ಫಲಕಾರಿ…. ಅಣಬೆಯೆಂಬ ಪರೋಪಕಾರಿ

Advt_Headding_Middle

ತನಷ್ಟಕ್ಕೆ ತಾನೆ ಬೆಳೆದು ಸೂಪರ್ ಫುಡ್ ಅಂತಾನೆ ಎನಿಸಿಕೊಂಡಿರುವ ಆಲಮ್ಬಿ (ಅಣಬೆ) ಇತ್ತೀಚಿನ ದಿನಗಳಲ್ಲಿ ತುಂಬಾನೇ ಫೇಮಸ್ ಆಗ್ತಿದೆ. ತನ್ನೊಳಗೆ ಸಾಕಷ್ಟು ವೈಶಿಷ್ಟ್ಯತೆಯನ್ನು ಹಿಡಿದುಕೊಂಡಿರುವ ಅಣಬೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಶಿಲೀಂಧ್ರ.
ಮಳೆಗಾಲದಲ್ಲಿ ಕೊಳೆಯುವಪ್ರದೇಶ,ಹುತ್ತ,ಗದ್ದೆ,ಕಾಡುಗಳಲ್ಲಿ ಹುಟ್ಟುತ್ತಿರುತ್ತವೆ. ತನ್ನದೇ ಸುವಾಸನೆ ಮತ್ತು ತಂಡದೊಂದಿಗೆ ಗಮನ ಸೆಳೆಯುತ್ತದೆ. ಅಧಿಕ ಪೌಷ್ಟಿಕಾಂಶ,ಜೀವಸತ್ವ,ನಾರಿನಾಂಶ,ಖನಿಜಾಂಶ,ಪ್ರೋಟಿನ್,ಅಮೈನಾನ್ ಆಮ್ಲ ಮತ್ತು ಆಂಟಿ ಆಕ್ಸಿಡೆಂಟ್ ಗಳು ಅಣಬೆ ಯ ಗೌಪ್ಯತೆ. ಪೋಟಾಷಿಯಂ ವಿಟಮಿನ್ ‘ಡಿ’ ಅತ್ಯಧಿಕವಾಗಿ ಮಾನವನ ದೇಹಕ್ಕೆ ನೀಯುವ ನಾಯಿಕೊಡೆ ಮನೆ ಮನೆ ಮಾತಾಗಿದೆ.
ಪೆರಿಯಾರ್ ಆವರ್ತಿಯಲ್ಲಿ ಬುಟ್ಟಿ ಬುಟ್ಟಿ ಆಲಮ್ಬಿ ಸಿಕ್ಕಾಗ ಅದರ ಸುದ್ಧಿ ಊರಲೆಲ್ಲಾ ಹಾಸುತ್ತಿತ್ತು. ಬಹಳ “ಟೇಸ್ಟ್ ಫುಡ್” ಆಗಿರುವ ಅಣಬೆ ಅನೇಕ ಡಿಸೋರ್ಡರ್ಸ್ ಖಾಯಿಲೆಗಳು,ಕ್ಯಾನ್ಸರ್ ನ್ನು ಅಲ್ಲಗೆಳೆಯುವ ಫುಡ್ ಆಗಿದೆ. ಕರಾವಳಿ ಕಡೆ ಬೆಳೆಯುವ ಅಣಬೆ ಪ್ರಭೇದಗಳು ನಾನಾ ರೂಪಗಳಿಂದ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದು, ಮುಟ್ಟನಬೆ,ಸುರುಳಿ,ಕಲ್ಲನಬೆ,ಚಿಪ್ಪನಬೆ,ಹಾಲುಬಿಳಿ ಅಣಬೆ ಇನ್ನೂ ಇತರ ಪ್ರಭೇದಗಳು ಹೆಸರುವಾಸಿಯಾಗಿದೆ. ಇತ್ತೀಚೆಗೆ ಕೃತಕವಾಗಿ ಬೆಳೆಯುವ ಅಣಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಮಶ್ರೂಮ್ ಬಿರಿಯಾನಿ, ಮಂಚೂರಿ,ಸೂಪ್ ಇನ್ನಿತರ ತಿನಿಸುಗಳಿಗೆ ಫುಡ್ ಇಟರ್ಸ್ ಮಾರು ಹೋಗುತ್ತಿದ್ದಾರೆ. ಮಾನವನ ಮೂಳೆಗಳನ್ನು ಸಂರಕ್ಷಿಸಿ ದೇಹದ ಚಯಾಪಚಯ ಕ್ರಿಯೆಯನ್ನು ಸುಗಮವಾಗಿ ಸಾಗಿಸುವ ಆಲಮ್ಬಿ 15,000 ಕ್ಕೂ ಹೆಚ್ಚಿನ ಪ್ರಭೇದಗಳನ್ನು ಹೊಂದಿದ್ದು, 5,000 ಕ್ಕೂ ಮೀರಿ ಪೂರಕವಾಗಿರುವ ಅಣಬೆಯನ್ನು ವಿನಿಯೋಗ ಮಾಡಿಕೊಂಡಿದ್ದು, ತಾಂತ್ರಿಕವಾಗಿ ಬೆಳೆಸುವ ಅಣಬೆಯನ್ನು ಕಡಿಮೆ ಖರ್ಚಿಲ್ಲದೆ ಬೆಳೆಯಬಹುದು ಮತ್ತು ಅಧಿಕ ಲಾಭದಾಯಕವಾಗಿ ಕೂಡ ಇರುತ್ತದೆ.
ಒಂದು ಬಾರಿ ಅಣಬೆಯ ಸವಿ ನಾಲಗೆಗೆ ಸಿಕ್ಕರೆ ಮತ್ತೆ ರುಚಿ ನೋಡದೆ ಬಿಡುದಿಲ್ಲ ಎಂಬ ಮಾತು ಅಣಬೆ ಕೃಷಿಕರದ್ದು. ದೇಹಕ್ಕೆ ಫಲಕಾರಿ, ಮನಸ್ಸಿಗೆ ಆತ್ಮೀಯವಾಗಿರುವ ಆಲಮ್ಬಿಯ ಕರಾಮತ್ತನ್ನು ಎಷ್ಟು ವಿವರಿಸಿದರು ಸಾಕೆನಿಸುವುದಿಲ್ಲ.

ಕ್ರೀಷ್ಮಾಗೌಡ ಆರ್ನೋಜಿ
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಮ್.ಸಿ
ಉಜಿರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.