Breaking News

‘ಎಚ್ಚರ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ

Advt_Headding_Middle

ಕನಸ್ಸು ಕ್ರಿಯೇಷನ್ಸ್ ಅರ್ಪಿಸುವ ದೀಕ್ಷಿತ್ ಪೂಜಾರಿ ಇವರ ನಿರ್ಮಾಪನೆ ಹಾಗೂ ಸಹ ನಿರ್ದೇಶನದ, ಕೀರ್ತನ್ ಶೆಟ್ಟಿ ಸುಳ್ಳ್ಯ ಇವರ ರಚನೆ ಹಾಗೂ ನಿರ್ದೇಶನದ, ಲೋಹಿತ್ ಪೂಜಾರಿ ಇವರ ಸಹನಿರ್ದೇಶನದ “ಎಚ್ಚರ ” ಎಂಬ ಕನ್ನಡ ಕಿರು ಚಿತ್ರದ ಪೋಸ್ಟರನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಮಂಗಳೂರು ಅವರು ಜು.12 ರಂದು ಬಿಡುಗಡೆ ಗೊಳಿಸಿದರು.

 


ಈ ಕಿರು ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು ಅತೀ ಶೀಘ್ರದಲ್ಲೆ ಬಿಡುಗಡೆಗೊಳ್ಳಲಿದೆ.
ಈ ಕಿರು ಚಿತ್ರದಲ್ಲಿ ಹಿರಿಯ ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟ ಶಿವಕುಮಾರ್ ರೈ ಹಾಗೂ ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟ ಅನಿಲ್ ರೈ ಪೆರಿಗೇರಿ ಹಾಗೂ ತುಳು, ಕನ್ನಡ, ಅರೆಭಾಷೆ ರಂಗಭೂಮಿ ಕಲಾವಿದೆ ಸುಶ್ಮಿತಾ ಶೈನಿ ಹಾಗೂ ಕರ್ನಾಟಕದಲ್ಲೇ ಮನೆ ಮಾತಾಗಿರುವ “ಧ್ವನಿ ಮಾಯೆ” ಕಲಾವಿದೆ ಸಾಯಿ ಶ್ರುತಿ ಹಾಗೂ ರಂಗ ಭೂಮಿ ಹಾಗೂ ಚಲನ ಚಿತ್ರ ನಟ ನಾಗೇಶ್ ಹಾಗೂ ವಿನೋದ್ ರೈ ಗುತ್ತು, ಶ್ರೇಯಸ್ ಬಲ್ಲಾಳ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದು ಸುಮಾರು 25 ಇತರೆ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದು 10-15ಮಂದಿ ಸುಳ್ಯ ತಾಲೂಕಿನ ಕಲಾವಿದರು ಅಭಿನಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.