ಐವರ್ನಾಡು : ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ

Advt_Headding_Middle

 

 

ಕಟ್ಟಡದ ಆವರಣ ಗೋಡೆಯ ಗೇಟ್ ಉದ್ಘಾಟನೆ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಎಂಬಲ್ಲಿ ಸುಮಾರು 29 ವರ್ಷಗಳಿಂದ ಅಸ್ತಿತ್ವದಲ್ಲಿರುವ ವಿವಿಧ ಧಾರ್ಮಿಕ, ಸಾಮಾಜಿಕ, ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿರುವ ಪ್ರತಿಷ್ಟಿತ ಸಂಘ ಮಂಜುಶ್ರೀ ಗೆಳೆಯರ ಬಳಗದ ಆವರಣ ಗೋಡೆಯ ನೂತನ ಗೇಟ್ ನ ಉದ್ಘಾಟನಾ ಕಾರ್ಯಕ್ರಮವು
ಜು.12 ರಂದು ನಡೆಯಿತು.
ದಿವಂಗತ ಪ್ರಕಾಶ್ ರಾವ್ ಉದ್ದಂಪ್ಪಾಡಿರವರ ಸ್ಮರಣಾರ್ಥವಾಗಿ ಅವರ ಸಹೋದರ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹರೀಶ್ ರಾವ್ ಉದ್ದಂಪ್ಪಾಡಿರವರು ಸುಮಾರು 35 ಸಾವಿರ ಮೌಲ್ಯದ ಗೇಟನ್ನು ಕೊಡುಗೆಯಾಗಿ ನೀಡಿದ್ದರು. ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಗೇಟನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದಿವಂಗತ ಪ್ರಕಾಶ್ ರಾವ್ ರವರ ಪತ್ನಿ ಶ್ರೀಮತಿ ಪೂರ್ಣಿಮಾ ರಾವ್ ,ಅವರ ಸಹೋದರರಾದ ವಿಷು ಕುಮಾರ್ ರಾವ್, ಯೋಗೀಶ್ ರಾವ್, ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣ ಉದ್ದಂಪ್ಪಾಡಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಅತಿಥಿಗಳಾಗಿ ಹರೀಶ್ ರಾವ್ ಉದ್ದಂಪ್ಪಾಡಿ,ಬಾಲಕೃಷ್ಣ ಕೀಲಾಡಿ, ಸಂಘದ ಕಟ್ಟಡಕ್ಕೆ ಸ್ಥಳ ದಾನವಿತ್ತ ರಾಜಾರಾಮ್ ರಾವ್ ಉದ್ದಂಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ ಕಲ್ಲಗದ್ದೆ, ಸುಂದರಲಿಂಗಂ ಸಿ-ಕೂಪ್,ಶ್ರೀ ಮತಿ ಮಮತಾ ಉದ್ದಂಪ್ಪಾಡಿ ಹಾಗೂ ಸಂಘ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನಾಗಪ್ಪ ಗೌಡ ,ಮತ್ತು ಜಯಪ್ರಸಾದ್ ಕಜೆತ್ತಡ್ಕ ಸ್ವಾಗತಿಸಿ, ಧರ್ಮಪಾಲ ಲಾವಂತ್ತಡ್ಕ ವಂದಿಸಿದರು.
ಕುಮಾರ ಕಟ್ಟತ್ತಾರುರವರು ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.