ಅರಂತೋಡು: ನಾಗರಿಕ ಹಿತರಕ್ಷಣಾ ವೇದಿಕೆ ರಚನೆ

Advt_Headding_Middle

ಅರಂತೋಡು ಗ್ರಾಮದ ಅಡ್ತಲೆ ಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ರಚನೆಯು ನಡೆಯಿತು. ಈ ಸಭೆಯಲ್ಲಿ ಅಡ್ತಲೆ ವಾರ್ಡ್ ನ ಸುಮಾರು 60 ಕ್ಕಿಂತಲೂ ಅಧಿಕ ನಾಗರಿಕರು ಭಾಗವಹಿಸಿದ್ದರು. ಹಲವಾರು ವರ್ಷಗಳಿಂದಲೂ ಬೇಡಿಕೆ ಇದ್ದರೂ ಇದುವರೆಗೂ ಈಡೇರದ ಎರಡು ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಿ ಸಂಘಟಿತ ಹೋರಾಟ ಮಾಡೋಣ ಎಂಬ ಒಕ್ಕೊರಲ ಅಭಿಪ್ರಾಯ ನಾಗರೀಕರಿಂದ ವ್ಯಕ್ತವಾಯಿತು.


ಸುಳ್ಯ ತಾಲೂಕಿನ ಎಲ್ಲ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೂ ದಿನ೦ಪ್ರತಿ ನೂರಾರು ಪ್ರವಾಸಿ ವಾಹನಗಳು ಸಂಚರಿಸುವ ತಾಲೂಕಿನ ಅತ್ಯಂತ ಹಳೆಯ PWD ರಸ್ತೆಯಾದ ಎಲಿಮಲೆ – ಅರಂತೋಡು ರಸ್ತೆ ಇನ್ನೂ ಅಭಿವೃದ್ಧಿ ಹೊಂದದೇ ಇರುವುದರಿಂದ ಈ ಭಾಗದ ಜನ ರೋಸಿ ಹೋಗಿದ್ದರು. ಅದರಲ್ಲೂ ಈ ರಸ್ತೆಯ ಅಡ್ತಲೆ ಯಿಂದ ಅರಂತೋಡು ವರೆಗಿನ ರಸ್ತೆಯ ಅಗಲ ಅತ್ಯಂತ ಕಿರಿದಾಗಿರುವುದು ಮಾತ್ರವಲ್ಲದೆ ಅನೇಕ ಅಪಾಯಕಾರಿ ತಿರುವುಗಳಿಂದ ಕೂಡಿದ್ದು ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಕಾಲ್ನಡಿಗೆಯಲ್ಲಿ ತೆರಳುವವರಿಗಂತೂ ವಾಹನಗಳು ಬಂದಾಗ ಜೀವ ಭಯ ಕಾಡುತ್ತದೆ. ಅಡ್ತಲೆ -ಅರಂತೋಡು ಮದ್ಯೆ ಸುಮಾರು ೪.೫ ಕಿಲೋಮೀಟರ್ ರಸ್ತೆ ಅಗಲೀಕರಣ ಈ ವೇದಿಕೆಯ ಪ್ರಮುಖ ಬೇಡಿಕೆಗಳಲ್ಲಿ ಒಂದು.

ಇನ್ನೊಂದು ಈ ಭಾಗದ ನೆಟ್ವರ್ಕ್ ಸಮಸ್ಯೆ. ಸರಕಾರಿ ಸ್ವಾಮ್ಯದ ಬಿಎಸ್.ಎನ್.ಎಲ್ ಟವರ್ ನಿರ್ಮಾಣವಾಗಿ ೨ ವರ್ಷ ೬ ತಿಂಗಳು ಕಳೆದಿದ್ದರೂ ಇದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಇಲ್ಲಿ ೬ ತಿಂಗಳ ಹಿಂದೆ ಸೇವೆ ನೀಡಲು ಆರಂಭಿಸಿದ ಜಿಯೋ ನೆಟ್ವರ್ಕ್ ಕೂಡಾ ಈಗ ಜೀವ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಪ್ರಾರಂಭದಲ್ಲಿ ಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ದೊರಕುತ್ತಿದ್ದ ನೆಟ್ವರ್ಕ್ ಇತ್ತೀಚಿಗೆ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ದೊರಕುತ್ತಿದೆ. ಅದೂ ಕೂಡಾ ತುಂಬಾ ಸ್ಲೋ. ಬೆದ್ರುಪಣೆ, ನೆಕ್ಕರೆ, ಅರಮನೆಗಯ, ಚೀಮಾಡು, ಓಟೆಡ್ಕ, ಕಿರ್ಲಾಯ, ಚುಕ್ರಡ್ಕ ಹಾಗೂ ಚೋಡಿಪಣೆ ಪ್ರದೇಶಗಳಿಗೆ ಇನ್ನೂ ನೆಟ್ವರ್ಕ್ ಭಾಗ್ಯ ಲಭಿಸಿಲ್ಲ. ಕೊರೋನ ಕಾರಣದಿಂದ ಶಾಲೆಗಳು ಮುಚ್ಚಿದ್ದು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಇಲ್ಲಿನ ನೆಟ್ವರ್ಕ್ ಸಮಸ್ಯೆಯಿಂದ ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿದ್ದಾರೆ.


ಈ ಎರಡೂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿದಿನಗಳಿಗೆ ಹಲವಾರು ಬಾರಿ ಮನವಿ ಮಾಡಿಯೂ ಯಾವುದೇ ಫಲ ಕಾಣದ ಕಾರಣ ಜನ ಸಂಘಟಿತ ಹೋರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.