Breaking News

ಸೀ ಪುಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಚ್ರಪ್ಪಾಡಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಲೇಖನಿ ಸಾಮಾಗ್ರಿಗಳ ಕೊಡುಗೆ

Advt_Headding_Middle

ಸೀಪುಡ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳು, ಹಾಗೂ ಬ್ಯಾಗ್ ಕೊಡುಗೆಯಾಗಿ ನೀಡಿದರು.


ಸೀಪುಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್ ಅಚ್ರಪ್ಪಾಡಿ ಶಾಲೆಯ ಮುಖ್ಯಶಿಕ್ಷಕಿ ಶ್ವೇತಾ ಅವರಿಗೆ ಹಸ್ತಾಂತರಿಸಲಾಯಿತು. ಶಾಲೆಯಲ್ಲಿ 28 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹವನ್ನು ನೀಡಿರುತ್ತಾರೆ.


ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು. ಇಲ್ಲಿ ಕಲಿಯುವಂತ ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟ ಶಿಕ್ಷಣದ ಜೊತೆಗೆ ಎಲ್ಲಾ ಸವಲತ್ತುಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಈ ರೀತಿಯ ಸಹಕಾರವನ್ನು ಎಲ್ಲ ಸಂಘ-ಸಂಸ್ಥೆಗಳು ನೀಡಲು ಮುಂದಾದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಪೂರಕವಾಗಲಿದೆ ಎಂದು ಹಾಜಿ ಜಿ ಇಬ್ರಾಹಿಂ ತಿಳಿಸಿದರು.


ಕೊರೋನದ ಸಂದರ್ಭದಲ್ಲಿಯೂ ಇವರು ನಮ್ಮ ಶಾಲಾ ಮಕ್ಕಳ ಕಲಿಕೆಗೆ ಸಹಕರಿಸಲು ಮುಂದಾಗಿದ್ದಾರೆ ಇವರು ನಮ್ಮ ಶಾಲೆ ನಿರಂತರ ಸಹಕರಿಸುತ್ತಿರು ಹಾಜಿಯವರಿಗೆ ಸಂಸ್ಥೆಯ ಪರವಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಅಭಿನಂದನೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.