Breaking News

ಕಲ್ಲುಗುಂಡಿಯಲ್ಲಿ ಎಸ್. ಬಿ ಲ್ಯಾಬ್ ಸಹಸಂಸ್ಥೆ ಉದ್ಘಾಟನೆ 

Advt_Headding_Middle

ಸುಮಾರು 25 ವರ್ಷಗಳಿಂದ ಬಾಲಕೃಷ್ಣ ಮಾಲಕತ್ವದ ಸಂಪೂರ್ಣ ಕಂಪ್ಯೂಟರೀಕೃತ ಸುಸಜ್ಜಿತ ವೈದ್ಯಕೀಯ ಪ್ರಯೋಗಾಲಯ ಸುಳ್ಯದ ಎಸ್. ವಿ. ಎಂ ಆಸ್ಪತ್ರೆ ಕಟ್ಟಡದಲ್ಲಿರುವ ಎಸ್. ಬಿ ಮೆಡಿಕಲ್ ಲೆಬೋರೆಟರಿ ಅವರ ಮಾಲಕತ್ವದ ಸಹಸಂಸ್ಥೆಯಾಗಿ ಕಲ್ಲುಗುಂಡಿ ಮಹಾವಿಷ್ಣು ಕಾಂಪ್ಲೆಕ್ಸ್ನಲ್ಲಿ ಜುಲೈ 11ರಂದು ಶುಭಾರಂಭಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು. ಬಿ. ಚಕ್ರಪಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಲುಗುಂಡಿ ಚರ್ಚ್ನನ ಫಾದರ್, ಕಿಲಾರ್ ಕಾರ್ಗಿಲ್ ಎಸ್ಟೇಟಿನ ಮ್ಯಾನೇಜರ್ ಮುರಳಿ, ಕಲ್ಲುಗುಂಡಿ ಮಸೀದಿ ಅಧ್ಯಕ್ಷ ಅಬ್ಭಾಸ್ ಸಂಟ್ಯಾರ್, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಶ್ರೀಧರ ಮಾದೇಪಾಲ್, ಯಾದವಾ ಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ವಿ. ವಿ. ಬಾಲನ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಸ್ವಾಗತ್ ಐಸ್ಕ್ರೀಂನ ಪ್ರಭಾಕರ್ನ್ ನಾಯರ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಶಿಕಲಾ ಪ್ರಭಾಕರನ್ ನಾಯರ್, ಡಾ.ಭವಾನಿಶಂಕರ್, ರೋಟೇರಿಯನ್ ಭಾಸ್ಕರನ್ ನಾಯರ್ ಮಧುವನ, ರೋಟೇರಿಯನ್ ಪ್ರಭಾಕರನ್ ನಾಯರ್ ಸಿ. ಹೆಚ್. ಮಧುವನ, ಕೆ. ನ್. ಎಸ್ . ಎಸ್ . ಸುಳ್ಯ ಕರೆಯೋಗಮ್ ಪ್ರಸಿಡೆಂಟ್ ಯು. ಚಂದ್ರಶೇಖರನ್ ನಾಯರ್ ಉಬರಡ್ಕ, ಕೆ. ಎಫ್. ಡಿ. ಸಿ. ಮಾಜಿ ಉಪಮ್ಯಾನೇಜರ್ ಚಂದ್ರಮೋಹನ್, ಪದ್ಮನಾಭನ್ ನಾಯರ್ ಮಧುವನ, ಶಿವರಾಂಜನ್ ನಾಯರ್, ಬಿ. ಆರ್. ಪದ್ಮಯ್ಯ, ಪಿ. ಬಿ. ಕಿಶೋರ್ ಕುಮಾರ್ ಮಾಜಿ ಲಯನ್ಸ್ ಕ್ಲಬ್ ಅಧ್ಯಕ್ಷ, ಎಸ್. ಪಿ. ಲೋಕನಾಥ್, ಕೆ. ಆರ್. ಜಗದೀಶ್ ರೈ, ಬಿ. ಆರ್. ಕೂಸಪ್ಪ, ಪಯಸ್ವಿನಿ ಬ್ಯಾಂಕ್ ಸಿ. ಓ. ಆನಂದ ಬಾಲೆಂಬಿ ಮೊದಲಾದವರು ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಬಾಲಕೃಷ್ಣ ನಾಯರ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಇ. ಸಿ ಜಿ. ಬಿ,ಪಿ .ಜಿ .ಚ್ .ಪಿ. ಮತ್ತು ಇನ್ನಿತರ ಪರೀಕ್ಷೆ ಗಳು ವಿಶೇಷವಾಗಿ ಥೈರಾಯಿಡ್ ಮತ್ತು ಹಾರ್ಮೋನ್ ಗಳ ರಕ್ತ ಪರೀಕ್ಷಾ ವರದಿಯನ್ನು ಅದೇ ದಿನ ನೀಡಲಾಗುವುದು ಎಂದು ತಿಳಿಸಿದರು. ಇ.ವಿ.ಪ್ರಶಾಂತ್ ನವರು ಸಹಕರಿಸಿದರು.  

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.