ಜು.15: ಸಂಪಾಜೆ ಗ್ರಾ.ಪಂ. ಸದಸ್ಯರಿಂದ ಸುಳ್ಯ ತಾಲೂಕುಕಚೇರಿ ಎದುರು ಧರಣಿ

Advt_Headding_Middle

ಜು.15 ರಂದು ವಿವಿಧ ಬೇಡಿಕೆಯನ್ನುದ್ದೇಶಿಸಿ ಸಂಪಾಜೆ ಗ್ರಾ.ಪಂ.ನ ಎಲ್ಲಾ ಸದಸ್ಯರು ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದೆಂದು ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.

ನಮ್ಮ ಗ್ರಾಮದ ಬೇಡಿಕೆ ಈಡೇರಿಕೆಗೆ ಹಲವು ಬಾರಿ ಮನವಿ, ಬೇಡಿಕೆ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಧರಣಿ ನಡೆಸಲಾಗುವುದು. ಸಂಪಾಜೆ ಗ್ರಾಮದ ಹಲವು ಸರ್ವೇ ನಂ.ಗಳಲ್ಲಿ ಪ್ಲಾಟಿಂಗ್ ಆಗದೆ ಭೂ ಪರಿವರ್ತನೆಯಾಗುತ್ತಿಲ್ಲ. ಇದರಿಂದ ಬಡವರು, 10 ಸೆಂಟ್ಸ್ ಸ್ಥಳ ಇರುವವರಿಗೆ ಪಹಣಿ ಪತ್ರ ಇದ್ದರೂ ಪಂಚಾಯತ್‌ನಿಂದ ಡೋರ್ ನಂ. ಕೊಡಲಾಗುವುದಿಲ್ಲ. ಮನೆ ಕಟ್ಟಿದ ಬಡವರಿಗೆ ವಿದ್ಯುತ್ ಪಡೆಯಲು ನಿರಾಕ್ಷೇಪಣಾ ಪತ್ರ ಪಡೆಯಲಾಗುತ್ತಿಲ್ಲ. ಗ್ರಾಮಕ್ಕೆ ಎರಡು ಕಡೆ ಆರೋಗ್ಯ ಸಹಾಯಕಿಯರ ನೇಮಕ, ಸರ್ವೇ ನಂ. 125 ರಲ್ಲಿ 94ಸಿಯಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದರೂ, ಹಕ್ಕು ಪತ್ರ ದೊರಕಿಲ್ಲ. ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇರುವುದಿಲ್ಲ. ಗ್ರಾಮದಲ್ಲಿ ಘನ ತ್ಯಾಜ್ಯ ಘಟಕ ಸ್ಥಳವಿಲ್ಲ. 033 ಕೆ.ವಿ.ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿಗೆ ಸ್ಥಳ ಕಾಯ್ದಿರಿಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬೇಡಿಕೆಯನ್ನು ಮುಂದಿರಿಸಿ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.