ಆಲೆಟ್ಟಿ  ಪಂಚಾಯತ್ ಸಾಮಾನ್ಯ ಸಭೆ 

Advt_Headding_Middle

ಕಲ್ಲಪಳ್ಳಿ ಗಡಿಪ್ರದೇಶ ಜಂಟಿ ಸರ್ವೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ತೀರ್ಮಾನ

ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜು. 13 ರಂದು ಪಂಚಾಯತ್ ಸಭಾಂಗಣದಲ್ಲಿ ಪಂ.ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ದಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಸಭೆ ನಾಡಗೀತೆಯೊಂದಿಗೆ ಆರಂಭಗೊಂಡಿತು. ಕಳೆದ ಸಭೆಯ ನಿರ್ಣಯ ವರದಿ ಹಾಗೂ ಜಮಾ ಖರ್ಚಿನ ವಿವರ ನೀಡಲಾಯಿತು.


ಕಲ್ಚೆರ್ಪೆ ತ್ಯಾಜ್ಯ ಘಟಕದ ಅವ್ಯವಸ್ಥೆಯ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈಗ ಇರುವ ತ್ಯಾಜ್ಯ ಸಂಪೂರ್ಣ ವಿಲೇವಾರಿಗೊಳಿಸುವಂತೆ ಹಾಗೂ ಮುಂದೆ ಯಾವುದೇ ಕಾರಣಕ್ಕೂ ಕಲ್ಚೆರ್ಪೆಯಲ್ಲಿ ಕಸ ಹಾಕದಂತೆ ಆಕ್ಷೇಪ ಪತ್ರ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಬರೆಯುವ ಬಗ್ಗೆ ತೀರ್ಮಾನ ಮಾಡಲಾಯಿತು. ಕಳೆದ 2008 ರಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳ ಕಡೆಗಳಲ್ಲಿ ಕಾಮಗಾರಿ ಕೆಲಸ ನಡೆಯುತ್ತಿರುತ್ತಿದೆ ಆದರೆ ಯಾವ ಇಲಾಖೆಯಿಂದ ಕೆಲಸ ಮಾಡಲಾಗುತ್ತಿದೆ ಎಂಬ ಮಾಹಿತಿ ಇರುವುದಿಲ್ಲ. ಪಂಚಾಯತ್ ಗಮನಕ್ಕೆ ಬಾರದೆ ಯಾವುದೇ ರಸ್ತೆ ಕಾಮಗಾರಿ ಕೆಲಸ ಮಾಡುವುದು ಸರಿಯಲ್ಲ.
ಪೈಂಬೆಚ್ಚಾಲು ಎಂಬಲ್ಲಿ ಖಾಸಗಿಯವರು ರಸ್ತೆ ನಿರ್ಮಿಸುವ ಸಂದರ್ಭ ಮುಖ್ಯ ರಸ್ತೆಗೆ ಮಣ್ಣು ಬಂದು ಸಂಚಾರಕ್ಕೆ ಅಡಚಣೆಯುಂಟಾಗಿದೆ. ಚರಂಡಿ ನಿರ್ಮಿಸಲು ಅನುದಾನ ಒದಗಿಸಿಕೊಡುವ ಬಗ್ಗೆ ಬೇಡಿಕೆ ಇರಿಸಲಾಯಿತು.


ಆಲೆಟ್ಟಿ ಆಶ್ರಮ ಶಾಲೆಯಲ್ಲಿ ಎಲ್ಲಾ ವ್ಯವಸ್ಥೆ ಇದ್ದು ಖಾಯಂ ಶಿಕ್ಷಕರ ಕೊರತೆ ಇದೆ. ಈಗ ಯಾವುದೇ ರೀತಿಯ ಆನ್ ಲೈನ್ ತರಗತಿ ನಡೆಯುತ್ತಿಲ್ಲ.
ಸಿಬ್ಬಂದಿ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಪ್ರಸ್ತಾಪ ವ್ಯಕ್ತವಾಯಿತು. ನೀರಿನ ಬಿಲ್ಲು ಸಂಗ್ರಹ ಮಾಡಿ ನಂತರ ವೇತನ ಪರಿಷ್ಕರಣೆ ಬಗ್ಗೆ ಮಾತನಾಡಿ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಮೂರು ವಿಭಾಗದ ಕ್ರಿಯಾ ಯೋಜನೆಯ ಅಂಗೀಕಾರ ಮಾಡಲಾಯಿತು. ಮನೆ ನಿವೇಶನಕ್ಕೆ ಬೇಕಾಗಿರುವ ಸುಮಾರು 4.80 ಎಕ್ರೆ ಜಾಗ ಮಂಜೂರಾತಿ ಆದೇಶ ಪತ್ರ ಬಂದಿದ್ದು ಮುಂದಿನ ಗಡಿ ಗುರುತಿನ ಕಾರ್ಯ ಶೀಘ್ರ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಕಲ್ಲಪಳ್ಳಿ ಗಡಿಪ್ರದೇಶದಲ್ಲಿ ಪಂಚಾಯತ್ ವತಿಯಿಂದ ಅಳವಡಿಸಿದ ಸ್ವಾಗತ ಫಲಕ ಕಿತ್ತು ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಶೀಘ್ರವಾಗಿ ಜಂಟಿ ಸರ್ವೆ ನಡೆಸಿ ಸ್ಪಷ್ಟ ಗಡಿಗುರುತು ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಮತ್ತು ತಾಲೂಕು ಆಡಳಿತಕ್ಕೆ ಪತ್ರ ಬರೆಯುವ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಶಿವಾನಂದ ರಂಗತ್ತಮಲೆ, ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಚಂದ್ರಕಾಂತ ನಾರ್ಕೋಡು, ಸುದೇಶ್ ಅರಂಬೂರು, ಸತ್ಯಪ್ರಸಾದ್ ಗಬ್ಬಲ್ಕಜೆ, ರತೀಶನ್ ಅರಂಬೂರು, ಗೀತಾ ಕೋಲ್ಚಾರು, ವೀಣಾವಸಂತ ಆಲೆಟ್ಟಿ, ಶಂಕರಿ ಕೊಲ್ಲರಮೂಲೆ, ಕಮಲ ನಾಗಪಟ್ಟಣ, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ ಬಿಲ್ಲರಮಜಲು, ಶಶಿಕಲಾ ದೋಣಿಮೂಲೆ, ವೇದಾವತಿ ನೆಡ್ಚಿಲು, ಅನಿತಾ ಅರಂಬೂರು ಉಪಸ್ಥಿತರಿದ್ದರು.
ಈ ಸಂದರ್ಭ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಗಿಡ ವಿತರಿಸುವ ಕುರಿತು ಡಿ.ಆರ್. ಎಫ್.ಒ. ಮಂಜುಳಾ ರವರು ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಆಶ್ರಯದಲ್ಲಿ
ಹಸಿರೇ ಉಸಿರು ಯೋಜನೆಯಡಿಯಲ್ಲಿ ಗ್ರಾಮದ ವಾರ್ಡುವಾರು ಪ್ರತೀ ಮನೆಗೆ ಗಿಡ ವಿತರಿಸಿ ನೆಡುವ ಕಾರ್ಯಕ್ರಮ ಮತ್ತು ಸಾಲು ಮರದ ಯೋಜನೆಯ ಕುರಿತು ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ ಯವರು ಮಾಹಿತಿ ನೀಡಿದರು. ಲ| ರಂಗನಾಥ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.