೆಳಭಾಗ ಗಂಭೀರ ಗಾಯಗೊಂಡ ತೇಜಸ್ ರವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ತಂದು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ವಿಪರೀತ ರಕ್ತಸ್ರಾವದಿಂದ ಆರೋಗ್ಯದಲ್ಲಿ ಏರುಪೇರಾ‌ಗಿ ಜು.11 ರಂದು ಮುಂಜಾನೆ ಕೊನೆಯುಸಿರೆಳೆದರು.

ಮೃತರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ ಚಂದ್ರಾವತಿ, ಓರ್ವ ಸಹೋದರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಜ್ಞಾನೇಶ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.