Breaking News

ಮೊಬೈಲ್ ಇಲ್ಲದೆ ಆಫ್ ಆಗಿದೆ ಆನ್‌ಲೈನ್ ಶಿಕ್ಷಣ

Advt_Headding_Middle

ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮುಳುವಾಗಿದೆ ಅಮ್ಮನ ಸಂಕಷ್ಟ

ಬಡ ಕುಟುಂಬದ ಬಾಳಿಗೆ ಬೆಳಕಾಗುವಿರಾ?

ಹೌದು, ಇದು ಆನ್‌ಲೈನ್ ಶಿಕ್ಷಣದ ಕಾಲ. ಆದರೆ ಸ್ಮಾರ್ಟ್‌ಫೋನ್ ಇಲ್ಲದೆ ಇಲ್ಲಿಬ್ಬರು ಮಕ್ಕಳು ತಮ್ಮ ಶೈಕ್ಷಣಿಕ ಭವಿಷ್ಯ ಕಮರುವ ಭಯದಲ್ಲಿದ್ದಾರೆ. ಸಹೃದಯರ ಮನಸ್ಸು ಸ್ಪಂದಿಸಿದರೆ ಮಾತ್ರ ಈ ಮಕ್ಕಳು ಶೈಕ್ಷಣಿಕ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ.


ಕಳಂಜ ಗ್ರಾಮದ ಕಾಲೊನಿಯೊಂದರಲ್ಲಿ ಜೀವನ ನಡೆಸುತ್ತಿರುವ ಜಾನಕಿಯವರ ಇಬ್ಬರು ವಿದ್ಯಾರ್ಥಿಗಳ ವ್ಯಥೆಯ ಕಥೆಯಿದು. ಇವರ ದೊಡ್ಡ ಮಗಳು ಭೂಮಿಕಾ ಪಂಜ ಮೊರಾರ್ಜಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮತ್ತೋರ್ವ ಮಗ ಭುವನ್ ಬಾಳಿಲ ವಿದ್ಯಾಭೋಧಿನಿ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾನೆ.
ಜೀವನ ನಡೆಸಲು ಯಾವುದೇ ಆದಾಯಗಳಿಲ್ಲದ ತಾಯಿ ಜಾನಕಿ ಕೂಲಿ ಕೆಲಸಕ್ಕೆ ಹೋಗಿ ಜೀವನ ಮಾಡುತ್ತಿದ್ದಾರೆ. ಮನೆಯ ಯಜಮಾನ ಕೃಷ್ಣಪ್ಪ ಗೌಡ ಅವರು ಹತ್ತು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಆಗಿನ್ನೂ ಮಕ್ಕಳು ಶಾಲೆಯ ಮೆಟ್ಟಲು ಹತ್ತಿರಲಿಲ್ಲ.ಬಳಿಕ ಜಾನಕಿಯವರೇ ತಂದೆಯ ಸ್ಥಾನದಲ್ಲಿ ನಿಂತು ಮಕ್ಕಳನ್ನು ಓದಿಸಿದ್ದಾರೆ.
ಕಳೆದರೆಡು ವರ್ಷಗಳಿಂದ ಕೊರೋನಾ ಮತ್ತು ಲಾಕ್ ಡೌನ್‌ನಿಂದಾಗಿ ಇವರಿಗೆ ಜೀವನವೇ ಕಷ್ಟವಾದಂತಾಗಿದೆ. ಅದರೊಂದಿಗೆ ಇಬ್ಬರು ಮಕ್ಕಳಿಗೆ ಶಿಕ್ಷಣ ಒದಗಿಸುವ ಜವಾಬ್ದಾರಿ ನಿಭಾಯಿಸುವುದು ದುಸ್ತರವಾಗಿದೆ.


ಮನೆಯಲ್ಲಿ ಕಡು ಬಡತನ ಇರುವ ಕಾರಣ ಮನೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲ. ಆನ್‌ಲೈನ್ ಶಿಕ್ಷಣ ಪಡೆಯಬೇಕಾದರೆ ಇಂತಹ ಮೊಬೈಲ್ ಬೇಕು. ಬಂಧುವೊಬ್ಬರು ತಾತ್ಕಾಲಿಕವಾಗಿ ನೀಡಿದ ಮೊಬೈಲ್ ನಲ್ಲಿ ಅಕ್ಕ ಭೂಮಿಕ ಶಿಕ್ಷಣ ಪಡೆಯುತ್ತಿದ್ದಾಳೆ. ಆದರೆ ತಮ್ಮ ಭುವನ್ ಗೆ ಮೊಬೈಲ್ ಇಲ್ಲದ ಕಾರಣ ಶಿಕ್ಷಣಕ್ಕೆ ಅಡ್ಡಿಯುಂಟಾಗಿದೆ. ಏಕ ಕಾಲದಲ್ಲಿ ಇಬ್ಬರಿಗೂ ಶಿಕ್ಷಣ ನಡೆಯಬೇಕು. ಸೇತು ಬಂಧ ಕ್ಲಾಸ್ ಗಳು ನಡೆಯುತ್ತಿರುವ ಕಾರಣ ಸುಮ್ಮನೆ ಕೂರುವಂತಿಲ್ಲ. ಮುಕ್ತ ಮನಸ್ಸಿನಿಂದ ಯಾರಾದರು ಮೊಬೈಲ್ ಕೊಡಿಸಿದರೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕಾರಣವಾಗಬಹುದು.

(ವರದಿ: ಶಿವರಾಮ ಕಜೆಮೂಲೆ)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.