ಆಟಿ ಅಮಾವಾಸ್ಯೆಯ ವಿಶೇಷ ಔಷಧಿ-ಹಾಲೆ ಮರದ ಕಷಾಯ

Advt_Headding_Middle

ತುಳುನಾಡು ಬಹಳಷ್ಟು ವೈವಿಧ್ಯತೆಯ ನಾಡು. ತುಳುನಾಡಿನ ಆಚಾರ ವಿಚಾರಗಳು, ಪುರಾಣ ಕಥೆಗಳು, ನಂಬಿಕೆ ನಡವಳಿಕೆಗಳು ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಒಂದು, ಆಟಿ ತಿಂಗಳ ಅಮಾವಾಸ್ಯೆಯಂದು ಹಾಲೆಮರದ ಕಷಾಯ ಕುಡಿಯುವುದು.ಹಿರಿಯರ ಆಚರಣೆಗಳ ಪ್ರಕಾರ ಆಟಿ ಅಮಾವಾಸ್ಯೆ ದಿನ ಭೂಮಿಯ ಎಲ್ಲಾ ಔಷಧಿಯ ಸತ್ವ ಹಾಲೆಮರಕ್ಕೆ ಸೇರುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳಿನಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿ ಕೂಡ ತುಂಬಾ ಕಡಿಮೆ ಇದ್ದು,ರೋಗಗಳ ಪ್ರಭಾವ ಹೆಚ್ಚಿರುತ್ತದೆ. ಇದೇ ಉದ್ದೇಶದಿಂದ ಹಾಲೆ ಮರದ ತೊಗಟೆಯ ಕಷಾಯವನ್ನು ಕುಡಿಯುವುದು ರೂಢಿಯಲ್ಲಿ ಇದೆ.
ಕಷಾಯ ತಯಾರಿಸುವ ವಿಧಾನ:
ಆಟಿ ಅಮಾವಾಸ್ಯೆಯ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಹಿಂದಿನ ದಿನ ಗುರುತು ಮಾಡಿ ಇಟ್ಟ ಹಾಲೆಮರದ ತೊಗಟೆಯನ್ನು ಕಲ್ಲಿನಿಂದಲೇ ಕೆತ್ತಿ ತೆಗೆದು ತರಬೇಕು.ನಂತರ, ತೊಗಟೆಯ ರಸ ತೆಗೆದು, ಅದಕ್ಕೆ ಕಾಳುಮೆಣಸಿನ ಪುಡಿ,ಓಂಕಾಳು, ಶುಂಠಿ ಹಾಕಿ ಬಿಸಿ ಮಾಡಬೇಕು. ಬೇಕಿದ್ದರೆ ಸ್ವಲ್ಪ ಬೆಲ್ಲ ಹಾಕಬಹುದು. ದೊಡ್ಡವರಿಗೆ ಒಂದು ಕೊಂಡೆ, ಚಿಕ್ಕಮಕ್ಕಳಿಗೆ ಅರ್ಧ ಕೊಂಡೆಯಷ್ಟು ಕಷಾಯ ಕೊಡಬಹುದು. ಬಿಳಿಕಲ್ಲನ್ನೂ ಸುಟ್ಟು ಕಷಾಯಕ್ಕೆ ಹಾಕಿದರೆ, ಕಷಾಯದ ಔಷಧೀಯ ಗುಣಗಳು ಹೆಚ್ಚಾಗುತ್ತದೆ. ಕಷಾಯ ಕುಡಿದ ನಂತರ ದೇಹವನ್ನು ತಂಪು ಮಾಡುವ ಉದ್ದೇಶದಿಂದ ಮೆಂತ್ಯದ ಗಂಜಿಯನ್ನು ತಿನ್ನುತ್ತಾರೆ.
ಔಷಧೀಯ ಸಸ್ಯ-ಹಾಲೆಮರ:
ಅಲ್ ಸ್ಟೋನಿಯ ಸ್ಕೋಲಾರಿಸ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಹಾಲೆಮರ ಅಥವಾ ಪಾಲೆದ ಮರ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯದ ಕಾಂಡವು ಏಳು ಎಲೆಗಳ ಗೊಂಚಲನ್ನು ಹೊಂದಿರುವುದರಿಂದ ಸಂಸ್ಕೃತ ದಲ್ಲಿ ಇದಕ್ಕೆ ಸಪ್ತಪರ್ಣ ಎಂದು ಕರೆಯುತ್ತಾರೆ.ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಹಾಲೆಮರದಲ್ಲಿ ಟ್ರೈ ಪೆಂಟೊನೋಯ್ಡ್, ಬೆಟಲಿನ್, ಉರ್ಸೋಲಿಕ್ ಆಮ್ಲ, ಓಲಿಯೋನೋಲಿಕ್ ಆಮ್ಲ ಮುಂತಾದ ಸಸ್ಯಕ್ಷಾರ ಔಷಧೀಯ ಗುಣಗಳಿರುವುದು ಕಂಡು ಬಂದಿದೆ. ಇದರಿಂದಾಗಿ, ಈ ಸಸ್ಯವು ರೋಗ ನಿರೋಧಕ ಶಕ್ತಿ, ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಓಕ್ಸಿಡೆಂಟ್, ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಆಯುರ್ವೇದದ ಪ್ರಕಾರ, ಹಾಲೆಮರವು ಚರ್ಮಸಂಬಂಧಿ ರೋಗಗಳು, ಕಫಸಂಬಂಧಿ ರೋಗಗಳು, ಕ್ಯಾನ್ಸರ್, ಜೀರ್ಣಕ್ರೀಯೆಗೆ ಸಂಬಂಧಿಸಿದ ಸಮಸ್ಯೆ, ಸ್ತ್ರೀರೋಗ ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ ಎಂದು ಹೇಳುತ್ತಿದೆ.
ಆಟಿ ತಿಂಗಳು ಮಧ್ಯ ಮಳೆಗಾಲ. ಈ ಸಮಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ.
ನಿಸರ್ಗದತ್ತವಾಗಿ ಬರುವ ಅದೆಷ್ಟೋ ರೋಗಗಳನ್ನು ಪ್ರಕೃತಿಯೇ ವಾಸಿಮಾಡುವ ತುಳು ಆಚರಣೆಗಳು ಎಷ್ಟೋಂದು ಅರ್ಥಪೂರ್ಣವಲ್ಲವೇ?

ಡಾ॥ಗ್ರೀಷ್ಮಾ ಗೌಡ ಆರ್ನೋಜಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.